ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ, ಹಾಗೆಯೇ ಅವರ ಮೇಲಾಗುವ ಆಕ್ರಮಣಗಳ ಬಗ್ಗೆ ಇಂತಹ ಪತ್ರಗಳನ್ನು ಬರೆಯುವ ಸದ್ಬುದ್ಧಿಯು ನ್ಯಾಯವಾದಿಗಳಿಗೆ ಏಕೆ ಬರುವುದಿಲ್ಲ ? ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಕೇವಲ ಇತರ ಧರ್ಮೀಯರಿಗಾಗಿ ಇದೆ, ಎಂದು ಅವರಿಗೆ ಅನಿಸುತ್ತದೆಯೇ ?
ನವ ದೆಹಲಿ – ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಕೆಲವು ಜನರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರೆನ್ನಲಾದ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ೭೬ ನ್ಯಾಯವಾದಿಗಳು ಭಾರತದ ಮುಖ್ಯ ನ್ಯಾಯಾಧೀಶರಾದ ಎನ್. ವಿ. ರಮಣ ರವರಿಗೆ ಪತ್ರ ಬರೆದಿದ್ದಾರೆ. ‘ಧರ್ಮಸಂಸತ್ತಿನ ಹೆಸರಿನಲ್ಲಿ ದೇಶದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ಮಾಡಲು ಪ್ರಯತ್ನಿಸಲಾಗುತ್ತಿದೆ. ಧರ್ಮಸಂಸತ್ತಿನಲ್ಲಿನ ಇಂತಹ ಹೇಳಿಕೆಗಳಿಂದಾಗಿ ದೇಶದಲ್ಲಿನ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಭಯ ಉತ್ಪನ್ನವಾಗುತ್ತಿದೆ. ಭಾರತದ ಮುಖ್ಯ ನ್ಯಾಯಾಧೀಶರು ಈ ಪ್ರಕರಣದಲ್ಲಿ ಗಮನ ನೀಡಬೇಕು’ ಎಂದು ಈ ನ್ಯಾಯವಾದಿಗಳು ವಿನಂತಿಸಿದ್ದಾರೆ. ದುಷ್ಯಂತ ದವೆ, ಪ್ರಶಾಂತ ಭೂಷಣ, ವೃಂದಾ ಗ್ರೋವರ, ಸಲ್ಮಾನ ಖುರ್ಶೀದ, ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ ಈ ಹೆಸರಾಂತ ನ್ಯಾಯವಾದಿಗಳು ಇದರಲ್ಲಿ ಸೇರಿದ್ದಾರೆ.
लोकसत्ता विश्लेषण: वादग्रस्त वक्तव्यांमुळे चर्चेत असलेली ‘धर्म संसद’ म्हणजे काय?, तिथे घडलं तरी काय? https://t.co/5Sa8KBrAW2 #DharmaSansad #MahatmaGandhi #godse #Speech
— LoksattaLive (@LoksattaLive) December 27, 2021
ಈ ಪತ್ರದಲ್ಲಿ ‘೧೭ ರಿಂದ ೧೯ ಡಿಸೆಂಬರ್ ೨೦೨೧ ರ ಅವಧಿಯಲ್ಲಿ ಹರಿದ್ವಾರದಲ್ಲಿ ನಡೆದ ಸಭೆಯಲ್ಲಿ ದೇಶದ ಸಂವಿಧಾನಾತ್ಮಕ ಮೌಲ್ಯಗಳ ಮತ್ತು ಜಾತ್ಯತೀತ ಸಂಧಾನದ ವಿರುದ್ಧ ಸತತವಾಗಿ ಭಾಷಣಗಳು ನಡೆದವು. ಅಲ್ಪಸಂಖ್ಯಾತರ ವಿರುದ್ಧ ಶಸ್ತ್ರವನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಚರ್ಚೆಯಾಯಿತು’, ಎನ್ನಲಾಗಿದೆ. (ಅಲ್ಪಸಂಖ್ಯಾತರ ವಿರುದ್ಧ ಶಸ್ತ್ರವನ್ನು ಎತ್ತುವ ಚರ್ಚೆ ನಡೆದಿದೆ ಎನ್ನಲಾಗುತ್ತಿರುವ ವಿಷಯದಲ್ಲಿ ಇಷ್ಟೊಂದು ಜಾಗೃತಗೊಳ್ಳುವ ನ್ಯಾಯವಾದಿಗಳು ಬಹುಸಂಖ್ಯಾತ ಹಿಂದೂಗಳ ಮೇಲೆ ಶಸ್ತ್ರಗಳನ್ನು ಚಲಾಯಿಸಿದಾಗ ‘ಜಾತ್ಯತೀತತೆ’ಯ ಮಾತ್ರೆಯನ್ನು ನುಂಗಿ ಮಲಗಿರುತ್ತಾರೆಯೇ ? – ಸಂಪಾದಕರು)