ಚಿಕ್ಕಮಗಳೂರು ಜಿಲ್ಲೆಯ ಕಾಳಿ ಮಠದ ಋಷಿ ಕುಮಾರ ಸ್ವಾಮಿಜಿ ಬಂಧನ

ಶ್ರೀರಂಗಪಟ್ಟಣದ ಹನುಮಂತ ಮಂದಿರವನ್ನು ಕೆಡವಿ ಜಾಮಿಯಾ ಮಸೀದಿಯನ್ನು ಕಟ್ಟಿದ್ದರಿಂದ ಮಸೀದಿಯನ್ನು ಕೆಡವಿ ಪುನಃ ದೇವಸ್ಥಾನವನ್ನು ನಿರ್ಮಿಸುವಂತೆ ಕರೆ ನೀಡಿದರೆಂದು ಬಂಧನ !

ತೌಕಿರ ರಜಾ ನಂತಹ ಮೌಲಾನಾ (ಇಸ್ಲಂ ವಿದ್ವಾಂಸ) ಹಿಂದೂಗಳನ್ನು ಕೊಲ್ಲುವ ಹೇಳಿಕೆಯನ್ನು ನೀಡುತ್ತಿದ್ದರೂ ಅವರನ್ನು ಬಂಧಿಸಲಾಗುವುದಿಲ್ಲ; ಆದರೆ ಹಿಂದೂಗಳ ಸಂತರ ಮೇಲೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕೆಡವಿ ಇಸ್ಲಾಮಿ ದಾಳಿಕೋರರು ಅಲ್ಲಿ ಮಸೀದಿಗಳನ್ನು ನಿರ್ಮಿಸಿದರು. ಇಂತಹ ಧಾರ್ಮಿಕ ಸ್ಥಳಗಳನ್ನು ಮತ್ತೆ ಪಡೆದುಕೊಳ್ಳಲು ಹಿಂದೂಗಳು ಕಾನೂನಿನ ಮಾರ್ಗವಾಗಿ ಬೇಡಿಕೆ ಮಾಡುತ್ತಿದ್ದರೆ ಅಲ್ಲಿ ಗಮನ ಹರಿಸಿ ಸರಕಾರವು ಅದನ್ನು ಹಿಂದೂಗಳಿಗೆ ಹಿಂದಿರುಗಿಸಲುಲು ಪ್ರಯತ್ನಿಸುವುದು ಅಗತ್ಯವಾಗಿದೆ !

ಶ್ರೀರಂಗಪಟ್ಟಣ – ಇಲ್ಲಿಯ ಜಾಮಿಯಾ ಮಸೀದಿಯನ್ನು ಕೆಡವಿ ಅಲ್ಲಿ ಪುನಃ ಶ್ರೀ ಹನುಮಂತನ ದೇವಸ್ಥಾನವನ್ನು ನಿರ್ಮಿಸುವಂತೆ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿಯವರನ್ನು ಜನವರಿ ೧೮ ರಂದು ಬಂಧಿಸಲಾಯಿತು. ಋಷಿ ಕುಮಾರ ಸ್ವಾಮೀಜಿಯವರ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಅವರು ಮಸೀದಿಯ ಮುಂದೆ ನಿಂತು, ‘ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದಂತೆಯೇ ಈ ಮಸೀದಿಯನ್ನು ಒಡೆದು ಹನುಮಂತನ ದೇವಸ್ಥಾನವನ್ನು ನಿರ್ಮಿಸಬೇಕು, ಅಲ್ಲಿ ರಾಮ ಮಂದಿರ, ಇಲ್ಲಿ ಹನುಮಂತ ಮಂದಿರ ನಿರ್ಮಾಣಗೊಳ್ಳಬೇಕು. ಈ ಮಸೀದಿಯ ಕಂಬಗಳು ಮತ್ತು ಗೋಡೆಗಳು ಹಿಂದೂ ವಾಸ್ತುಕಲೆಯಂತೆ ಇವೆ. ಹಿಂದೂಗಳು ಮತ್ತು ಅವುಗಳ ಸಂಘಟನೆಗಳು ಈ ಪ್ರಕರಣದಲ್ಲಿ ಒಂದಾಗಿ ಮುಂದೆ ಬರಬೇಕು .’ ಎಂದು ಹೇಳುತ್ತಿರುವುದನ್ನು ತೋರಿಸಲಾಗಿದೆ. ಈ ವಿಡಿಯೊವನ್ನು ವೀಕ್ಷಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವಿಡಿಯೊ ಫೆಸ್‌ಬುಕ್‌ನಲ್ಲಿ ಪ್ರಸಾರವಾಗಿತ್ತು.

ಋಷಿ ಕುಮಾರ ಸ್ವಾಮಿಜಿಯವರನ್ನು ಬಂಧಿಸಿ ಸ್ಥಳಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಸ್ವಾಮಿಜಿಯವರು ನಾನು ನನ್ನ ಹೇಳಿಕೆಗೆ ಬದ್ಧನಿದ್ದೇನೆ ಎಂದು ಹೇಳಿದ್ದಾರೆ. ಋಷಿ ಕುಮಾರ ಸ್ವಾಮಿ ಇವರ ನ್ಯಾಯವಾದಿಯವರು, ಋಷಿ ಕುಮಾರ ಸ್ವಾಮಿಜಿಯವರ ಹೇಳಿಕೆ ವಿವಾದಾತ್ಮಕವಲ್ಲ. ಮಸೀದಿಯಲ್ಲಿ ದೇವಸ್ಥಾನಗಳ ಕುರುಹುಗಳನ್ನು ನೋಡಿ ಮನಸ್ಸಿನ ನೋವು ಹೊರಹಾಕಿದ್ದಾರೆ ಎಂದು ಹೇಳಿದರು.

ಈ ಸಮಯದಲ್ಲಿ ಸರಕಾರಿ ನ್ಯಾಯವಾದಿಯವರು ಋಷಿ ಕುಮಾರ ಸ್ವಾಮಿಜಿಯವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ; ಇದರಿಂದ ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ಬರಬಹುದು, ಹಾಗೂ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಬಹುದು ಎಂದು ಹೇಳಿದರು. ನಂತರ ನ್ಯಾಯಾಲಯವು ಈ ಮೇಲಿನ ಆಲಿಕೆಯನ್ನು ತಡೆಹಿಡಿದಿದೆ.