ದ್ವಾರಕಾ ದ್ವೀಪಸಮೂಹದಲ್ಲಿನ ಎರಡು ದ್ವೀಪಗಳ ಮೇಲೆ ಮಾಲೀಕತ್ವವನ್ನು ಹೇಳುವ ಸುನ್ನಿ ವಕ್ಫ್ ಬೋರ್ಡ್ ನ ಅರ್ಜಿಯನ್ನು  ತಿರಸ್ಕರಿಸಿದ ಗುಜರಾತಿನ ಉಚ್ಚ ನ್ಯಾಯಾಲಯ !

* ಯಾವುದು ಸತ್ಯವಲ್ಲವೋ, ಇತಿಹಾಸದಲ್ಲಿ ಇಲ್ಲವೋ ಅದನ್ನು ಸಹ ಸುನ್ನಿ ವಕ್ಫ್ ಬೋರ್ಡ್ ಈ ರೀತಿಯ ಹೇಳಿಕೆ ನೀಡಿ ನೇರವಾಗಿ ನ್ಯಾಯಾಲಯಕ್ಕೆ ಹೋಗುವ ಧೈರ್ಯವನ್ನು ತೋರಿಸುತ್ತಿದೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ? ಹಿಂದೂಗಳು ಯಾವಾಗಲಾದರೂ ಕನಸಿನಲ್ಲಾದರೂ ಮೆಕ್ಕಾದ ಮೇಲೆ ಹಕ್ಕು ಚಲಾಯಿಸುವ ಧೈರ್ಯವನ್ನು  ಮಾಡಬಹುದೇ ?- ಸಂಪಾದಕರು 

* ನ್ಯಾಯಾಲಯವು ಇಂತಹ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಅರ್ಜಿಯನ್ನು ದಾಖಲಿಸಿದ ವಕ್ಫ್ ಬೋರ್ಡಿನ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !-ಸಂಪಾದಕರು 

ದ್ವಾರಕಾ (ಗುಜರಾತ) – ಹಿಂದೂಗಳ ಪವಿತ್ರ ತೀರ್ಥ ಸ್ಥಳವಾಗಿರುವ ದ್ವಾರಕಾದಲ್ಲಿನ 2 ದ್ವೀಪಗಳ ಮೇಲೆ ಸುನ್ನಿ ವಕ್ಫ್ ಬೋರ್ಡ್ ಹಕ್ಕು ಚಲಾಯಿಸುತ್ತಾ ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿತ್ತು. ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ದ್ವಾರಕಾ ದ್ವೀಪ ಸಮೂಹದಲ್ಲಿ ಒಟ್ಟು 8 ಚಿಕ್ಕ ದ್ವೀಪಗಳಿವೆ.

1. ಈ ಅರ್ಜಿಯಲ್ಲಿ ವಕ್ಫ್ ಬೋರ್ಡ್ ‘ದ್ವಾರಕಾ ದ್ವೀಪಸಮೂಹದ ಎರಡು ದ್ವೀಪಗಳ ಮೇಲೆ ನಮ್ಮ ಅಧಿಕಾರವಿದೆ’ ಎಂದು ಹೇಳಿದೆ. ಇದಕ್ಕೆ ನ್ಯಾಯಾಲಯವು ‘ನೀವು ಏನು ಹೇಳುತ್ತಿದ್ದೀರಿ ಎಂಬುದರ ಅರಿವಾದರೂ ನಿಮಗಿದೆಯೇ ? ಶ್ರೀ ಕೃಷ್ಣನ ನಗರಿಯಾಗಿರುವ ಭೂಮಿಯ ಮೇಲೆ ವಲ್ಫ ಬೋರ್ಡ್ ತನ್ನ ಅಧಿಕಾರವಿದೆ ಎಂದು ಹೇಗೆ ಹೇಳಬಹುದು ?’ ಎಂದು ಕೇಳುತ್ತಾ ಅರ್ಜಿಯನ್ನು ತಿರಸ್ಕರಿಸಿದೆ.

2. ದ್ವಾರಕಾ ದ್ವೀಪ ಸಮೂಹವು ಹಿಂದೆ ಭಗವಾನ ಶ್ರೀಕೃಷ್ಣನ ನಿವಾಸ ಸ್ಥಾನವಾಗಿತ್ತು. ಈ ದ್ವೀಪ ಸಮೂಹವನ್ನು ತಲುಪಲು ಓಖಾದಿಂದ ನೌಕೆಯ ಮೂಲಕ ಹೋಗಲು 30ನಿಮಿಷ ತಗಲುತ್ತದೆ. ಈ ದ್ವೀಪ ಸಮೂಹದಲ್ಲಿ 8000 ಕುಟುಂಬಗಳು ವಾಸಿಸುತ್ತವೆ. ಅವುಗಳಲ್ಲಿನ 6000 ಮುಸಲ್ಮಾನ ಕುಟುಂಬಗಳಾಗಿವೆ.