ಪಾಕಿಸ್ತಾನದಿಂದ 7 ಸಾವಿರ ನಾಗರಿಕರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಕೆ ! – ಕೇಂದ್ರ ಸರಕಾರದ ಮಾಹಿತಿ

ನವ ದೆಹಲಿ : 2016 ರಿಂದ 2020 ನೆಯ ಇಸವಿಯ ನಡುವೆ 4 ಸಾವಿರದ 177 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದ್ದು, 10 ಸಾವಿರದ 635 ಅರ್ಜಿಗಳು ಬಾಕಿ ಇವೆ. ಬಾಕಿ ಉಳಿದಿರುವ ಅರ್ಜಿಗಳ ಪೈಕಿ ಅತಿ ಹೆಚ್ಚು ಅಂದರೆ 7 ಸಾವಿರದ 306 ಅರ್ಜಿಗಳು ಪಾಕಿಸ್ತಾನಿ ಪ್ರಜೆಗಳಿಂದ ಬಂದಿದ್ದರೆ, 1 ಸಾವಿರದ 152 ಅರ್ಜಿಗಳು ಅಫ್ಘಾನಿಸ್ತಾನದಿಂದ ಬಂದಿವೆ ಎಂದು ಕೇಂದ್ರ ಗೃಹರಾಜ್ಯಸಚಿವ ನಿತ್ಯಾನಂದ ರಾಯ ಇವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ರಾಯ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, 2018 ರಿಂದ 2021 ರ ನಡುವೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಹಿಂದೂ, ಸಿಖ್ಕ, ಜೈನ್ ಮತ್ತು ಕ್ರೈಸ್ತ ಅಲ್ಪಸಂಖ್ಯಾತರು ಭಾರತೀಯ ಪೌರತ್ವಕ್ಕಾಗಿ 8 ಸಾವಿರದ 244 ಸಾವಿರ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 3 ಸಾವಿರದ 117 ಮಂದಿಗೆ ಪೌರತ್ವ ನೀಡಲಾಗಿದೆ ಎಂದು ಹೇಳಿದರು.