‘ಯಾರೂ ತಲವಾರಿನ ಬಲದ ಮೇಲೆ ಯಾರ ಮತಾಂತರ ಮಾಡುವುದಿಲ್ಲ, ಒಳ್ಳೆಯ ಕೆಲಸಗಳನ್ನು ನೋಡಿ ಜನರು ಮತಾಂತರಗೊಳ್ಳುತ್ತಾರೆ!’ (ಅಂತೆ) – ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಮ ನಬಿ ಆಝಾದ ಇವರ ಹೇಳಿಕೆ

* ಈ ಹೇಳಿಕೆಯನ್ನು ಚಿಕ್ಕ ಮಗುವಾದರೂ ನಂಬುವುದೇ? ಭಾರತದಲ್ಲಿಯಷ್ಟೇ ಅಲ್ಲ, ಜಗತ್ತಿನಾದ್ಯಂತ ಇಸ್ಲಾಂ ಹರಡಿರುವುದು ಕೇವಲ ಮತ್ತು ಕೇವಲ ತಲವಾರಿನ ಬಲದಿಂದಲೇ ಹರಡಿದೆಯೆನ್ನುವುದು ಇತಿಹಾಸ ಆಗಿದೆ ಮತ್ತು ವರ್ತಮಾನದಲ್ಲಿಯೂ ಆಮಿಷಗಳನ್ನೊಡ್ಡಿ, ಮೋಸದಿಂದ ಮತಾಂತರಗೊಳಿಸಲಾಗುತ್ತಿದೆ. ಇದು ವಸ್ತುಸ್ಥಿತಿಯಾಗಿದೆ.-ಸಂಪಾದಕರು 

* ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದವರು ಇಂತಹ ಯಾವ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆ ಕಾರಣದಿಂದ ಹಿಂದೂ ಧರ್ಮದವರು ಇತರೆ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ, ಎನ್ನುವುದನ್ನು ಗುಲಾಮ ನಬಿ ಆಝಾದರು ಹೇಳಬೇಕು.-ಸಂಪಾದಕರು 

* ಒಂದು ವೇಳೆ ಆಝಾದ ಹೀಗೆ ಹೇಳುತ್ತಿದ್ದರೆ, `ಮತಾಂತರ ಮಾಡಿರುವ ಹಿಂದೂಗಳು ಪುನಃ ಹಿಂದೂ ಧರ್ಮಕ್ಕೆ ಪುನರ್‍ಪ್ರವೇಶ ಮಾಡಿದರೆ ಅದನ್ನು ಏಕೆ ವಿರೋಧಿಸಲಾಗುತ್ತಿದೆ?’, ಎಂದೂ ಅವರು ಹೇಳಬೇಕು.-ಸಂಪಾದಕರು 

ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಮ ನಬಿ ಆಝಾದ

ಉಧಮಪೂರ(ಜಮ್ಮೂ-ಕಾಶ್ಮೀರ)– ಯಾರು ಜನರ ಮತಾಂತರ ಮಾಡುತ್ತಿದ್ದಾರೆಯೋ, ಅವರು ತಲವಾರ ಉಪಯೋಗಿಸಿ, ಹೆದರಿಸಿ ಮತಾಂತರ ಮಾಡುವುದಿಲ್ಲ. ಯಾವುದಾದರೂ ಒಳ್ಳೆಯ ಕೆಲಸ ಮತ್ತು ಆ ಧರ್ಮದಲ್ಲಿರುವ ವ್ಯಕ್ತಿಯ ಚಾರಿತ್ರ್ಯ ಇತರರಿಗೆ ಮತಾಂತರಗೊಳ್ಳಲು ಪ್ರಭಾವಿತಗೊಳಿಸುತ್ತದೆ. ಬೇಧಭಾವ ಮಾಡದೇ ಮಾನವತೆಯ ಸೇವೆ ಮಾಡಲು ದೊರಕಬೇಕು ಎಂದು ಯಾವುದಾದರೂ ವಿಶಿಷ್ಟ ಧರ್ಮಕ್ಕೆ ಜನರು ಮತಾಂತರಗೊಳ್ಳುತ್ತಾರೆ ಎಂದು ಪುಕ್ಕಟೆ ಹೇಳಿಕೆಯನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಜಮ್ಮೂ-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ ನಬಿ ಆಝಾದ ಇವರು ಉಧಮಪೂರದಲ್ಲಿ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು. ಕರ್ನಾಟಕದಲ್ಲಿ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದಿರುವ ಮತಾಂತರ ವಿರೋಧಿ ವಿಧೇಯಕದ ಕುರಿತು ಅವರು ಮಾತನಾಡುತ್ತಿದ್ದರು.

ಈ ವಿಧೇಯಕವನ್ನು ವಿರೋಧಿ ಪಕ್ಷದ ಸದಸ್ಯರು ವಿರೋಧಿಸಿದ್ದರು. `ಯಾವುದೇ ವ್ಯಕ್ತಿ ತಪ್ಪು ವರ್ಣನೆ, ಬಲವಂತಹ, ಒತ್ತಡದ ಪ್ರಭಾವ, ಆಮಿಷ ಅಥವಾ ಯಾವುದೇ ಮೋಸದ ಮಾರ್ಗದಿಂದ ವಿವಾಹದ ಮೂಲಕ ಅಥವಾ ಇತರೆ ಯಾವುದೇ ಮಾರ್ಗದಿಂದ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಬಾರದು ಅಥವಾ ಮತಾಂತರಗೊಳಿಸಲು ಪ್ರಯತ್ನಿಸಬಾರದು ಅಥವಾ ಯಾವುದೇ ಸಂಚನ್ನು ರಚಿಸಬಾರದು’, ಎಂದು ವಿಧೇಯಕದಲ್ಲಿ ನಮೂದಿಸಲಾಗಿದೆ. ಈ ಹಿಂದೆ ಗುಜರಾತ ವಿಧಾನಸಭೆಯಲ್ಲಿ’ ಗುಜರಾತ ಧರ್ಮ ಸ್ವಾತಂತ್ರ್ಯ ಕಾನೂನು, 2021’ ಬಹುಮತದಿಂದ ಪಾಸು ಮಾಡಲಾಗಿತ್ತು. ಇದರಲ್ಲಿ ಮದುವೆಯ ಮಾಧ್ಯಮದಿಂದ ಬಲವಂತವಾಗಿ ಮತಾಂತರ ಮಾಡುವ ಕುರಿತು ಕಠಿಣ ಶಿಕ್ಷೆಗೆ ಅವಕಾಶವನ್ನು ಮಾಡಲಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು ಕೂಡ ಇಂತಹ ಕಾನೂನು ಜಾರಿಗೊಳಿಸಿವೆ.