ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಬರಹಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾ ಅಮಾನತು !

* ಹಿಂದೂ ಸಂತರ ಬಗ್ಗೆ ಅವಹೇಳನಕಾರಿ ಬರಹಗಳನ್ನು ತಡೆಯಲು ಸರಕಾರ ಧರ್ಮನಿಂದನೆ ತಡೆ ಕಾನೂನನ್ನು ಜಾರಿಗೊಳಿಸುವುದು ಅಗತ್ಯವಾಗಿದೆ !- ಸಂಪಾದಕರು 

* ಸ್ವಾಮಿ ವಿವೇಕಾನಂದರನ್ನು ಅವಮಾನಿಸಿದ ಮತಾಂಧ ಸನಾವುಲ್ಲಾರನ್ನು ಅಮಾನತುಗೊಳಿಸುವುದು ಮಾತ್ರವಲ್ಲದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !- ಸಂಪಾದಕರು 

ಶಿಕ್ಷಣಾಧಿಕಾರಿ ಸನಾವುಲ್ಲಾ

ರಾಯಚೂರು – ರಾಯಚೂರು ಜಿಲ್ಲೆಯ ಲಿಂಗಸುಗೂರು ಇಲ್ಲಿನ ಸಹಶಿಕ್ಷಕ ಸನಾವುಲ್ಲಾ ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಲೇಖನಗಳನ್ನು ಬರೆದು ಅದನ್ನು ಸರಕಾರಿ ಮತ್ತು ಅನುದಾನಿತ ಶಾಲೆಗಳ `ವಾಟ್ಸ್.ಆ್ಯಪ್’ ಗ್ರೂಪ್‍ಗಳಲ್ಲಿ ಹಾಕಿದ್ದಾರೆ.

ಈ ಪ್ರಕರಣದಲ್ಲಿ ರಾಯಚೂರು ಜಿಲ್ಲಾ ಸಾರ್ವಜನಿಕ ಮಾಹಿತಿ ಉಪನಿರ್ದೇಶಕ ವೃಷಭೇಂದ್ರಯ್ಯ ಇವರು ಸನಾವುಲ್ಲಾ ಅವರನ್ನು ಅಮಾನತುಗೊಳಿಸಿದ್ದಾರೆ. ಜನವರಿ 12 ರಂದು ನಡೆದ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನದಂದು ಸನಾವುಲ್ಲಾನು ಅವರ ಜೀವನದ ಕುರಿತು ಅವಹೇಳನಕಾರಿ ಲೇಖನ ಪ್ರಕಟಿಸಿದ್ದರು.