ಉಡುಪಿಯ ಸರಕಾರಿ ಮಹಾವಿದ್ಯಾಲಯದ ತರಗತಿಯಲ್ಲಿ `ಹಿಜಾಬ್’ ಧರಿಸಲು (ತಲೆಯನ್ನು ಮುಚ್ಚಿಕೊಳ್ಳಲು ಬಟ್ಟೆ) ನಿಷೇಧ

ಮುಸಲ್ಮಾನರಿಂದ ವಿರೋಧ !

ಎಲ್ಲಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಅನ್ನು ನಿಷೇಧಿಸಿರುವುದರಿಂದ ವಿರೋಧಿಸುವ ಮುಸಲ್ಮಾನರು ಮತ್ತು ಎಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಬಳೆ, ಕುಂಕುಮ, ಮೆಹೆಂದಿ ಮುಂತಾದ ಧಾರ್ಮಿಕ ವಸ್ತುಗಳು ನಿಷೇಧಿಸಿದರೂ ನಿಷ್ಕ್ರಿಯರಾಗಿರುವ ಹಿಂದೂಗಳು !- ಸಂಪಾದಕರು 

ಬೆಂಗಳೂರು – ಉಡುಪಿ ಜಿಲ್ಲೆಯಲ್ಲಿರುವ ಒಂದು ಸರಕಾರಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಬಳಸಲು ನಿರಾಕರಿಸಲಾಗಿದೆ. ಆದ್ದರಿಂದ ಶುಕ್ರವಾರ 31 ಡಿಸೆಂಬರ್ ಈ ದಿನದಂದು ಹಿಜಾಬ್ ಹಾಕಿಕೊಂಡಿರುವ ಅನೇಕ ವಿದ್ಯಾರ್ಥಿನಿಯರನ್ನು ತರಗತಿಯಲ್ಲಿ ಪ್ರವೇಶ ನೀಡಲಿಲ್ಲ. ‘ವಿದ್ಯಾರ್ಥಿನಿಯರು ಹಿಜಬ್ ತೆಗೆದ ನಂತರವೇ ಅವರಿಗೆ ತರಗತಿಯಲ್ಲಿ ಪ್ರವೇಶ ನೀಡಲಾಗುವುದು’, ಎಂದು ಹೇಳಲಾಗಿದೆ.

1. ಮಹಾವಿದ್ಯಾಲಯದ ಅಧಿಕಾರಿಗಳು, ತರಗತಿಯಲ್ಲಿ ಸಮಾನತೆಯನ್ನು ಕಾಪಾಡಲು ಹಿಜಾಬ್ ನಿಷೇಧಿಸಲಾಗಿದೆ ಎಂದು ಹೇಳಿದರು.

2. ಮಹಾವಿದ್ಯಾಲಯದ ಪ್ರಾಚಾರ್ಯರು, ವಿದ್ಯಾರ್ಥಿನಿಯರು ಶೈಕ್ಷಣಿಕ ಸಂಸ್ಥೆಯ ಪರಿಸರದಲ್ಲಿ ಹಿಜಾಬ್ ಹಾಕಿಕೊಳ್ಳಬಹುದು, ಆದರೆ ತರಗತಿಯಲ್ಲಿ ಹಿಜಾಬ್ ಉಪಯೋಗಿಸಲು ಅವಕಾಶವಿಲ್ಲ. ಇದರ ವಿರೋಧ ಆಗುತ್ತಿರುವುದರಿಂದ ಅದನ್ನು ಬಗೆಹರಿಸಲು ಪೋಷಕರು ಮತ್ತು ಶಿಕ್ಷಕರ ಸಭೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.