`ಪ್ರತಿಯೊಬ್ಬ ದಂಗೆಕೊರನು ಮುಸಲ್ಮಾನನೇ ಆಗಿರುತ್ತಾನೆ’ ಎಂದು ಸಾಮ್ಯವಾದಿ ನೇತಾರರಾದ ಕವಿತಾ ಕೃಷ್ಣನರವರ ಪರೋಕ್ಷ ಹೇಳಿಕೆ !

ಹರಿದ್ವಾರದಲ್ಲಿ ನಡದೆ ಧರ್ಮಸಂಸತ್ತಿನಲ್ಲಿ ಮುಸಲ್ಮಾನವಿರೋಧಿ ಹೇಳಿಕೆಗಳನ್ನು ನೀಡಲಾಗಿದೆ ಎನ್ನಲಾಗುವ ಬಗ್ಗೆ ಹಿಂದುತ್ವನಿಷ್ಠರನ್ನು ವಿರೋಧಿಸಲು ಆಕಾಶ ಪಾತಾಳ ಒಂದು ಮಾಡುವವರು ಈಗ ಕವಿತಾ ಕೃಷ್ಣನ್‍ರ ವಿಷಯದಲ್ಲಿ ಈಗ ಚಕಾರವೆತ್ತುವುದಿಲ್ಲ ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು 

ಕವಿತಾ ಕೃಷ್ಣನ್‍

ನವ ದೆಹಲಿ – ಸಾಮ್ಯವಾದ ಮತ್ತು ಹಿಂದೂದ್ವೇಷದಿಂದ ತುಂಬಿರುವ ಕವಿತಾ ಕೃಷ್ಣನ್‍ರವರು `ಇಂಡಿಯನ್ ಎಕಸ್ಪ್ರೆಸ್’ ಎಂಬ ಆಂಗ್ಲ ದಿನಪತ್ರಿಕೆಯಲ್ಲಿ ಪ್ರಕಾಶಿಸಲಾದ ಉತ್ತರ ಪ್ರದೇಶ ಸರಕಾರದ ಒಂದು ಜಾಹೀರಾತಿನ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷ್ಣನರವರು ಜಾಹೀರಾತಿನ ಛಾಯಾಚಿತ್ರವನ್ನು ಟ್ವೀಟರ್‍ಗೆ ಜೋಡಿಸಿ ದಿನಪತ್ರಿಕೆಯ ಮುಖ್ಯ ಸಂಪಾದಕರಾದ ರಾಜಕಮಲ ಝಾರವರನ್ನು ಉದ್ದೇಶಿಸಿ ‘ನಿಮ್ಮ ದಿನಪತ್ರಿಕೆಯ ಮೊದಲನೇ ಪುಟದಲ್ಲಿ ಮುದ್ರಿಸಲಾಗಿರುವ ಉತ್ತರಪ್ರದೇಶ ಸರಕಾರದ ದೊಡ್ಡ (ಅರ್ಧ ಪುಟದ) ಜಾಹೀರಾತು ಮುಸಲ್ಮಾನವಿರೋಧಿಯಾಗಿದೆ. ನೀವು ‘ಈ ಜಾಹೀರಾತನ್ನು ಪ್ರಕಾಶಿಸುವ ಹಿಂದೆ ‘ಕೇವಲ ವ್ಯಾವಹಾರಿಕ ಉದ್ದೇಶವಿತ್ತು’, ಎಂದು ಹೇಳಿ ನಿರ್ಣಯ ತೆಗೆದುಕೊಂಡಿದ್ದೇವೆ’ ಎಂಬ ನಾಟಕ ಮಾಡಲು ಸಾಧ್ಯವಿಲ್ಲ. ಈ ಜಾಹೀರಾತಿನ ಬೆಂಬಲಕ್ಕೆ ನಿಮ್ಮ ಸಂಪಾದಕೀಯ ವಿಭಾಗವಿದ್ದು ನಿಮ್ಮ ದಿನಪತ್ರಿಕೆಯು ‘ಫ್ಯಾಸಿಸ್ಟ್’ (ಹುಕುಂಶಾಹಿ) ವಿಚಾರಸರಣಿಯನ್ನು ಪ್ರೋತ್ಸಾಹಿಸುತ್ತದೆ. ಇದು ಆಘಾತಕಾರಿಯಾಗಿದೆ !’, ಎಂದು ಹೇಳಿದ್ದಾರೆ.

ಈ ಜಾಹೀರಾತಿನಲ್ಲಿ ಏನಿದೆ ?

ಉತ್ತರ ಪ್ರದೇಶ ಸರಕಾರದ ಜಾಹೀರಾತಿನಲ್ಲಿ 2017 ರ ಮೊದಲು `ದಂಗಾಯಿಯೊಂ ಕಾ ಖೋಫ್’ (ದಂಗೆಕೋರರ ಭಯ) ಮತ್ತು 2017 ರ ನಂತರ ‘ಮಾಂಗ ರಹೆ ಹೈ ಮಾಫಿ’ (ಕ್ಷಮೆ ಕೇಳುತ್ತಿದ್ದಾರೆ) ಎಂಬ ರೀತಿಯಲ್ಲಿ ಹೋಲಿಕೆ ಮಾಡಲಾಗಿದೆ. 2017 ರ ಮೊದಲು ದಂಗೆಕೋರರು ಪೆಟ್ರೋಲ್ ಬಾಂಬ ಎಸೆಯುತ್ತಿರುವ ಛಾಯಾಚಿತ್ರವನ್ನು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ, 2017 ರ ನಂತರ ಅವನು ಪೊಲೀಸ್ ಠಾಣೆಗೆ ಬಂದು ಕ್ಷಮೆ ಕೇಳುತ್ತಿರುವುದನ್ನು ತೋರಿಸಲಾಗಿದೆ. ಜಾಹೀರಾತಿನ ಕೆಳಗೆ ‘ಸೋಚ ಇಮಾನದಾರ ಕಾಮ ದಮದಾರ’ ಎಂದು ಬರೆಯಲಾಗಿದೆ. ಈ ಜಾಹೀರಾತಿನಲ್ಲಿ ಆ ದಂಗೆಕೊರನು ಯಾವ ಧರ್ಮದವನಾಗಿದ್ದಾನೆ ಅಥವಾ ಪಂಥದವನಾಗಿದ್ದಾನೆ ಎಂಬುದು ಗಮನಕ್ಕೆ ಬರುವುದಿಲ್ಲ. ಆದರೂ ಕವಿತಾ ಕೃಷ್ಣನರವರು ಈ ಜಾಹೀರಾತು ಮುಸಲ್ಮಾನವಿರೋಧಿ ಆಗಿದೆ ಎಂದು ಹೇಳಿ ಒಂದು ರೀತಿಯಲ್ಲಿ ಉತ್ತರಪ್ರದೇಶದಲ್ಲಿ ನಡೆದ ದಂಗೆಗಳನ್ನೂ ಮತಾಂಧರು ಮಾಡಿದ್ದಾರೆ, ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡು ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಯೋಗಿ ಆದಿತ್ಯನಾಥರವರ ನೇತೃತ್ವದಲ್ಲಿರುವ ಸರಕಾರವನ್ನು ಟೀಕಿಸಿದ್ದಾರೆ. 2017ರಲ್ಲಿ ಭಾಜಪವು ಉತ್ತರಪ್ರದೇಶ ವಿಧಾನಸಭೆಯಲ್ಲಿ ಮುಕ್ಕಾಲು ಪಟ್ಟು ಮತಗಳನ್ನು ಗೆದ್ದು ಉತ್ತರಪ್ರದೇಶದಲ್ಲಿ ಸರಕಾರವನ್ನು ಸ್ಥಾಪಿಸಿತ್ತು.