ಪಂಜಾಬನ ಭಾರತ-ಪಾಕ ಗಡಿಯಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಪತ್ತೆ !

ಪಂಜಾಬ ವಿಧಾನಸಭೆ ಚುನಾವಣೆಯಲ್ಲಿ ಸ್ಪೋಟ ನಡೆಸಲು ಐ.ಎಸ್.ಐ ಮತ್ತು ಖಲಿಸ್ತಾನಿ ಭಯೋತ್ಪಾದಕರ ಪ್ರಯತ್ನ !

ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗಿನ ಎಲ್ಲಾ ಚುನಾವಣೆಯಲ್ಲಿ ಎಂದಿಗೂ ಶಾಂತಿಯುತದಿಂದ ನಡೆಯುವುದಿಲ್ಲ. ಉಗ್ರರ, ನಕ್ಸಲ್‌ರ, ಅಪರಾಧ ವೃತ್ತಿಯ ರಾಜಕೀಯ ಪಕ್ಷ ಇದು ಭಾರತದ ಪ್ರಜಾಪ್ರಭುತ್ನವನ್ನು ವಿಫಲಗೊಳಿಸುತ್ತಿವೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಅಮೃತಸರ (ಪಂಜಾಬ) – ವಿಶೇಷ ಕ್ರಿಯಾ ಪಡೆಗೆ ಭಾರತ-ಪಾಕಿಸ್ತಾನ ಗಡಿಗೆ ಅಂಟಿಕೊಂಡಿರುವ ಧನೋಯ ಕಲಾ ಗ್ರಾಮದಲ್ಲಿ ೫ ಕೆಜಿ ಆರ್.ಡಿ.ಎಕ್ಸ್. ಸ್ಪೋಟಕಗಳು ಪತ್ತೆಯಾಗಿವೆ. ಪಂಜಾಬ ವಿಧಾನಸಭೆ ಚುನಾವಣೆ ಸಮಯದಲ್ಲಿ ದೊಡ್ಡಪ್ರಮಾಣದ ಬಾಂಬ್ ಸ್ಫೋಟ ನಡೆಸುವ ಷಡ್ಯಂತ್ರ ಇರುವುದಾಗಿ ಭದ್ರತಾ ಪಡೆಯು ಹೇಳಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ ಮತ್ತು ಖಲಿಸ್ತಾನಿ ಭಯೋತ್ಪಾದಕರ ಕೈವಾಡ ಇರುವುದಾಗಿ ಹೇಳಲಾಗುತ್ತಿದೆ. ಪೊಲೀಸ್ ಮತ್ತು ಭದ್ರತಾ ಪಡೆಗಳು ಈ ಸ್ಫೋಟಕಗಳು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಸ್ಥಳೀಯ ಜನರ ಹುಡುಕಾಟ ನಡೆಸುತ್ತಿದೆ.

ಧನೊಯ ಕಲಾ ಗ್ರಾಮದ ಒಂದು ಹೊಲದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿದ್ದವು. ಭಾರತ-ಪಾಕ್ ಗಡಿಯಲ್ಲಿರುವ ವಿವಿಧ ಸ್ಥಳಗಳಲ್ಲಿ ಕಳೆದ ೫ ತಿಂಗಳಿನಿಂದ ಭದ್ರತಾ ಪಡೆಗಳಿಗೆ ಗ್ರೆನೈಟ್, ಆರ್.ಡಿ.ಎಕ್ಸ್., ಶಸ್ತ್ರಾಸ್ತ್ರಗಳು ಅದೇ ರೀತಿ ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಸಿಗುತ್ತಿವೆ.