ಜಾರ್ಖಂಡನಲ್ಲಿ ನಕ್ಸಲರಿಂದ ದೊಡ್ಡ ಸೇತುವೆ ಮತ್ತು ಸಂಚಾರವಾಣಿಯ ಟವರ್ ಧ್ವಂಸ

ಕಳೆದ ೬ ದಶಕಗಳಿಂದ ನಡೆದಿರುವ ನಕ್ಸಲರ ಅಟ್ಟಹಾಸ ತಡೆಯಲು ಸಾಧ್ಯವಾಗಿಲ್ಲ, ಇದು ಇಲ್ಲಿಯ ವರೆಗಿನ ಎಲ್ಲಾ ಪಕ್ಷದ ಸರಕಾರಗಳಿಗೆ ನಾಚಿಗೇಡಿನ ಸಂಗತಿ !- ಸಂಪಾದಕರು 

ಬಾಂಬ್ ಸಿಡಿಸಿ ದೊಡ್ಡ ಸೇತುವೆಯನ್ನು ಧ್ವಂಸ ಮಾಡಿದ ನಕ್ಸಲರು

ಗಿರಿಡಿಹ (ಜಾರ್ಖಂಡ್) – ಗಿರಿಡಿಹ ಜಿಲ್ಲೆಯ ಬರಾಕರ ನದಿಯ ಮೇಲಿರುವ ದೊಡ್ಡ ಸೇತುವೆ ಮತ್ತು ಒಂದು ಸಂಚಾರವಾಣಿ ಕಂಪನಿಯ ಟವರ್‌ಅನ್ನು ನಕ್ಸಲರು ಮಧ್ಯರಾತ್ರಿ ಬಾಂಬ್ ಸಿಡಿಸಿ ಧ್ವಂಸ ಗೊಳಿಸಿದ್ದಾರೆ. ಇದರಿಂದ ಸೇತುವೆಯ ಒಂದು ಬದಿ ಸಂಪೂರ್ಣವಾಗಿ ಧ್ವಂಸವಾಗಿದೆ. ಪರಿಣಾಮವಾಗಿ ಈ ಪ್ರದೇಶದಲ್ಲಿನ ಸಂಚಾರ ಸ್ತಬ್ಧವಾಗಿದೆ. ನಕ್ಸಲರು ಘಟನಾ ಸ್ಥಳದಿಂದ ಹಿಂತಿರುಗುವ ಮೊದಲು ಅಲ್ಲಿ ಒಂದು ಚೀಟಿಯನ್ನು ಬರೆದು ಇಟ್ಟಿದ್ದಾರೆ. ಅದರಲ್ಲಿ ಬಂಧಿಸಲಾಗಿರುವ ನಕ್ಸಲ ಪ್ರಶಾಂತ ಬೋಸ್ ಮತ್ತು ಅವನ ಪತ್ನಿ ಇವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಹಾಗೂ ೨೧ ರಿಂದ ೨೬ ಜನವರಿಯ ಕಾಲಾವಧಿಯಲ್ಲಿ ನಡೆಯುವ ‘ಪ್ರತೀಕಾರ ಮೋರ್ಚಾ’ ಯಶಸ್ವಿಯಾಗುವ ಬಗ್ಗೆ ಬರೆಯಲಾಗಿದೆ.