ಶಾಲೆ, ವಿಶ್ವವಿದ್ಯಾಲಯಗಳ ಸಮವಸ್ತ್ರವಿರುವಾಗ ಅದನ್ನು ನಿರಾಕರಿಸಿ ಧಾರ್ಮಿಕ ವೇಶಭೂಷಣವನ್ನು ಧರಿಸಲು ಮತಾಂದರ ಬೇಡಿಕೆ ನಿಯಮಬಾಹಿರವಾಗಿದೆ. ಅದಕ್ಕೆ ಒಂದು ವೇಳೆ ಹಿಂದೂ ವಿದ್ಯಾರ್ಥಿಗಳು ಪ್ರತಿಕ್ರಿಯೆಯ ರೂಪದಲ್ಲಿ ಕೇಸರಿ ಶಾಲನ್ನು ಧರಿಸುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ?
ಸೌಜನ್ಯ : twitter
ಉಡುಪಿ – ಇಲ್ಲಿಯ ಕುಂದಾಪೂರ ಸರಕಾರಿ ವಿಶ್ವವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಶ್ವವಿದ್ಯಾಲಯದ ೧೦೦ ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲನ್ನು ಹಾಕಿಕೊಂಡು ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು.
ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ.https://t.co/A8uJbIJpP9#Controversy #KundapurCollege #HijabControversy #udupicollege#hijabinclassroom #collegehijabcontroversy
— Udayavani (@udayavani_web) February 2, 2022
‘ಒಂದು ವೇಳೆ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಲು ಅನುಮತಿ ಕೋರುತ್ತಿದ್ದರೆ, ನಾವೂ ಕೂಡ ಕೇಸರಿ ಶಾಲನ್ನು ಧರಿಸಿಕೊಂಡು ಏಕೆ ಬರಬಾರದು ? ಎಲ್ಲಿಯವರೆಗೆ ವಿಶ್ವವಿದ್ಯಾಲಯದಲ್ಲಿ ಹಿಜಾಬ ಧರಿಸಲು ನಿಷೇಧಿಸುವುದಿಲ್ಲವೋ, ಅಲ್ಲಿಯವರೆಗೆ ನಾವೂ ಕೇಸರಿ ಶಾಲನ್ನು ಧರಿಸಿಕೊಂಡು ಬರುತ್ತೇವೆ’, ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.
Hijab row at another Karnataka college: Students turn up with saffron scarves protesting against Muslim girls wearing Hijab in classroomhttps://t.co/u8ayoKEC6R
— OpIndia.com (@OpIndia_com) February 3, 2022
ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ ಅವರು ಮಾತನಾಡುತ್ತಾ, ಒಂದು ವೇಳೆ ಸಮವಸ್ತ್ರ ನಿರಾಕರಿಸಿ ಹಿಜಾಬ ಧರಿಸುವ ಹಠ ಮಾಡುತ್ತಿದ್ದರೆ, ಇದು ಭಯೋತ್ಪಾದಕ ಮಾನಸಿಕತೆಯಾಗಿದೆ. ಇಂತಹ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದಿಂದ ಹೊರದೂಡಬೇಕು ಎಂದು ಹೇಳಿದರು.