ನ್ಯಾಯವಾದಿಗಳು ೭೫ ನೇ ವಯಸ್ಸಿನಲ್ಲಿಯೂ ಖಟ್ಲೆಗಳನ್ನು ನಡೆಸಬಹುದು, ಆದರೆ ನ್ಯಾಯಾಧೀಶರಿಗೆ ಮಾತ್ರ ೬೫ ನೇ ವರ್ಷಕ್ಕೆ ನಿವೃತ್ತಿ ಏಕೆ ? – ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ

`ನವ ದೆಹಲಿ – ನಮ್ಮ ನ್ಯಾಯಾಧೀಶರನ್ನು ನೋಡಿ ನಾನು ಖಂಡಿತವಾಗಿಯೂ ’ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೆಂದು ತಮ್ಮ ಕರ್ತವ್ಯವನ್ನು ನ್ಯಾಯಯುತವಾಗಿ, ನಿಷ್ಪಕ್ಷಪಾತದಿಂದ ಮತ್ತು ಸಕ್ಷಮವಾಗಿ ನಿರ್ವಹಿಸುವರು’ ಎಂದು ಹೇಳಬಹುದು. ೭೦ ರಿಂದ ೭೫ ವರ್ಷದ ನ್ಯಾಯವಾದಿಗಳಿಗೆ ಯುಕ್ತಿವಾದ ಮಾಡುವಾಗ ಯಾವುದೇ ಅಡಚಣೆ ಬರುವುದಿಲ್ಲ, ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ೭೦ನೇ ವರ್ಷದಲ್ಲಿ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ೬೫ನೇ ವರ್ಷದಲ್ಲಿ ನಿವೃತ್ತರಾಗುತ್ತಾರೆ, ಇದು ಹೀಗೇಕಿದೆ ? ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ಎಲ್ಲ ಅನುಭವ ಮತ್ತು ಕೌಶಲ್ಯದಿಂದ ನ್ಯಾಯ ವ್ಯವಸ್ಥೆಯಲ್ಲಿ ಉತ್ತಮ ಕೊಡುಗೆಯನ್ನು ನೀಡಲು ಸಕ್ಷಮರಾಗಿರುತ್ತಾರೆ. ಉಚ್ಚ ನ್ಯಾಯವ್ಯವಸ್ಥೆ ಮತ್ತು ಭಾರತ ಸರಕಾರವು ಒಟ್ಟಿಗೆ ಬಂದು ಒಂದು ಹೊಸ ಆದರ್ಶವನ್ನು ನಿರ್ಮಾಣ ಮಾಡಲು ಉತ್ತಮ ಯೋಜನೆಗಳನ್ನು ತರುವ ಸಮಯ ಬಂದಿದೆ’ ಎಂದು ಭಾರತದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲರವರು ಹೇಳಿದ್ದಾರೆ. ಅವರು ನ್ಯಾಯಾಧೀಶ ಸುಭಾಷ ರೆಡ್ಡಿ ಅವರ ಸೇವಾನಿವೃತ್ತಿಯ ನಿಮಿತ್ತ ಆಯೋಜಿಸಲಾದ ಆನ್ಲೈನ್ ಸಮಾರಂಭದಲ್ಲಿ ಮಾತನಾಡುತ್ತಿದ್ದರು.