ಹಿಂದೂದ್ರೋಹಿಗಳಿಂದ ಹಿಂದೂಗಳ ಪವಿತ್ರ ಧರ್ಮಗ್ರಂಥವಾದ ‘ಮನುಸ್ಮೃತಿ’ಯ ದಹನ !

  • ಮನುಸ್ಮೃತಿಯು ಸ್ತ್ರೀವಿರೋಧಿಯಾಗಿದೆ ಎಂದು ಹೇಳುವವರ ಬೌದ್ಧಿಕ ದಿವಾಳಿತನ ಸ್ಪಷ್ಟವಾಗುತ್ತದೆ !

  • ಮನುಸ್ಮೃತಿಯ ವಿರುದ್ಧ ಮತ್ತು ಅದನ್ನು ಬೆಂಬಲಿಸಿ ಟ್ವಿಟರ್‌ನಲ್ಲಿ ‘ಟ್ರೆಂಡ್’ !

ಯಾವುದೇ ಧರ್ಮಗ್ರಂಥವನ್ನು ಸುಡುವುದು ಕಾನೂನಿಗನುಸಾರ ಅಪರಾಧವಾಗಿದೆ. ಹಿಂದೂಗಳ ಧರ್ಮಗ್ರಂಥವನ್ನು ಸುಡುತ್ತಿರುವಾಗ ಮತ್ತು ಆ ಬಗ್ಗೆ ಸಾಮಾಜಿಕ ಮಾಧ್ಯಮಗಳಿಂದ ವೀಡಿಯೋಗಳನ್ನು ಪ್ರಸಾರ ಮಾಡುತ್ತಿರುವಾಗ ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ ?

ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಲು ಧರ್ಮನಿಂದನೆ ವಿರೋಧಿ ಕಾನೂನು ತರುವುದು ಅತ್ಯಾವಶ್ಯಕವಾಗಿದೆ. ಈಗ ಭಾರತದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತರಾಗಿ ಇದರ ಬಗ್ಗೆ ಆಗ್ರಹಿಸಬೇಕು !

ಬಿಬಿಸಿ ಹಿಂದಿ’ಯ ಮಾಜಿ ಪತ್ರಕರ್ತೆ ಮೀನಾ ಕೊತವಾಲ

ನವ ದೆಹಲಿ – ಡಿಸೆಂಬರ್ ೨೫ ರಂದು ’ಮನುಸ್ಮೃತಿ ದಹನ ದಿನ ಎಂಬ ಹೆಸರಿನ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ದಿನವನ್ನು ಆಚರಿಸುವ ಬಗ್ಗೆ ಕೆಲವು ಹಿಂದೂದ್ರೋಹಿಗಳು ಕರೆ ನೀಡಿದ್ದರು. ಇದರಲ್ಲಿ ‘ಬಿಬಿಸಿ ಹಿಂದಿ’ಯ ಮಾಜಿ ಪತ್ರಕರ್ತೆ ಮೀನಾ ಕೊತವಾಲರವರು ಮನುಸ್ಮೃತಿಯ ದಹನ ಮಾಡಿ ಅದರ ವಿಡಿಯೋವನ್ನು ಟ್ವಿಟರ್ ಮೂಲಕ ಪ್ರಸಾರ ಮಾಡಿದ್ದಾರೆ ಮತ್ತು ಸಮಾಜಕ್ಕೆ ಮನುಸ್ಮೃತಿಯನ್ನು ಸುಡುವಂತೆ ಪ್ರಚೋದನಾಕಾರಿ ಕರೆ ನೀಡಿದ್ದಾರೆ. ಅವರು ಟ್ವಿಟರ್.ನಲ್ಲಿ ‘ಇಂದು ನಾನು ಯಾವ ರೀತಿ ಮನುಸ್ಮೃತಿಯನ್ನು ಸುಟ್ಟಿದ್ದೇನೆ, ನೀವು ಹೀಗೆ ಮಾಡಿದ್ದಿರಲ್ಲ ? ಹೀಗೆ ಮಾಡುವುದರಲ್ಲಿ ಬಹಳ ಮಜಾ ಇದೆ. ಈಗ ನಾವು ನಿಯಮಿತವಾಗಿ ಹೀಗೆ ಮಾಡುತ್ತಿರೋಣ ಮತ್ತು ಕೇವಲ ಅದರ ದಹನ ಮಾಡದೇ ಅದರಲ್ಲಿರುವ ವಿಚಾರಗಳನ್ನೂ ನಷ್ಟಗೊಳಿಸೋಣ. ಬಾಬಾಸಾಹೇಬ (ಅಂಬೇಡಕರ)ರು ಇದನ್ನೇ ಮಾಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. (ಕೊತವಾಲರವರು ಒಮ್ಮುಖವಾಗಿ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದಾರೆ! ಸಂವಿಧಾನ ಶಿಲ್ಪಿ ಡಾ. ಅಂಬೇಡಕರರವರು ಮನುಸ್ಮೃತಿಯ ದಹನ ಮಾಡಿದ್ದರೂ ಅದರ ಅಧ್ಯಯನವನ್ನು ಮಾಡಿದ ನಂತರವೇ ಅವರು ‘ಹಿಂದೂ ಕೋಡ್ ಬಿಲ್’ಅನ್ನು ಸಿದ್ಧಗೊಳಿಸಿದರು. ಕೊತವಾಲರಂತಹ ಹಿಂದೂದ್ರೋಹಿ ಮಹಿಳೆಯು ಈ ಸಂಗತಿಯನ್ನು ಉದ್ದೇಶಪೂರ್ವಕವಾಗಿ ಅಡಗಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

ಮೀನಾ ಕೊತವಾಲರವರು ಇನ್ನೊಂದು ಟ್ವೀಟ್ ನಲ್ಲಿ ‘ಯಾವ ನೀಚ ಮನುವು ಮಹಿಳೆಯರು ಮತ್ತು ಕ್ಷುದ್ರರನ್ನು ಪ್ರಾಣಿ ಸಮಾನರೆಂದು ತಿಳಿಯುತ್ತಿದ್ದನೋ ಅವನನ್ನು ನಾನು ‘ಮಹಾನೀಚ’ನೆಂದು ಕರೆಯುವೆನು. ಯಾವ ಗ್ರಂಥವು ಭೇದಭಾವದ ಮೇಲೆ ಆಧಾರಿತವಾಗಿದೆ, ಅದನ್ನು ಸುಟ್ಟರೆ ನಿಮಗೇಕೆ ಕೆಡುಕೆನಿಸುತ್ತದೆ ?’ ಎಂದು ಹೇಳಿದ್ದಾರೆ.

ಮನುಸ್ಮೃತಿಯ ದಹನದ ವಿರುದ್ಧ ಹಿಂದುತ್ವನಿಷ್ಠರಿಂದ ಟ್ವಿಟರ್ ಟ್ರೆಂಡ್ !

ಇದರ ನಂತರ ಟ್ವಿಟರ್.ನಲ್ಲಿ ಟ್ರೆಂಡ್ ‘#मनुस्मृति_दहन_दिवस’ ಮತ್ತು ‘#हम_मनुस्मृति_दहन_करेंगे’ ಎಂಬ ರೀತಿಯಲ್ಲಿ ಹಿಂದೂದ್ರೋಹಿಗಳಿಂದ ಟ್ವಿಟರ್ ಟ್ರೆಂಡ್ (ಟ್ವಿಟರ್.ನಲ್ಲಿ ಒಂದೇ ವಿಷಯದ ಮೇಲೆ ನಡೆಸಲಾಗುವ ಚರ್ಚೆ.) ಮಾಡಲಾಯಿತು. ಇದರಲ್ಲಿ ಅಖಿಲ ಭಾರತೀಯ ಪರಿಸಂಘ ಇತ್ಯಾದಿ ಹಿಂದೂವಿರೋಧಿ ಸಂಘಟನೆಗಳು ಇದನ್ನು ಬೆಂಬಲಿಸುತ್ತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿವಾದ ಮಾಡಲು ಹಿಂದುತ್ವನಿಷ್ಠರೂ ಮಹಾನ ಆಧ್ಯಾತ್ಮಿಕ ಗ್ರಂಥವಾದ ಮನುಸ್ಮೃತಿಯ ಮಹತ್ವವನ್ನು ಪ್ರತಿಪಾದಿಸುವ ಟ್ವೀಟ್‌ಗಳನ್ನು ಮಾಡುತ್ತ ‘#हम_मनुस्मृति_पूजेंगे’ ಎಂಬ ಹಾಶ್.ಟ್ಯಾಗ್ ನಿಂದ ಟ್ರೆಂಡ್ ಮಾಡಿದ್ದಾರೆ. ಇದಕ್ಕೆ ಭಾರತದಾದ್ಯಂತ ಇರುವ ಹಿಂದುತ್ವನಿಷ್ಠರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ದೊರೆತಿದೆ. (ಈಗ ‘ಟ್ರೆಂಡ್’ ಮಾಡಿ ಜಾಗೃತಿಯನ್ನು ಮಾಡುವುದರೊಂದಿಗೆ ಪ್ರತ್ಯಕ್ಷ ಆಂದೋಲನಗಳನ್ನು ಮಾಡಿ ಹಿಂದೂವಿರೋಧಿ ತತ್ವಗಳಿಗೆ ಕಾನೂನುಮಾರ್ಗದಿಂದ ಬುದ್ದಿ ಕಲಿಸುವ ಸಮಯ ಬಂದಿದೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)

ಸ್ತ್ರೀಯರನ್ನು ಗೌರವಿಸಲು ಕಲಿಸುವ ಅದ್ವಿತಿಯ ‘ಮನುಸ್ಮೃತಿ’ !

ಮನುಸ್ಮೃತಿಯಲ್ಲಿ ಸ್ತ್ರೀಯನ್ನು ಗೌರವಿಸಲು ಕಲಿಸುವ ಕೆಲವು ಶ್ಲೋಕಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ಇಂದಿನ ಹಿಂದೂವಿರೋಧಿಗಳು ಮಾತ್ರವಲ್ಲದೆ ಸ್ತ್ರೀವಾದಿಯ ಗುತ್ತಿಗೆ ಪಡೆದಿರುವ ತಥಾಕಥಿತರ ಮನುಸ್ಮೃತಿ ಮತ್ತು ಒಟ್ಟಾರೆಯಾಗಿ ಹಿಂದೂ ಧರ್ಮದ ವಿರುದ್ಧದ ವಿಷಕಾರುವುದು ಹೇಗೆ ನಿರಾಧಾರ, ಕಾಲ್ಪನಿಕ ಮತ್ತು ಸುಳ್ಳು ಇದೆ, ಎಂಬುದನ್ನು ತೋರಿಸುತ್ತದೆ. ಹಿಂದೂ ಜನಜಾಗೃತಿ ಸಮಿತಿ ಪ್ರಕಟಿಸಿದ ಹಾಗೂ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಸಂಕಲನ ಮಾಡಿರುವ ‘ಮನುಸ್ಮೃತಿ ಸುಡಬೇಕೆ ಅಥವಾ ಅಭ್ಯಾಸ ಮಾಡಬೇಕಾ ?’ ಎಂಬ ಮರಾಠಿ ಭಾಷೆಯ ಕಿರುಗ್ರಂಥದಲ್ಲಿನ ಮಾಹಿತಿಯನ್ನು ಆಧಾರ ಸಹಿತವಾಗಿ ಪ್ರಕಟಿಸುತ್ತಿದ್ದೇವೆ.

೧. ಮನುಸ್ಮೃತಿ, ಅಧ್ಯಾಯ ೮, ಶ್ಲೋಕ ೨೬೭-೨೭೧ : ತಾಯಿ, ಸಹೋದರಿ ಮತ್ತು ಹೆಂಡತಿ ಇವರಿಗೆ ಮತ್ತು ಅವರ ಸಂದರ್ಭದಲ್ಲಿ ಇತರ ಪುರುಷರಿಗೆ ಅವಾಚ್ಯ ಪದಗಳಿಂದ ನಿಂದಿಸುವವರಿಗೆ ಇತರ ವಿಧದ ಅವಾಚ್ಯ ಪದ ಬಳಸಿದ್ದಕ್ಕೆ ನೀಡುವ ಶಿಕ್ಷೆಗಿಂತ ಎರಡು ಪಟ್ಟು ಹೆಚ್ಚು ಶಿಕ್ಷೆಯನ್ನು ಹೇಳಿದೆ.

೨. ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೧೧೪ : ನವವಿವಾಹಿತ ವಧು, ಅವಿವಾಹಿತ ಅನಾರೊಗ್ಯ ಹುಡುಗಿ ಮತ್ತು ಗರ್ಭಿಣಿಯರಿಗೆ ಪ್ರಸಂಗಬಂದಾಗ ಅತಿಥಿಗಳಿಗಿಂತ ಮೊದಲು ಭೋಜನವನ್ನು ನೀಡಬೇಕು.

೩. ಮನುಸ್ಮೃತಿ, ಅಧ್ಯಾಯ ೮, ಶ್ಲೋಕ ೪೦೪-೪೦೭ : ದೋಣಿಯಲ್ಲಿ ಪ್ರಯಾಣಿಸುವ ಮಹಿಳೆಯರಿಂದ ಯಾವುದೇ ಬಾಡಿಗೆಯನ್ನು ತೆಗೆದುಕೊಳ್ಳಬಾರದು.

೪. ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೧೬ : ಪುರುಷರು ಹಣವನ್ನು ಸಂಪಾದಿಸಬೇಕು, ಅದನ್ನು ಇಡಲು ಹೆಂಡತಿಗೆ ನೀಡಬೇಕು ಮತ್ತು ಹಣವನ್ನು ಮಹಿಳೆಯ ಮೂಲಕ (ಮಹಿಳೆಯ ಒಪ್ಪಿಗೆಯೊಂದಿಗೆ) ವಿನಿಯೋಗಿಸಬೇಕು.

೫. ಮನುಸ್ಮೃತಿ, ಅಧ್ಯಾಯ ೯, ಶ್ಲೋಕ ೩ : ತಂದೆಯು ಬಾಲ್ಯದಲ್ಲಿ, ಗಂಡನು ಯೌವನದಲ್ಲಿ ಮತ್ತು ಮಗನು ವೃದ್ಧಾಪ್ಯದಲ್ಲಿ ಸ್ತ್ರೀಯನ್ನು ರಕ್ಷಿಸುತ್ತಾನೆ; ಹಾಗಾಗಿ ಆಕೆಗೆ ಸ್ವಾತಂತ್ರ್ಯ ನೀಡಬಾರದು. (ನ ಸ್ತ್ರೀ ಸ್ವಾತಂತ್ತ್ರಮರ್ಹಿತಿ !)
೨ ಸಾವಿರದ ೩೦೦ ವರ್ಷಗಳ ಹಿಂದೆ ಸ್ತ್ರೀಯರ ರಕ್ಷಣೆಗೆ ಶಾರೀರಿಕ ಸಾಮರ್ಥ್ಯ ಅತ್ಯಗತ್ಯವಾಗಿತ್ತು. ಆ ಸಮಯದಲ್ಲಿ ಸ್ತ್ರೀ ಹೆಚ್ಚು ದುರ್ಬಲಳಾಗಿದ್ದಳು; ಏಕೆಂದರೆ ಆ ಸಮಯದಲ್ಲಿ ಪಿಸ್ತೂಲುಗಳಂತಹ ಆಯುಧಗಳು ಇರಲಿಲ್ಲ. ಆ ಕಾಲದಲ್ಲಿ ಮನುವು ಸ್ತ್ರೀರಕ್ಷಣೆಯ ಈ ಮಹತ್ತರವಾದ ವಿಚಾರವನ್ನು ವ್ಯಕ್ತಪಡಿಸಿದನು. ತಂದೆ, ಪತಿ ಮತ್ತು ಮಗ ಇವರೇ ಸ್ತ್ರೀಯರಿಗೆ ರಕ್ಷಣೆ ನೀಡಬೇಕು, ಎಂದು ಮನು ಒತ್ತಿ ಹೇಳಿದರು. ಈ ಹಿನ್ನೆಲೆಯನ್ನು ಗಮನದಲ್ಲಿಡದೇ ‘ಮನುಸ್ಮೃತಿಯನ್ನು ‘ಮನು ಸ್ತ್ರೀಸ್ವಾತಂತ್ರ್ಯದ ಶತ್ರು’ ಆಗಿದ್ದನು ಎಂದು ಸುಟ್ಟು ಹಾಕಿದ್ದು, ವೈಚಾರಿಕ ದಿವಾಳಿತನಯಾಗಿದೆ !

೬. ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೫೭ : ಯಾವ ಕುಲದ ಸ್ತ್ರೀ ದುಃಖಿತಳಾಗಿದ್ದಾಳೆ, ಆ ಕುಲವು ನಾಶವಾಗುತ್ತದೆ.

೭. ಮನುಸ್ಮೃತಿ, ಅಧ್ಯಾಯ ೨, ಶ್ಲೋಕ ೧೪೫ : ಆಚಾರ್ಯರು ಉಪಾಧ್ಯಾಯರಿಗಿಂತ ಹತ್ತು ಪಟ್ಟು ಶ್ರೇಷ್ಠರು, ತಂದೆ ಆಚಾರ್ಯರಿಗಿಂತ ನೂರು ಪಟ್ಟು ಶ್ರೇಷ್ಠರು ಮತ್ತು ತಾಯಿ ತಂದೆಗಿಂತ ಸಾವಿರ ಪಟ್ಟು ಶ್ರೇಷ್ಠರಾಗಿದ್ದಾರೆ.

೮. ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೫೬ : ಎಲ್ಲಿ ಸ್ತ್ರೀಯರನ್ನು ಪೂಜಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ನೆಲೆಸುತ್ತಾರೆ.

(ಆಧಾರ : ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ಬರೆದ ‘ಮನುಸ್ಮೃತಿ ಸುಡಬೇಕೋ ಅಥವಾ ಅಭ್ಯಾಸ ಮಾಡಬೇಕೋ ?’ ಈ ಕಿರುಗ್ರಂಥದ ಕೃಪೆಯಿಂದ)