ನಮಗೆ ನಿಮ್ಮ ಆಶೀರ್ವಾದ ಬೇಕಿಲ್ಲ !- ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ

ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಆಶೀರ್ವಾದ ಕೊಡಲು ಬಂದಿದ್ದ ಸಾಧುಗಳಿಗೆ ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರಿಂದ ಅವಮಾನ !

ಕಾಂಗ್ರೆಸ್‍ನವರ ವಿನಾಶಕಾಲೇ ವಿಪರೀತ ಬುದ್ಧಿ ! ಮೌಲ್ವಿ (ಇಸ್ಲಾಮಿ ವಿದ್ವಾನ್) ಅಥವಾ ಪಾದ್ರಿ ಬಂದಿದ್ದರೆ, ಡಿ. ಕೆ. ಶಿವಕುಮಾರ ಅವರ ಮುಂದೆ ಉರುಳು ಸೇವೆ ಮಾಡುತ್ತಿದ್ದರು, ಇದು ಕೂಡ ಅಷ್ಟೇ ಸತ್ಯ ! ಇಂತಹ ಕಾಂಗ್ರೆಸ್.ಅನ್ನು ಈಗ ಹಿಂದೂಗಳು ರಾಜಕೀಯ ದೃಷ್ಟಿಯಿಂದ ಮುಗಿಸುವುದೇ ಸೂಕ್ತವಾಗಿದೆ !- ಸಂಪಾದಕರು 

ಕಾಂಗ್ರೆಸ್‍ನ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ

ಮದ್ದೂರು – ಕರ್ನಾಟಕದ ಪ್ರದೇಶಾಧ್ಯಕ್ಷ ಡಿ.ಕೆ. ಶಿವಕುಮಾರ ಇವರು ಸಾಧುವಿನ ಆಶೀರ್ವಾದ ಪಡೆಯಲು ನಿರಾಕರಿಸಿ ಅವಮಾನಿಸಿರುವ ಘಟನೆ ಕಾಂಗ್ರೆಸ್‍ನ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ನಡೆದಿದೆ.

ಶಿವಪುರದಲ್ಲಿನ ಖಾಸಗಿ ಸಮುದಾಯ ಭವನದಲ್ಲಿ 137 ನೇ ಕಾಂಗ್ರೆಸ್‍ನ ಸಂಸ್ಥಾಪನಾದಿನ ನಿಮಿತ್ತ ದೊಡ್ಡ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಭಾಗೃಹದ ಮುಂದಿನ ಭಾಗದಲ್ಲಿ ಡಿ.ಕೆ. ಶಿವಕುಮಾರ ಮತ್ತು ಗಣ್ಯ ವ್ಯಕ್ತಿಗಳು ಕುಳಿತಿದ್ದರು. ಕಾಂಗ್ರೆಸ್‍ನ ಕಾರ್ಯಕ್ರಮ ನಡೆಯುತ್ತಿರುವುದು ನೋಡಿ ಸಾಧು ಅಲ್ಲಿ ಬಂದರು. ಅವರು ಡಿ.ಕೆ. ಶಿವಕುಮಾರ್ ಇವರಿಗೆ `ಆಶೀರ್ವಾದ ಕೊಡಲು ನಾವು ಬಂದಿದ್ದೇವೆ’ ಎಂದು ಹೇಳಿದರು; ಆದರೆ ಅವರ ಮಾತಿಗೆ ಎಳ್ಳಷ್ಟೂ ಬೆಲೆ ಕೊಡದೆ ಡಿ.ಕೆ. ಶಿವಕುಮಾರ ಕುಳಿತ ಜಾಗದಿಂದಲೇ ಕೈಮುಗಿದು ‘ನಿಮ್ಮ ಆಶೀರ್ವಾದ ಬೇಕಿಲ್ಲ’ ಎಂದು ಹೇಳಿದರು. ಆಶೀರ್ವಾದ ಪಡೆಯಲು ನಿರಾಕರಿಸಿರುವುದರಿಂದ ಸಾಧು ಹಿಂದಿರುಗಿದರು.