ಮುಸಲ್ಮಾನ ಯುವಕನು ಗ್ರಾಮಸ್ಥರಿಗೆ ಥಳಿಸಿದ ಪ್ರಕರಣ
ರಾಯಪುರ (ಛತ್ತಿಸಗಡ) – ರಾಜ್ಯದಲ್ಲಿ ಬಲರಾಮಪುರದಲ್ಲಿಯ ಕುಂಭಕಲಾ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಮುಸಲ್ಮಾನರ ಮೇಲೆ ಬಹಿಷ್ಕಾರ ಹಾಕಲು ಪ್ರಮಾಣ ಮಾಡುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ.
ಜನವರಿ 1 ರಂದು ಕೆಲವು ಮುಸ್ಲಿಂ ಯುವಕರು ಕ್ರೈಸ್ತರ ಹೊಸವರ್ಷಾರಂಭ ಆಚರಣೆಗಾಗಿ ಲುಂಡ್ರಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಕುಂಭಕಲಾ ಗ್ರಾಮಕ್ಕೆ ತಲುಪಿದ ನಂತರ ಸ್ಥಳೀಯ ಯುವಕರೊಂದಿಗೆ ವಾದ-ವಿವಾದ ನಡೆಯಿತು. ಆ ಸಮಯದಲ್ಲಿ ಮತಾಂಧ ಯುವಕರು ಗ್ರಾಮಸ್ಥರನ್ನು ಥಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿ 6 ಜನರನ್ನು ಬಂಧಿಸಿದ್ದಾರೆ. ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಸುತ್ತುವರೆದರು, `ಈ ಯುವಕರ ಮೇಲೆ ಕಠಿಣ ಕಲಂನ ಅಡಿಯಲ್ಲಿ ಕ್ರಮಕೈಗೊಂಡಿಲ್ಲ, ಆದ್ದರಿಂದ ಅವರು ಜಾಮೀನಿನ ಮೇಲೆ ಬಿಡುಗಡೆಯಾದರು, ಎಂದು ಆರೋಪಿಸಿದ್ದಾರೆ. ಆ ಸಮಯದಲ್ಲಿ ಗ್ರಾಮಸ್ಥರು ಅಲ್ಲಿಯೇ ಪ್ರಮಾಣ ತೊಟ್ಟರು, `ನಾವು ಮುಸಲ್ಮಾನರ ಜೊತೆ ಇನ್ನು ಮುಂದೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ಅವರ ಅಂಗಡಿಗಳಿಂದ ಏನೂ ಖರಿದಿಸುವುದಿಲ್ಲ ಮತ್ತು ಅವರಿಗೆ ಭೂಮಿಯು ಮಾರುವುದಿಲ್ಲ.’ ಆ ಸಮಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗುತ್ತಿದೆ.
Chhattisgarh: Hindu villagers vow to boycott Muslims after tussle between two families https://t.co/0ahuhddCHK
— Republic (@republic) January 8, 2022