ಅನಧಿಕೃತ ಪ್ರಾರ್ಥನಾ ಸ್ಥಳಕ್ಕೆ ಅವಕಾಶ ನೀಡಿದವರ ಮೇಲೆ ಕ್ರಮಕೈಗೊಳ್ಳಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ !
ಬೆಂಗಳೂರು – ದಕ್ಷಿಣ ವೆಸ್ಟರ್ನ ರೈಲ್ವೆ ವಿಭಾಗ, ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದ ಪ್ಲ್ಯಾಟ್ ನಂ ೫ ರಲ್ಲಿ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಮುಸಲ್ಮಾನರು, ಅವರ ಪ್ರಾರ್ಥನಾಸ್ಥಳವನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ರಾಷ್ಟ್ರೀಯ ಭದ್ರತೆ, ಸುರಕ್ಷತೆಯ ದೃಷ್ಠಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣವು ರಾಜ್ಯದ ಬಹು ಮಹತ್ವದ ರೈಲು ನಿಲ್ದಾಣವಾಗಿದೆ. ಬೆಂಗಳೂರು ರೈಲು ನಿಲ್ದಾಣದ ಹೊರಗೆ ಪ್ರಾರ್ಥನೆ ಮಾಡಲು ಹಲವಾರು ಮಸೀದಿಗಳು ಇರುವಾಗಲೂ ಸಹ ರೈಲು ನಿಲ್ದಾಣದ ಪ್ಲ್ಯಾಟ್‌ಫಾರ್ಮ ಮೇಲೆ ಪ್ರಾರ್ಥನೆಗೆ ಅವಕಾಶ ನೀಡಿರುವುದು ಒಂದು ಷಡ್ಯಂತ್ರ್ಯವಾಗಿದೆ.
Today Hindu Janajagruti Samiti and Pro Hindu organisation memorandom submitted to south western railway divisional manager to remove illegal masjid in which constructed in platform no 5 KSR railway station, Bengaluru.@RituRathaur@drmsbc@AshwiniVaishnaw @RailMinIndia @SWRRLY pic.twitter.com/0ZtEZt78Tw
— 🚩Mohan gowda🇮🇳 (@Mohan_HJS) January 31, 2022
ಇಂದು ಪ್ರಾರ್ಥನಾಸ್ಥಳ ಮಾಡಿ, ನಾಳೆ ಅದನ್ನೇ ಮಸೀದಿಯನ್ನಾಗಿ ಮಾರ್ಪಾಡು ಮಾಡುವ ಸಾಧ್ಯತೆ ಇದೆ. ಹಾಗಾಗಿ ಅನಧಿಕೃತ ಪ್ರಾರ್ಥನಾಸ್ಥಳಕ್ಕೆ ಅವಕಾಶ ನೀಡಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಇವರು ಆಗ್ರಹಿಸಿದರು. ಅವರು ಈ ಸಂದರ್ಭದಲ್ಲಿ ಸಮಿತಿಯ ಸಹಿತ ಭಜರಂಗದಳ, ರಾಷ್ಟ್ರ ರಕ್ಷಣಾ ಪಡೆ, ಹಿಂದೂ ಮಹಾಸಭಾ ಹಾಗೂ ವಿಶ್ವ ಹಿಂದೂ ಪರಿಷದ್ ವತಿಯಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆಡಳಿತ ಅಧಿಕಾರಿಗಳಿಗೆ ಮನವಿ ನೀಡಿದರು.
(ಸೌಜನ್ಯ : HJS Karnataka)
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಗೌಡ ಇವರು, ‘ಈಗಾಗಲೇ ಬೆಂಗಳೂರು ಭಯೋತ್ಪಾದಕರ ಆಶ್ರಯ ತಾಣವೆನಿಸಿದೆ. ೨೦೧೮ ರಲ್ಲಿ ರಾಷ್ಟ್ರೀಯ ತನಿಖಾದಳವು ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪಶ್ಚಿಮ ಬಂಗಾಳದ ಮೂಲದ ಭಯೋತ್ಪಾದಕ ಆದಿಲ್ ಅಸದುಲ್ಲಾನನ್ನು ಬಂಧಿಸಿತ್ತು. ೨೦೧೯ ರಲ್ಲಿ ಇದೇ ಮ್ಯಾಜೆಸ್ಟಿಕ್ ಏರಿಯಾದಲ್ಲಿ ಕೇಂದ್ರ ಅಪರಾಧ ವಿಭಾಗದ ಪೋಲಿಸ್ ಅಧಿಕಾರಿಗಳು ಮಹಮ್ಮದ್ ಅಕ್ರಮ ಎನ್ನುವ ಭಯೋತ್ಪಾದಕನನ್ನು ಬಂಧಿಸಿದ್ದರು. ಬೆಂಗಳೂರಿನ ಕಾಟನಪೇಟೆ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಾಹಿದ್ದಿನ್ ಸಂಘಟನೆಯ ಸದಸ್ಯನನ್ನು ೨೦೨೦ ರಲ್ಲಿ ಪೊಲೀಸರು ಬಂಧಿಸಿದ್ದರು.
(ಸೌಜನ್ಯ : Dighvijay 24X7 News)
ಹೀಗಿದ್ದರೂ ರೈಲು ನಿಲ್ದಾಣದ ಪ್ಯಾಟ್‌ಫಾರ್ಮದಲ್ಲಿ ಅನ್ಯಮತೀಯರ ಪ್ರಾರ್ಥನಾಸ್ಥಳಕ್ಕೆ ಅವಕಾಶ ಮಾಡಿ ಕೊಡುವುದು ಎಷ್ಟು ಸೂಕ್ತ ? ಕೂಡಲೇ ಅಲ್ಲಿನ ಅನಧಿಕೃತ ಪ್ರಾರ್ಥನಾಸ್ಥಳ ಮಾಡಲು ಅವಕಾಶ ನೀಡಿದವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಅಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬಾರದು, ಅದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು.