ಸೂರತನಲ್ಲಿ ‘ಲ್ಯಾಂಡ ಜಿಹಾದ’
ಸೂರತ(ಗುಜರಾತ) – ಸೂರತನ ಕಾಂಗ್ರೆಸ್ಸಿನ ನಗರಸೇವಕ ಅಸ್ಲಮ್ ಸಾಯಕಲವಾಲಾ ಇವರು ಫೇಸಬುಕ್ ಪೋಸ್ಟ ಮೂಲಕ ‘ಶಿವಶಕ್ತಿ ಸೊಸಾಯಟಿ’ಯ ಒಂದು ಕಟ್ಟಡದಲ್ಲಿ ನಮಾಜ ನಡೆಯುತ್ತಿದ್ದು ಅದು ವಕ್ಫ ಬೋರ್ಡನ ಆಸ್ತಿಯಾಗಿರುವುದರಿಂದ ಅದು ಮಸೀದಿಯಾಗಿದೆ’, ಎಂದು ಹೇಳಿದ್ದಾರೆ. ನಮಾಜ ಮಾಡುತ್ತಿರುವ ಕಟ್ಟಡ ಸೂರತನಲ್ಲಿರುವ ಚಾರುಯಸಿ ತಾಲೂಕಿನ ಕಂಥಾ ಪ್ರದೇಶದಲ್ಲಿರುವ ಹಜೀರಾ ಹತ್ತಿರವಿದೆ.
೧. ‘ಆ ಕಟ್ಟಡದಲ್ಲಿ ಮಸೀದಿಯಿರುವ ಕಾರಣ ಮುಸಲ್ಮಾನರಿಗೆ ಅದು ಪವಿತ್ರ ಸ್ಥಳವಾಗಿದೆ. ಕೊರೊನಾ ನಿಯಮಗಳಿಂದ ಮುಸಲ್ಮಾನರಿಗೆ ಈ ಸ್ಥಳದಲ್ಲಿ ನಮಾಜ ಮಾಡುವ ಅನುಮತಿ ಸಿಗುವುದು, ಎಂದು ಇಚ್ಛಾಪೂರ ಪೊಲೀಸ ಠಾಣೆಯಲ್ಲಿ ಸಮ್ಮತಿ ದೊರಕಿತ್ತು’, ಎಂದು ಅಸ್ಲಮ್ ಹೇಳಿದ್ದಾರೆ.
೨. ಈಗ ಈ ಪರಿಸರದಲ್ಲಿರುವ ಎಲ್ಲ ಮುಸಲ್ಮಾನರು ಈ ಸ್ಥಳದಲ್ಲಿ ನಮಾಜ ಮಾಡುತ್ತಾರೆ. ಈ ಫೇಸಬುಕ್ ಪೋಸ್ಟನಲ್ಲಿ, ಪೊಲಿಸ ನಿರೀಕ್ಷಕ ಮತ್ತು ಉಪಪೊಲಿಸ ನಿರೀಕ್ಷಕ ಇವರ ಉಪಸ್ಥಿತಿಯಲ್ಲಿ ಒಂದು ಸಭೆಯನ್ನು ನಡೆಸಲಾಯಿತು. ಇದರಲ್ಲಿ ಮುಸಲ್ಮಾನ ಮುಖಂಡರೊಂದಿಗೆ ಮೊರಾ ಗ್ರಾಮದ ಕೆಲವು ಗಣ್ಯ ನಾಗರಿಕರೂ ಉಪಸ್ಥಿತರಿದ್ದರು.
सूरत की सोसाइटी में खड़ी हो गई ‘मस्जिद’, होने लगा नमाज: ‘वक्फ’ के नाम पर संपत्ति ट्रांसफर का खेल, किसी की अनुमति की ज़रूरत नहीं
बता रही हैं @nirwamehta कि कैसे वक्फ के नाम संपत्ति रजिस्टर कर के उसे मस्जिद/मदरसा बना दिया जाता है और नमाज होने लगती है।https://t.co/c4UOalrLKG
— ऑपइंडिया (@OpIndia_in) January 23, 2022
ವಕ್ಫ ಬೋರ್ಡ ಅನಧಿಕೃತವಾಗಿ ಸರಕಾರಿ, ಅರೆಸರಕಾರಿ ಮತ್ತು ಖಾಸಗಿ ಸಂಪತ್ತನ್ನು ವಶಕ್ಕೆ ಪಡೆಯುತ್ತಿದೆ ! – ‘ಏಕತಾ ಏಜ ಲಕ್ಷ್ಯ’ ಸಾಮಾಜಿಕ ಸಂಸ್ಥೆ
ಜನೇವರಿ ೨೦೨೨ ರ ಪ್ರಾರಂಭದಲ್ಲಿ ಗಾಂಧಿನಗರದ ‘ಏಕತಾ ಏಜ ಲಕ್ಷ್ಯ’ ಸಂಸ್ಥೆಯು ೩೩ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಸ್ಥರಿಗೆ ಒಂದು ಪತ್ರವನ್ನು ಬರೆದು ವಕ್ಫ ಬೋರ್ಡ ವಿಸರ್ಜಿಸುವಂತೆ ವಿನಂತಿಸಿದೆ.
೧. ಸಂಸ್ಥೆಯನುಸಾರ ವಕ್ಫ ಬೋರ್ಡ ಅನಧಿಕೃತವಾಗಿ ಸರಕಾರಿ, ಅರೆಸರಕಾರಿ ಮತ್ತು ಖಾಸಗಿ ಸಂಪತ್ತನ್ನು ತನ್ನ ವಶಕ್ಕೆ ಪಡೆಯುತ್ತಿದೆ. (ಒಂದು ಸಾಮಾಜಿಕ ಸಂಸ್ಥೆಯ ಗಮನಕ್ಕೆ ಬರುತ್ತದೆಯೋ, ಅದು ಪೊಲಿಸ ಇಲಾಖೆ ಮತ್ತು ಸರಕಾರದ ಗಮನಕ್ಕೆ ಏಕೆ ಬರುವುದಿಲ್ಲ ? ಸರಕಾರ ಮಲಗಿದೆಯೇ ? – ಸಂಪಾದಕರು) ಇದಕ್ಕಾಗಿ ‘ವಕ್ಫ ಆಕ್ಟ ೧೯೯೫’ ರ ನಿಯಮ ಕಾನೂನಿನ ಉಲ್ಲಂಘಿಸುತ್ತಾರೆ. ಈ ಕಾನೂನಿನಲ್ಲಿ ಕೇವಲ ಒಂದು ಸಮುದಾಯದಲ್ಲಿ ನಿಯಮಗಳನ್ನು ಮಾಡಲಾಗಿದೆ. ಆದ್ದರಿಂದ ಇದು ಭಾರತೀಯ ಸಂವಿಧಾನದ ಸರ್ವಧರ್ಮಸಮಭಾವ ಈ ವಿಚಾರ ಸರಣಿಯ ವಿರುದ್ಧವಾಗಿದೆ.
೨. ಜುಲೈ ೨೦೨೦ ವರೆಗೆ ವಕ್ಫ ಬೋರ್ಡ ಹತ್ತಿರ ೬ ಲಕ್ಷ ೫೯ ಸಾವಿರದ ೮೭೭ ಸ್ಥಿರಾಸ್ತಿಯಿದ್ದು, ಅದರ ಕ್ಷೇತ್ರ ೮ ಲಕ್ಷ ಹೆಕ್ಟರ ಆಗಿದೆ ಮತ್ತು ಅದರ ಮೇಲೆ ವಕ್ಫ ಬೋರ್ಡ ನೊಂದಣಿಯಿದೆ. ಇದು ದೇಶವ್ಯಾಪಿ ಷಡ್ಯಂತ್ರವಾಗಿದೆ. ಆದ್ದರಿಂದ ಇಂತಹ ಭೇದಭಾವವಿರುವ ನಿಯಮ ಕಾನೂನು ಬದಲಾಯಿಸ ಬೇಕಾಗಿದೆ. ಸೂರತ ಮತ್ತು ಆ ಪರಿಸರದ ಗ್ರಾಮೀಣ ಭಾಗದ ಸಂಪತ್ತು ದೊಡ್ಡ ಪ್ರಮಾಣದಲ್ಲಿ ವಕ್ಫ ಬೋರ್ಡಗೆ ಹಸ್ತಾಂತರಿತಗೊಳಿಸಲಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
೩. ‘ವಕ್ಫ’ ಎಂದರೆ, ಯಾವುದೇ ಮುಸಲ್ಮಾನನು ತನ್ನ ಆಸ್ತಿ ಇಸ್ಲಾಂ ಕಾರ್ಯಕ್ಕಾಗಿ ದಾನ ಮಾಡುವುದು ಮತ್ತು ಅದು ಇಸ್ಲಾಂ ಕಾನೂನಿನನ್ವಯ ಪುಣ್ಯದ ಕೆಲಸವಾಗಿದೆ. ಇದೊಂದು ರೀತಿಯ ‘ಇಸ್ಲಾಮಿ ಚಾರಿಟಿ’ ಆಗಿದೆ. ಅದಕ್ಕನುಗುಣವಾಗಿ ಬೋರ್ಡನೊಂದಿಗೆ ನೊಂದಾಯಿಸಲ್ಪಟ್ಟಿರುವ ಆಸ್ತಿ ‘ವಕ್ಫ’ (ದಾನ) ಆಗುತ್ತದೆ. ಇದರಂತೆ ‘ಶಿವಶಕ್ತಿ ಸೊಸಾಯಟಿ’ಯ ಕೆಲವು ಭೂಭಾಗ ಮುಸಲ್ಮಾನರಿಗೆ ಮಾರಾಟ ಮಾಡಲಾಗಿತ್ತು. ಅದರಲ್ಲಿ ಒಂದು ಭೂಪ್ರದೇಶದ ಮೇಲೆ ಕಟ್ಟಡವನ್ನು ಕಟ್ಟಲಾಗಿತ್ತು ಮತ್ತು ಅಲ್ಲಿಯೇ ನಮಾಜ ನಡೆಯುತ್ತಿದೆ.
೪. ೨೦೨೦ರಲ್ಲಿ ಮೊದಲ ಕೊರೊನಾ ಅಲೆಯ ಸಮಯದಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿಯು ತನ್ನ ಆಸ್ತಿಯನ್ನು ವಕ್ಫ ಹೆಸರಿಗೆ ಮಾಡಿದ್ದನು. ಆ ಸ್ಥಳದಲ್ಲಿ ಮಶೀದಿ ಅಥವಾ ಮದರಸಾ ರೂಪದಲ್ಲಿ ನೊಂದಣಿ ಮಾಡಿ ಅಲ್ಲಿ ನಮಾಜ ಆಗತೊಡಗಿತು. ಯಾರು ಬೇಕಾದರೂ ತಮ್ಮ ಆಸ್ತಿಯನ್ನು ‘ವಕ್ಫ’ದು ಆಗಿದೆಯೆಂದು ಹೇಳಿ ಅದನ್ನು ಈ ರೀತಿ ನೊಂದಣಿ ಮಾಡಬಹುದು. ಅದಕ್ಕೆ ಅಕ್ಕಪಕ್ಕದವರು ಏನೂ ಮಾಡಲು ಸಾಧ್ಯವಿಲ್ಲ.
೫. ಒಬ್ಬ ಕಾನೂನು ತಜ್ಞರು ಒಂದು ವಾರ್ತಾ ಜಾಲತಾಣಕ್ಕೆ, ವಕ್ಫನಲ್ಲಿ ಸಂಪತ್ತಿನ ನೊಂದಣಿ ಮಾಡಲು ಯಾರ ಅನುಮತಿಯ ಅವಶ್ಯಕತೆಯಿರುವುದಿಲ್ಲ. ಇದು ಒಮ್ಮುಖದ ನಿರ್ಣಯವಾಗಿರುತ್ತದೆ. ಸಾಮಾನ್ಯವಾಗಿ ನಿಮಗೆ ನಿಮ್ಮ ಸಂಪತ್ತನ್ನು ಹಸ್ತಾಂತರಗೊಳಿಸಬೇಕಾಗಿದ್ದರೆ, ಸೊಸಾಯಟಿಯ ಅಧ್ಯಕ್ಷರು ಅಥವಾ ಸಮಿತಿಯ ಅನುಮತಿ ಆವಶ್ಯಕವಿರುತ್ತದೆ; ಆದರೆ ನಾಳೆ ನಿಮ್ಮ ಮುಸಲ್ಮಾನ ಪಕ್ಕದ ಮನೆಯವರು ತನ್ನ ಮನೆಯನ್ನು ವಕ್ಫಗೆ ನೊಂದಣಿ ಮಾಡಿದರೆ ಮತ್ತು ಅದನ್ನು ಮಸೀದಿ ಎಂದು ಘೋಷಿಸಿದರೆ, ನೀವೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.