ಹವಾಮಾನದ ವೈಪರೀತ್ಯದಿಂದ ಬಿಪಿನ ರಾವತ ಇವರ ಹೆಲಿಕಾಪ್ಟರ ಪತನ

ನವ ದೆಹಲಿ – ದೇಶದ ಮೊದಲ ಮೂರು ಸೈನ್ಯ ದಳಗಳ ಮುಖ್ಯಸ್ಥ ಜನರಲ ಬಿಪಿನ ರಾವತ ಅವರ ಹೆಲಿಕಾಪ್ಟರ್ ಹೇಗೆ ಪತನಗೊಂಡಿತು, ಈ ಬಗ್ಗೆ ವಿಚಾರಣೆ ಪೂರ್ಣಗೊಂಡಿದೆ, ಅದರ ವರದಿ ಬೇಗನೆ ಬೆಳಕಿಗೆ ಬರುವುದು; ಆದರೆ ಮೂಲಗಳ ಮಾಹಿತಿಗನುಸಾರ `ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪತನಗೊಂಡಿತು’, ಎಂದು ವರದಿಯಲ್ಲಿ ನಿಷ್ಕರ್ಷಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ, ಏರ್ ಮಾರ್ಶಲ್ ಮಾನವೆಂದ್ರ ಸಿಂಹ ಇವರ ನೇತೃತ್ವದಲ್ಲಿ ವಿಚಾರಣೆ ಸಮಿತಿಯು ತನ್ನ ವರದಿಯನ್ನು ಕಾನೂನು ವಿಭಾಗಕ್ಕೆ ಕಳುಹಿಸಿದೆ. ಮುಂದಿನ ವಾರದಲ್ಲಿ ಈ ವರದಿ ವಾಯುದಳದ ಪ್ರಮುಖರಿಗೆ ಒಪ್ಪಿಸಲಾಗುವುದು.

1. ಈ ಸಮಿತಿಯು ಅದರ ನಿಷ್ಕರ್ಷದಲ್ಲಿ `ಅಪಘಾತ ಸಂಭವಿಸಿದ ದಿನ ಕುನ್ನೂರ ಭಾಗದಲ್ಲಿ ದಟ್ಟವಾದ ಮಂಜು ಇತ್ತು. ಅದರಿಂದ ಮುಂದೆ ಕಾಣಿಸುವುದು ಅಸ್ಪಷ್ಟವಾಗಿತ್ತು, ಇದರಿಂದ ಹೆಲಿಕಾಪ್ಟರ್ ದಾರಿತಪ್ಪಿ ಘಟನೆ ನಡೆದಿರಬಹುದು’, ಎಂದು ಹೇಳಲಾಗುತ್ತಿದೆ.

2. ತಮಿಳುನಾಡಿನ ಕುನ್ನೂರುನಲ್ಲಿ ಡಿಸೆಂಬರ್ 8 ರಂದು ಭಾರತೀಯ ವಾಯುದಳದ `ಎಂಐ – 17 ವಿ 5′ ಈ ಹೆಲಿಕಾಪ್ಟರ್ ಪತನಗೊಂಡು ಮೂರೂರು ಸೇನಾ ದಳದ ಮುಖ್ಯಸ್ಥ ಜನರಲ್ ಬಿಪಿನ ರಾವತ, ಅವರ ಪತ್ನಿ ಮಧುಲಿಕಾ ರಾವತ ಇವರ ಜೊತೆ ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲ 14 ಜನರು ಸಾವನ್ನಪ್ಪಿದ್ದರು.