ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತರಿಗೆ ೯೮ ಕೋಟಿ ರೂಪಾಯಿ ಅನುಮೋದನೆ !

ರಾಜಸ್ಥಾನದಲ್ಲಿ ದುರ್ಬಲ ಹಿಂದೂಗಳ ಹಿತಕ್ಕಾಗಿ ಕಾಂಗ್ರೆಸ್ ಎಷ್ಟು ಯೋಜನೆಗಳು ಅಥವಾ ನಿಧಿಯನ್ನು ಖರ್ಚು ಮಾಡಿದೆ ? ಇದರ ಮಾಹಿತಿ ನೀಡಬೇಕು !
ಅಲ್ಪಸಂಖ್ಯಾತರ ಇಡುಗಂಟಿನ ಮತಕ್ಕಾಗಿ, ಕಾಂಗ್ರೆಸ್ ಅವರ ಮೇಲೆ ಯೋಜನೆಗಳ ಸುರಿಮಳೆಯನ್ನು ಸುರಿಸಿದೆ; ಆದರೆ ದುರ್ಬಲ ಹಿಂದೂಗಳನ್ನು ಕಡೆಗಣಿಸಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿನಿಂದಲೂ ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಯ ನೀತಿಯನ್ನು ಅವಲಂಬಿಸಿತು. ಆದ್ದರಿಂದ ದೇಶಕ್ಕೆ ಹೊಡೆತ ಬಿತ್ತು. ಇಂತಹ ಕಾಂಗ್ರೆಸ್ ಅನ್ನು ರಾಷ್ಟ್ರಪ್ರೇಮಿಗಳು ಚುನಾವಣೆಯ ಮೂಲಕ ಇತಿಹಾಸಕ್ಕೆ ಸೇರಿಸುವುದು ಅಗತ್ಯವಾಗಿದೆ !


ರಾಜಸ್ಥಾನ : ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ ಗಹಲೊತ ಇವರ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ೯೮ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಅವರು ವಿವಿಧ ಯೋಜನೆಗಳೊಂದಿಗೆ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ರಾಜಸ್ಥಾನದ ಮದರಸಾಗಳು ಮತ್ತು ಕಬ್ರಸ್ತಾನಗಳು ಸೇರಿದಂತೆ ಅಲ್ಪಸಂಖ್ಯಾತರ ಶಿಕ್ಷಣ ವಿದ್ಯಾರ್ಥಿವೇತನ ಮತ್ತು ಅನುದಾನಕ್ಕಾಗಿ ಈ ಮೊತ್ತವನ್ನು ಬಳಸಲಾಗುವುದು. ಇದಕ್ಕಾಗಿ ಅಲ್ಪಸಂಖ್ಯಾತರು ಹಲವಾರು ಬಾರಿ ಒತ್ತಾಯಿಸುತ್ತಿದ್ದರು. (ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಮುದ್ದಿಸುತ್ತದೆ, ಆದರೆ ಹಿಂದೂಗಳ ಬೇಡಿಕೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತದೆ! – ಸಂಪಾದಕರು)

ಕಾಂಗ್ರೆಸ್ ಮುಖ್ಯಮಂತ್ರಿ ಗೆಹಲೊತ ಅವರು ಅಲ್ಪಸಂಖ್ಯಾತರಿಗಾಗಿ ಅನುಮೋದಿಸಿದ ಕೆಲವು ಯೋಜನೆಗಳು ಮತ್ತು ಅವರಿಗೆ ನೀಡಲಿರುವ ನಿಧಿಗಳು ಈ ಕೆಳಗಿನಂತಿವೆ –

೧. ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ೪೪ ಕೋಟಿ ರೂಪಾಯಿಗಳು

೨. ಜೈಪುರದಲ್ಲಿ ಅಲ್ಪಸಂಖ್ಯಾತ ಮಕ್ಕಳಿಗಾಗಿ ಆಂಗ್ಲ ವಸತಿ ಶಾಲೆ ಸ್ಥಾಪನೆಗೆ ೨೧ ಕೋಟಿ ೮೦ ಲಕ್ಷ ರೂಪಾಯಿಗಳು

೩. ಅಲ್ಪಸಂಖ್ಯಾತ ರೈತರಿಗೆ ೧೫ ಕೋಟಿ ೪೨ ಲಕ್ಷ ರೂಪಾಯಿಗಳು

೪. ವಕ್ಫ ಬೋರ್ಡ್ ಮಾಲಿಕತ್ವದ ಜಾಗ ಅಥವಾ ಸಾರ್ವಜನಿಕ ಭೂಮಿಯಲ್ಲಿ ಕಬ್ರಸ್ತಾನ, ಮದರಸಾಗಳು ಮತ್ತು ಶಾಲೆಗಳ ನಿರ್ಮಾಣಕ್ಕೆ ೫ ಕೋಟಿ ರೂಪಾಯಿಗಳು

೫. ಅಲ್ಪಸಂಖ್ಯಾತರ ಉದ್ಯೋಗಿಗಳನ್ನಾಗಿಸಲು ಅಂತಾರಾಷ್ಟ್ರೀಯ ಭಾಷೆಗಳ ಶಿಕ್ಷಣಕ್ಕೆ ೨ ಕೋಟಿ ರೂಪಾಯಿಗಳು

ಇದರೊಂದಿಗೆ ಡಾ. ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ೫ ಹುದ್ದೆಗಳನ್ನು ಮತ್ತು ದೌಸಾದ ಸಂಸ್ಕೃತ ಮಹಾವಿದ್ಯಾಲಯದಲ್ಲಿ ೪ ಉಪನ್ಯಾಸಕರ ಹುದ್ದೆಗಳನ್ನು ಸೃಷ್ಟಿಸಲಾಗಿದೆ, ಎಂದು ಮುಖ್ಯಮಂತ್ರಿ ಗೆಹಲೊತ ಇವರು ಮಾಹಿತಿ ನೀಡಿದರು. (ಸಂಸ್ಕೃತದ ಮಹಾವಿದ್ಯಾಲಯಗಳಲ್ಲಿ ಸಂಸ್ಕೃತದಲ್ಲಿ ಪ್ರಭುತ್ವವನ್ನು ಹೊಂದಿರುವ ವಿದ್ವಾಂಸರನ್ನು ನೇಮಿಸುವುದು ಅಗತ್ಯವಾಗಿದೆ. ಆದರೆ, ಕಾಂಗ್ರೆಸ್ ಓಲೈಕೆಗಾಗಿ ಅಲ್ಪಸಂಖ್ಯಾತರನ್ನು ನೇಮಿಸಲು ಯೋಜಿಸುತ್ತಿದೆ ! – ಸಂಪಾದಕರು) ಈ ಹುದ್ದೆಗಳನ್ನು ನಿರ್ಮಿಸುವ ಬಗ್ಗೆ ಅಲ್ಪಸಂಖ್ಯಾತರಿಂದ ಅನೇಕ ದಿನಗಳಿಂದ ಬೇಡಿಕೆಯಿತ್ತ್ತು.