ಮ್ಯಾಚ್ ಫಿಕ್ಸಿಂಗ್ ವಂಚನೆ ಎನ್ನುವುದು ಅಯೋಗ್ಯ : ಕ್ರಮಕೈಗೊಳ್ಳುವ ಅಧಿಕಾರಿ ಬಿ.ಸಿ.ಸಿ.ಐ.ಗೆ ಇದೆ ! – ಕರ್ನಾಟಕ ಉಚ್ಚ ನ್ಯಾಯಾಲಯ

ಬೆಂಗಳೂರು – ಮ್ಯಾಚ್ ಫಿಕ್ಸಿಂಗ್ ಇದು ಭಾರತೀಯ ಸಂವಿಧಾನದ ೪೨೦ ಕಲಂ ಅಡಿಯಲ್ಲಿ ವಂಚನೆ ಅಲ್ಲ. ಆದ್ದರಿಂದ ಈ ಬಗ್ಗೆ ವಂಚನೆಯ ಆರೋಪದ ಮೇರೆಗೆ ದೂರು ದಾಖಲಿಸಲಾಗುವುದು ಸಾಧ್ಯವಿಲ್ಲ. ಮ್ಯಾಚ್ ಫಿಕ್ಸಿಂಗ್ ವಿಷಯವಾಗಿ ಕ್ರಮಕೈಗೊಳ್ಳುವ ಅಧಿಕಾರ ಕೇವಲ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿ.ಸಿ.ಸಿ.ಐ.ಗೆ) ಇದೆ. ಈ ಬಗ್ಗೆ ೪೨೦ ಕಲಂ ಪ್ರಕಾರ ಅಪರಾಧ ದಾಖಲಿಸಲು ಸಾಧ್ಯವಿಲ್ಲ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಣಯ ನೀಡಿದೆ.

ಬೆಂಗಳೂರು ಪೊಲೀಸರ ಅಪರಾಧಿ ಶಾಖೆಯು ೨೦೧೯ ರಲ್ಲಿ ‘ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-೨೦’ ಕ್ರಿಕೆಟ್ ಪಂದ್ಯದಲ್ಲಿನ ಕ್ರಿಡಾಪಟು ಮತ್ತು ಸಂಘ ವ್ಯವಸ್ಥಾಪನೆ ಸದಸ್ಯರ ವಿರುದ್ಧ ಮಾಡಿರುವ ಭ್ರಷ್ಟಾಚಾರವನ್ನು ಬೆಳಕಿಗೆ ತಂದಿದ್ದರು. ೩ ಕ್ರಿಡಾಪಟುಗಳು ಮತ್ತು ಒಬ್ಬ ಸಂಘದ ಪದಾಧಿಕಾರಿಯ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪದ ದೂರು ನೋಂದಾಯಿಸಲಾಗಿತ್ತು.