ಚೀನಾ ಸೈನ್ಯವು ಭಾರತದ ನಿಯಂತ್ರಣದಲ್ಲಿರುವ ಗಲ್ವಾನ ಕಣಿವೆಯಲ್ಲಿ ತನ್ನ ರಾಷ್ಟ್ರಧ್ವಜ ಹಾರಿಸಿಲ್ಲ ! – ಭಾರತೀಯ ಸೈನ್ಯದ ಸ್ಪಷ್ಟೀಕರಣ

: NDTV

ನವ ದೆಹಲಿ – ಚೀನಾದಿಂದ ಪ್ರಸಾರ ಮಾಡಲಾಗಿರುವ ಒಂದು ವಿಡಿಯೋದಲ್ಲಿ ಚೀನಾ ಸೈನಿಕರು ಗಲ್ವಾನ ಕಣಿವೆಯಲ್ಲಿ ಚೀನಾದ ರಾಷ್ಟ್ರಧ್ವಜ ಹಾರಿಸುವುದು ಕಾಣುತ್ತಿದೆ. ೫ ಮೇ ೨೦೨೦ ರಲ್ಲಿ ಗಲ್ವಾನ ಕಣಿವೆಯಲ್ಲಿ ಯಾವ ಸ್ಥಳದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳ ನಡುವೆ ಘರ್ಷಣೆ ನಡೆಯಿತೋ ಆ ಪ್ರದೇಶ ಭಾರತದ ವಶದಲ್ಲಿಯೇ ಇದೆ. ಅಲ್ಲಿ ಈ ಧ್ವಜ ಹಾರಿಸಲಾಗಿದೆ ಎಂದು ಹೇಳಲಾಗುತ್ತಿದೆ; ಆದರೆ ಭಾರತೀಯ ಸೈನ್ಯ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ ‘ಚೀನಾದ ಸೈನಿಕರು ಅವರ ರಾಷ್ಟ್ರಧ್ವಜ ಹಾರಿಸಿರುವ ಜಾಗ ಚೀನಾದ ವಶದಲ್ಲಿರುವ ಗಲ್ವಾನ ಕಣಿವೆಯ ಭಾಗದಲ್ಲಿದೆ, ಎಂದು ಮೂಲಗಳು ಹೇಳಿದೆ. ಚೀನಾದ ಸೈನ್ಯದಿಂದ ವಿಡಿಯೋ ಪ್ರಸಾರ ಆದನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟೀಕರಣ ನೀಡುವಂತೆ ಒತ್ತಾಯಿಸಿದ್ದಾರೆ.