‘ಯೋಗಿ ಆದಿತ್ಯನಾಥ ಸರಕಾರ ಮುಚ್ಚಿರುವ ಕಸಾಯಿಖಾನೆಗಳನ್ನು ಪುನಃ ಪ್ರಾರಂಭಿಸುತ್ತದೆ !’(ಅಂತೆ) – ಮುರಾದಾಬಾದ(ಉತ್ತರಪ್ರದೇಶ) ಕಾಂಗ್ರೆಸ್ ಅಭ್ಯರ್ಥಿಂದ ಮತದಾರರಿಗೆ ಆಮಿಷ

ಕಸಾಯಿಖಾನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆ ಆಗುತ್ತಿದ್ದುದರಿಂದ ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಲಾಗುತ್ತಿದೆ. ಇದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಕಸಾಯಿಖಾನೆಗಳನ್ನು ಪ್ರಾರಂಭಿಸುವ ಆಶ್ವಾಸನೆಯನ್ನು ನೀಡುವುದೆಂದರೆ ಹಿಂದೂಗಳನ್ನು ಕೆಣಕುವುದಾಗಿದೆ ! ಸಮಾಜದಲ್ಲಿ ಬಿರುಕನ್ನು ನಿರ್ಮಾಣ ಮಾಡುವ ಇಂತಹ ಕಾಂಗ್ರೆಸ್‌ಅನ್ನು ಸರಕಾರ ಕಾರಾಗೃಹಕ್ಕೆ ದಬ್ಬಬೇಕು !

ಈ ಪ್ರಕರಣದಲ್ಲಿ ಪ್ರಾಣಿಪ್ರೇಮಿ ಮತ್ತು ಪರಿಸರವಾದಿಗಳ ಸಂಘಟನೆಗಳು ಕಾಂಗ್ರೆಸ್ಸಿನ ಅಭ್ಯರ್ಥಿಯ ವಿರುದ್ಧ ಧ್ವನಿ ಎತ್ತುವರೇ ?

ಮುರಾದಾಬಾದ (ಉತ್ತರಪ್ರದೇಶ) – ನಾನು ಚುನಾವಣೆಯನ್ನು ಗೆದ್ದರೆ ಮೊದಲು ಯೋಗಿ ಆದಿತ್ಯನಾಥ ಸರಕಾರ ಮುಚ್ಚಿರುವ ಕಸಾಯಿಖಾನೆಗಳನ್ನು ಪುನಃ ಪ್ರಾರಂಭಿಸುತ್ತೇನೆ ಎಂದು ಉತ್ತರಪ್ರದೇಶದ ಮುರಾದಾಬಾದ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ ಕುರೇಶಿಯವರು ಮತದಾರರಿಗೆ ಆಮಿಷ ತೋರಿಸಿದ್ದಾರೆ. ೨೦೧೭ ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ೧೫೦ ಕ್ಕಿಂತಲೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿದ್ದು, ೩೫೬ ಕ್ಕಿಂತಲೂ ಹೆಚ್ಚು ಗೋವು ಕಳ್ಳಸಾಗಣೆದಾರರ ಮೇಲೆ ಕ್ರಮ ಜರುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುರೇಶಿಯವರು ಈ ಮೇಲಿನ ಹೇಳಿಕೆಯನ್ನು ನೀಡಿದರು.

ಕುರೇಶಿ ತಮ್ಮ ಮಾತನ್ನ ಮುಂದುವರಿಸುತ್ತಾ, “ಉತ್ತರಪ್ರದೇಶ ಪೊಲಿಸ ಕುರೇಶಿ ಸಮಾಜಕ್ಕೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ೨೦೧೨ ರಲ್ಲಿ ರಾಷ್ಟ್ರೀಯ ಹಸಿರು ಪ್ರಾಧಿಕರಣವು ಸರಕಾರಕ್ಕೆ ಹಳೆಯ ಕಸಾಯಿಖಾನೆಗಳನ್ನು ಸ್ಥಗಿತಗೊಳಿಸಿ ಹೊಸ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕಸಾಯಿಖಾನೆಗಳನ್ನು ನಿರ್ಮಿಸಲು ಸೂಚನೆಯನ್ನು ನೀಡಿತ್ತು. ಹಳೆಯ ಕಸಾಯಿಖಾನೆಗಳನ್ನು ಮುಚ್ಚಿರುವುದರಿಂದ ಮತ್ತು ಪೊಲಿಸರು ನಿರಂತರವಾಗಿ ತೊಂದರೆ ಕೊಡುತ್ತಿರುವುದರಿಂದ ಕುರೇಶಿ ಸಮಾಜದ ವ್ಯವಸಾಯ ಪೂರ್ಣವಾಗಿ ಸ್ಥಗಿತಗೊಂಡಿದೆ. ನಾನು ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯಲ್ಲಿ ಆಧುನಿಕ ಕಸಾಯಿಖಾನೆಗಳನ್ನು ನಿರ್ಮಿಸುತ್ತೇನೆ” ಎಂದು ಹೇಳಿದರು.