ಜಗತ್ತಿನಾದ್ಯಂತ ಹಿಂದೂ ದೇವತೆಗಳ ಆಗುವ ವಿವಿಧ ಪ್ರಕಾರಗಳ ವಿಡಂಬನೆಯನ್ನು ತಡೆಗಟ್ಟಬೇಕು, ಅದಕ್ಕಾಗಿ ಭಾರತ ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು, ಏಕೈಕ ಪರ್ಯಾಯವಾಗಿದೆ !
ಚಿತ್ತಗ್ರಾಮ(ಬಾಂಗ್ಲಾದೇಶ) – ವಸಂತಪಂಚಮಿಯ ದಿನದಂದು ಭಾರತದೊಂದಿಗೆ ಇತರ ದೇಶಗಳಲ್ಲಿಯೂ ಸರಸ್ವತಿದೇವಿಯನ್ನು ಪೂಜಿಸಲಾಗುತ್ತದೆ. ಬಾಂಗ್ಲಾದೇಶದ ಚಿತ್ತಗ್ರಾಮದಲ್ಲಿ ಸರಸ್ವತಿ ದೇವಿಯ ಪೂಜೆಗಾಗಿ ನಿರ್ಮಿಸಲಾಗಿದ್ದ ೩೫ ದೇವಿಯ ಮೂರ್ತಿಗಳನ್ನು ದುಶ್ಕರ್ಮಿಗಳಿಂದ ರಾತ್ರಿ ಸಮಯದಲ್ಲಿ ಧ್ವಂಸಗೊಳಿಸಿರುವ ಘಟನೆ ಜರುಗಿದೆ. ಸ್ಥಳೀಯ ಮೂರ್ತಿಕಾರ ಬಾಸು ದೇವ ಇವರು ಮೂರ್ತಿಶಾಲೆಯಲ್ಲಿ ಈ ಮೂರ್ತಿಗಳನ್ನು ಇಟ್ಟಿದ್ದರು.
35 Saraswati idols demolished in Bangladesh, but more surprising is…@tbsnewsdotnet don’t know the reason for it !!
… Editor must take leave & study Babur, Ghori, Tughlak history. If not possible.. read Bamiyan Buddha demolition !@abhijitmajumder @tathagata2@KanchanGupta pic.twitter.com/ltog1ztIRv
— 🚩 Ramesh Shinde 🇮🇳 (@Ramesh_hjs) January 16, 2022
ದೇವಿಯ ಮೂರ್ತಿಯ ಶಿರ ಮತ್ತು ಕೈಗಳನ್ನು ಧ್ವಂಸಗೊಳಿಸಲಾಗಿದೆ. ಪೊಲಿಸರು ‘ಈ ಕೃತ್ಯಕ್ಕೆ ವೈಯಕ್ತಿಕ ವೈರತ್ವ ಅಥವಾ ಧಾರ್ಮಿಕ ಕಾರಣ ಇರಬಹುದು’, ಎಂದು ಹೇಳಿದ್ದಾರೆ; ಆದರೆ ಬಾಸು ದೇವ ಅವರಿಗೆ ಯಾರೊಂದಿಗೂ ವೈಯಕ್ತಿಕ ಸ್ತರದಲ್ಲಿ ವೈರತ್ವ ಇಲ್ಲವೆಂದು ಹೇಳಿದ್ದಾರೆ. ಬಾಸು ದೇವ ಮತ್ತು ಅವರ ತಂದೆ ಹರಿಪಾದ ಪಾಲ ಅವರು ಮಾತನಾಡುತ್ತಾ, ನಾವು ಇಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ, ಇಲ್ಲಿಯವರೆಗೆ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ನಮಗೆ ನ್ಯಾಯ ಒದಗಿಸಬೇಕು ಎಂದು ಕೋರಿದ್ದಾರೆ.
ಚಿತ್ರ ಪ್ರಕಟಿಸುವುದರ ಹಿಂದೆ ಯಾವುದೇ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವಾಗಿರದೆ ನಿಜ ಸ್ಥಿತಿಯನ್ನು ತಿಳಿಸುವುದಾಗಿದೆ |