ಅಕಬರ ಮತ್ತು ಟಿಪ್ಪು ಸುಲ್ತಾನ್ ಇವರ ಚಿತ್ರಗಳನ್ನು ಸಂವಿಧಾನದಿಂದ ತೆಗೆಯುವಂತೆ ಒತ್ತಾಯಿಸಿದ ಅಜಯಸಿಂಹ ಸೆಂಗರ್ ಇವರ ಮೇಲೆ ದೇಶದ್ರೋಹದ ಆರೋಪ ದಾಖಲು !

ಭಾರತವನ್ನು ವಿಭಜಿಸಿ ಮೊಗಲಿಸ್ತಾನ ಮಾಡುವಂತೆ ಮತಾಂಧರಿಂದ ಒತ್ತಾಯಿಸಲಾಗುತ್ತದೆ ಹಾಗೂ ಅವರಿಂದ ಹಿಂದೂಗಳನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ನೀಡಲಾಗುತ್ತದೆ. ಇದರ ವಿರುದ್ಧ ಅಪರಾಧ ದಾಖಲಿಸಿ ಸಂಬಂಧಿತರ ಮೇಲೆ ಕ್ರಮಕೈಗೊಳ್ಳುವ ಧೈರ್ಯ ಪೊಲೀಸರು ಯಾವಾಗ ತೋರುವರು ? – ಸಂಪಾದಕರು

ಮಹಾರಾಷ್ಟ್ರ ಕರಣಿ ಸೇನಾ ಮುಖಂಡ ಅಜಯಸಿಂಹ ಸೆಂಗರ್

ಮುಂಬಯಿ – ಅಕಬರ ಮತ್ತು ಟಿಪ್ಪು ಸುಲ್ತಾನ್ ಇವರ ಚಿತ್ರಗಳನ್ನು ಸಂವಿಧಾನದಿಂದ ತೆಗೆಯುವಂತೆ ಒತ್ತಾಯಿಸಿದ ಮಹಾರಾಷ್ಟ್ರ ಕರಣಿ ಸೇನಾ ಮುಖಂಡ ಅಜಯ್ ಸಿಂಹ ಸೇಂಗರ್ ಇವರ ಮೇಲೆ ರಾಷ್ಟ್ರ ಪ್ರತಿಷ್ಠೆಯ ಅವಮಾನವಾಗಿದೆ ಎಂದು 1971 ರ ಕಾಯಿದೆಯ 2 ರ ಪ್ರಕಾರ ಖಾಂದೆಶ್ವರ ಪೊಲೀಸರು ದೂರನ್ನು ದಾಖಲಿಸಿದ್ದಾರೆ.

ದೇಶವು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಾ ಪ್ರತಾಪ ಇವರ ಮಾರ್ಗದಲ್ಲಿ ಹೋಗಬೇಕು, ಅದಕ್ಕಾಗಿ ಈ ಚಿತ್ರಗಳನ್ನು ತೆಗೆಯಬೇಕು ಇಲ್ಲವಾದರೆ ದೇಶದಲ್ಲಿ ಹೊಸ ಸಂವಿಧಾನ ಅಸ್ತಿತ್ವಕ್ಕೆ ತರಬೇಕು, ಎಂದು ಅಜಯ್‍ಸಿಂಹ ಸೆಂಗರ ಇವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಇವರಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ. ಅದರ ನಂತರ ಪ್ರಭಾಕರ್ ಕಾಂಬಳೆ ಇವರು ನವಿ ಮುಂಬಯಿಯಲ್ಲಿ ಖಾಂದೇಶ್ವರ ಪೊಲೀಸ್ ಠಾಣೆಯಲ್ಲಿ ಈ ಸಂದರ್ಭದಲ್ಲಿ ದೇಶದ್ರೋಹದ ಅಡಿಯಲ್ಲಿ ಅಪರಾಧವನ್ನು ದಾಖಲಿಸುವಂತೆ ದೂರನ್ನು ನೀಡಿದ್ದರು.