ಮಸೀದಿಯ ಇಮಾಮ್‌ನಿಂದ ಮತೀಯ ಭಾಷಣ
ಕಳೆದ ಅನೇಕ ದಶಕಗಳಿಂದ ಮದರಸಾಗಳು ಮತ್ತು ಮಸೀದಿಗಳಿಂದ ನಡೆಯುವ ಜಿಹಾದಿ ಕೃತ್ಯಗಳು ಮತ್ತು ಮತೀಯವಾದದ ಪ್ರಸಾರವನ್ನು ನೋಡಿದರೆ, ಭಾರತ ಎಂದೂ ಇಂತಹ ನಿರ್ಣಯವನ್ನು ತೆಗೆದುಕೊಳ್ಳುವ ಧೈರ್ಯ ಮಾಡಿಲ್ಲ, ಇದು ನಾಚಿಕೆಗೇಡು!
ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನ ಗೃಹಸಚಿವರು ದೇಶದಲ್ಲಿರುವ ಒಂದು ಮಸೀದಿಯನ್ನು ೬ ತಿಂಗಳುಗಳ ಕಾಲ ಮುಚ್ಚುವುದಾಗಿ ಘೋಷಿಸಿದ್ದಾರೆ. ಈ ಮಸೀದಿಯ ಇಮಾಮ್‌ನ ಮತೀಯವಾದದ ಧಾರ್ಮಿಕ ಭಾಷಣಗಳನ್ನು ತಡೆಯಲು ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಗೃಹಸಚಿವರು ಹೇಳಿದ್ದಾರೆ. ಈ ಮಸೀದಿಯು ಪ್ಯಾರಿಸ್‌ನಿಂದ ೧೦೦ ಕಿ.ಮೀ. ದೂರದಲ್ಲಿರುವ ಬಿಯಾವೈಸ್ ನಗರದಲ್ಲಿದೆ. ಈ ಇಮಾಮ್ ತನ್ನ ಭಾಷಣದಲ್ಲಿ ನಿರಂತರವಾಗಿ ಕ್ರಿಶ್ಚಿಯನ್ ಮತ್ತು ಜ್ಯೂ ಪಂಥದವರ ವಿರುದ್ಧ ವಿಷಕಾರುತ್ತಾನೆ. ಸಲಿಂಗ ಸಂಬಂಧ ಇಟ್ಟುಕೊಳ್ಳುವವರ ವಿರುದ್ಧವೂ ಜನರನ್ನು ಕೆರಳಿಸುತ್ತಾನೆ ಎಂದು ಆರೋಪಿಸಲಾಗಿದೆ.
France targets mosque for closure in town of Beauvais after French Interior Minister Darmanin accused imam in religious institution of “unacceptable” preachinghttps://t.co/7LqarJFB62
— DAILY SABAH (@DailySabah) December 14, 2021