ಧರ್ಮಸಂಸತ್ತಿನ ಆಕ್ಷೇಪಾರ್ಹ ಹೇಳಿಕೆಯ ಮೇಲೆ ಹಿಂದೂಗಳ ಮಹಂತರ ಮೇಲೆ ಕ್ರಮ ಜರುಗಿಸುವಂತೆ, ದ್ವೇಷಪೂರಿತ ಭಾಷಣಗಳನ್ನು ಮಾಡುವ ಮುಸಲ್ಮಾನ ಮುಖಂಡರ ಮೇಲೆಯೂ ಕ್ರಮ ಜರುಗಿಸಬೇಕು ! -ಹಿಂದೂ ಸೇನೆಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಬೇಡಿಕೆ

ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ ? ಸಂಬಂದಪಟ್ಟ ರಾಜ್ಯದ ಪೊಲಿಸರು ಇಂತಹ ಮುಖಂಡರ ಮೇಲೆ ಏಕೆ ಕ್ರಮವನ್ನು ಜರುಗಿಸುವುದಿಲ್ಲ ? ನ್ಯಾಯಾಲಯವು ಇಂತಹ ಕರ್ತವ್ಯಹೀನ ಪೊಲಿಸರ ಮೇಲೆ ಕ್ರಮ ಜರುಗಿಸುವ ಆದೇಶವನ್ನು ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಜಾತ್ಯತೀತ ಭಾರತದಲ್ಲಿ ಹಿಂದೂಗಳ ಸಂತರು, ಮಹಂತರು ಮತ್ತು ಮುಖಂಡರ ಮೇಲೆ ಶೀಘ್ರ ಕ್ರಮ ಕೈಗೊಳ್ಳುತ್ತಾರೆ; ಆದರೆ ಇತರೆ ಧರ್ಮದವರ ಮುಖಂಡರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ಇದು ಲಜ್ಜಾಸ್ಪದವಾಗಿದೆ !

ನವ ದೆಹಲಿ – ಡಿಸೆಂಬರ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕಾಗಿ ಯತಿ ನರಸಿಂಹಾನಂದ, ಜಿತೇಂದ್ರ ತ್ಯಾಗಿ ಮುಂತಾದವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈಗ ಹಿಂದೂ ಸೇನೆಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ನೀಡಿ ‘ಧರ್ಮಸಂಸತ್ತಿನ ಪ್ರಕರಣದಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ, ದ್ವೇಷಪೂರ್ಣ ಭಾಷಣ ಮಾಡುವ ಮುಸಲ್ಮಾನ ಮುಖಂಡರ ಮೇಲೆಯೂ ಕ್ರಮ ಕೈಗೊಂಡು ಅವರಿಗೆ ಬಂಧಿಸಬೇಕು’, ಎಂದು ಮನವಿ ಸಲ್ಲಿಸಿದೆ. ಇದರೊಂದಿಗೆ ಹಿಂದೂ ಸೇನೆಯನ್ನು ಈ ಪ್ರಕರಣದಲ್ಲಿ ಕಕ್ಷಿದಾರವನ್ನಾಗಿ ಮಾಡಲು ಬೇಡಿಕೆನ್ನು ಈ ಅರ್ಜಿಯ ಮೂಲಕ ಕೋರಲಾಗಿದೆ. ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಇವರು ಸಲ್ಲಿಸಿರುವ ಈ ಅರ್ಜಿಯಲ್ಲಿ ‘ಸಂಸದ ಅಸದುದ್ದೀನ ಓವೈಸಿ, ಮೌಲಾನಾ (ಇಸ್ಲಾಂನ ವಿದ್ವಾನ) ತೌಕೀರ ರಝಾ, ಸಾಜಿದ ರಶೀದಿ, ‘ಆಪ್’ನ ಶಾಸಕ ಅಮಾನತುಲ್ಲಾ ಖಾನ, ಎಮ್.ಐ.ಎಮ್.ನ ಮುಖಂಡ ವಾರಿಸ ಪಠಾಣ ಮುಂತಾದವರ ವಿರುದ್ಧ ದ್ವೇಷದ ಭಾಷಣ ಮಾಡಿರುವ ಬಗ್ಗೆ ದೂರು ದಾಖಲಿಸಲು ಆದೇಶವನ್ನು ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೀಡಬೇಕು’, ಎಂದು ಕೋರಿದ್ದಾರೆ.

ಈ ಅರ್ಜಿಯಲ್ಲಿ,

೧. ಹಿಂದೂಗಳ ಆಧ್ಯಾತ್ಮಿಕ ಮುಖಂಡರು ಧರ್ಮ ಸಂಸತ್ತು ಆಯೋಜಿಸಿರುವುದು, ಇದು ಬೇರೆ ಯಾವುದೇ ಧರ್ಮ ಅಥವಾ ಶ್ರದ್ಧೆಗೆ ವಿರುದ್ಧವಾಗಿದೆ, ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅದನ್ನು ವಿರೋಧಿಸಬಾರದು. ಧರ್ಮಗುರುಗಳ ಹೇಳಿಕೆಯು ಹಿಂದೂ ಸಂಸ್ಕೃತಿ ಮತ್ತು ಸಭ್ಯತೆಯ ಮೇಲೆ ಅಹಿಂದೂ ಸಮುದಾಯದ ಸದಸ್ಯರು ಮಾಡಿರುವ ದಾಳಿಗೆ ಪ್ರತ್ಯುತ್ತರವಾಗಿತ್ತು ಮತ್ತು ಇಂತಹ ಉತ್ತರಗಳನ್ನು ದ್ವೇಷಪೂರ್ಣ ಭಾಷಣದ ಪರಿಧಿಯಲ್ಲಿ ಬರುವುದಿಲ್ಲ. ಎಲ್ಲಿಯವರೆಗೆ ತನಿಖಾಧಿಕಾರಿಗಳಿಂದ ಸವಿಸ್ತಾರವಾದ ವಿಚಾರಣೆ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ಅರ್ಜಿದಾರರು ಆರೋಪಿಸಿರುವಂತೆ ದ್ವೇಷಯುಕ್ತ ಭಾಷಣದ ಶೋಧವನ್ನು ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಹೇಳಿಕೆಯನ್ನು ದ್ವೇಷಯುಕ್ತ ಭಾಷಣವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನದಲ್ಲಿ ಎಲ್ಲ ಧರ್ಮದ ಅನುಯಾಯಿಗಳಿಗೆ ಸಮಾನ ರಕ್ಷಣೆಯನ್ನು ನೀಡಲಾಗಿದೆ.

೨. ಈ ದೇಶದ ಪ್ರತಿಯೊಬ್ಬ ನಾಗರೀಕನಿಗೆ ವಿವೇಕ, ಆಚರಣೆ ಮತ್ತು ಧರ್ಮದ ಪ್ರಸಾರ ಮಾಡುವ ಸ್ವಾತಂತ್ರ್ಯವಿದೆ. ಹಿಂದೂಗಳ ಧರ್ಮಸಂಸತ್ತಿನ ಆಯೋಜನೆ ಭಾರತೀಯ ಸಂವಿಧಾನದ ಮೂಲಕ ಸಂರಕ್ಷಿಸಲ್ಪಟ್ಟಿದೆ. ಆದ್ದರಿಂದ ಅರ್ಜಿದಾರರು ಆಕ್ಷೇಪ ಸಂವಿಧಾನದಲ್ಲಿ ಯೋಜನೆಯ ವಿರುದ್ಧ ಮತ್ತು ಹಿಂದೂಗಳ ಮೂಲಭೂತ ಅಧಿಕಾರಗಳ ಮೇಲೆ ಅತಿಕ್ರಮಣ ಮಾಡಿದಂತೆ ಇದೆ ಎಂದು ಹೇಳಿದೆ.