ಕೊಲಕಾತಾ (ಬಂಗಾಲ) – ಗಾಂಧಿಯವರ ಅಹಿಂಸಾತ್ಮಕ ಆಂದೋಲನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಬದಲಾಗಿ ಆಜಾದ್ ಹಿಂದ ಸೇನೆ ಮತ್ತು ನೇತಾಜಿ ಸುಭಾಷ ಚಂದ್ರ ಬೋಸ ಅವರ ಸೈನ್ಯದ ಕಾರ್ಯಾಚರಣೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂಗ್ಲೆಂಡಿನ ಆಗಿನ ಪ್ರಧಾನಿ ಕ್ಲೇಮೆಂಟ್ ರಿಚರ್ಡ್ ಆಟಲಿ ಇವರು ಈ ವಿಷಯ ಒಪ್ಪಿಕೊಂಡಿದ್ದರು, ಎಂದು ನೇತಾಜಿ ಬೋಸ ಇವರ ಸೋದರಳಿಯ ಅರ್ಧೆಂದು ಬೋಸ ಇವರು ‘ಎ.ಎನ್.ಐ.’ ಈ ವಾರ್ತಾ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಮಾಹಿತಿ ನೀಡಿದರು.
Netaji, Azad Hind Fauj brought independence to India, affirms Subhas Chandra Bose’s nephew https://t.co/L5QiPztitN
— Republic (@republic) January 23, 2022
೧. ಈ ಮೊದಲು ನೇತಾಜಿ ಬೋಸ ಇವರ ಪುತ್ರಿ ಅನಿತಾ ಬೋಸ ಇವರು ‘ಜಿ ನ್ಯೂಸ್’ಗೆ ನೀಡಿದ್ದ ಸಂದರ್ಶನದಲ್ಲಿ, ಭಾರತವು ನನ್ನ ತಂದೆಯ ಜೊತೆಗೆ ತಪ್ಪಾಗಿ ವರ್ತಿಸಿದ್ದಾರೆ. ನನ್ನ ತಂದೆ ಒಬ್ಬ ಧರ್ಮನಿಷ್ಠ ಹಿಂದೂ ಆಗಿದ್ದರು ಮತ್ತು ಧರ್ಮದ ಹೆಸರಿನಲ್ಲಿ ಜನರ ಹತ್ಯೆ ಮಾಡುವವರಾಗಿರಲಿಲ್ಲ. ಗಾಂಧಿಯವರಿಂದಾಗಿ ಆದ ವಿಭಜನೆಯ ಸಮಯದಲ್ಲಿ ಜನರ ಹತ್ಯೆ ಆಯಿತು ಎಂದು ಹೇಳಿದ್ದರು.
೨. ಅನಿತಾ ಬೋಸ ತಮ್ಮ ಮಾತನ್ನು ಮುಂದುವರೆಸುತ್ತಾ, ನನ್ನ ತಂದೆ ಬಂಡಾಯ ವೃತ್ತಿಯವರಾಗಿದ್ದರು. ಆದ್ದರಿಂದ ಗಾಂಧಿಜಿಯವರಿಗೆ ಅವರ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ಸಿನ ಒಂದು ಗುಂಪು ನೇತಾಜಿಯ ವಿರೋಧದಲ್ಲಿ ಕೆಲಸ ಮಾಡಿದರು, ಅವರ ಸಹಚರರು ನಿಂದಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಇತರ ಸ್ವಾತಂತ್ರ್ಯ ಸೈನಿಕರಗೆ ಹೇಗೆ ಸರಕಾರದಿಂದ ಲಾಭ ನೀಡಲಾಯಿತೋ, ಹಾಗೆ ನೇತಾಜಿ ಬೋಸ ಇವರ ಸಹಕಾರಿಗಳಿಗೆ ನೀಡಲಿಲ್ಲ ಎಂದು ಹೇಳಿದರು.