ಒಡಿಶಾದ ಬಿಜು ಜನತಾ ದಳದ ಸರಕಾರದಿಂದ ಮದರ್ ತೆರೇಸಾದ ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಗೆ ೭೮ ಲಕ್ಷ ೭೬ ಸಾವಿರ ರೂಪಾಯಿ ಸಹಾಯ

  • ಬಿಜು ಜನತಾದಳದ ಸರಕಾರವು ಈ ರೀತಿ ಎಷ್ಟು ಹಿಂದೂ ಸಂಸ್ಥೆಗಳಿಗೆ ಸಹಾಯ ಮಾಡಿದೆ ?
  • ಕ್ರೈಸ್ತ ಸಂಸ್ಥೆಗಳು ಸಾಮಾಜಿಕ ಕಾರ್ಯದ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಿಸುತ್ತವೆ. ಅವರಿಗೆ ಯೇಸುವಿನ ಭಕ್ತ ಮಾಡಲು ಪ್ರಯತ್ನಿಸಲಾಗುತ್ತದೆ. ಇದು ಎಲ್ಲರಿಗೆ ತಿಳಿದಿದ್ದರು ಇಂತಹ ಸಂಸ್ಥೆಗಳಿಗೆ ಬಹುಸಂಖ್ಯಾತ ಹಿಂದೂಗಳ ತೆರಿಗೆಯಿಂದ ಸಂಗ್ರಹಿಸಲಾದ ಮತ್ತು ಹಿಂದೂಗಳ ಅರ್ಪಣೆ ನೀಡಿದ ಹಣವನ್ನು ನೀಡುವುದು ಹಿಂದೂಗಳ ವಿಶ್ವಾಸಘಾತವಾಗಿದೆ. ಇದನ್ನು ಹಿಂದೂಗಳು ಕಾನೂನುರೀತ್ಯ ವಿರೋಧಿಸಬೇಕು !

ಭುವನೇಶ್ವರ (ಒಡಿಶಾ) – ಒಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳದ ಅಧ್ಯಕ್ಷ ನವೀನ್ ಪಟ್ನಾಯಕ್ ಇವರು ಮದರ್ ತೆರೇಸಾ ಅವರು ಸ್ಥಾಪಿಸಿದ್ದ ‘ಮಿಶನರಿಸ್ ಆಫ್ ಚಾರಿಟಿ’ಯಿಂದ ನಡೆಸಲಾಗುವ ೧೩ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಹಾಯ ನಿಧಿಯಿಂದ ಆರ್ಥಿಕ ಸಹಾಯ ನೀಡುವಾಗ ೭೮ ಲಕ್ಷ ೭೬ ಸಾವಿರ ರೂಪಾಯಿ ನೀಡಿದೆ. ಈ ಸಂಸ್ಥೆ ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಈ ನಿರ್ಣಯದಿಂದ ೯೦೦ ಗಿಂತಲೂ ಹೆಚ್ಚಿನ ಕುಷ್ಠರೋಗಿ ಹಾಗೂ ಕೆಲವು ಅನಾಥಾಶ್ರಮಗಳಿಗೆ ಲಾಭವಾಗುವುದು, ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆಯೇ ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಗೆ ವಿದೇಶದ ನಿಧಿ ಪಡೆಯಲು ಅನುಮತಿ ನವೀಕರಣ ಮಾಡಲು ಕೇಂದ್ರ ಸರಕಾರ ನಿರಾಕರಿಸಿತ್ತು.