ಹೊಸದಾಗಿ ‘ಸಿಡಿಎಸ್’ನ (‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ನ) ಅಂದರೆ ಮೂರು ಸೈನ್ಯಗಳ ದಂಡನಾಯಕರ ನೇಮಕ ಆಗುವವರೆಗೂ ಜನರಲ್ ನರವಣೆ ‘ಚೀಫ್ ಅಫ್ ಸ್ಟಾಫ್’ ಸಮಿತಿಯ ಅಧ್ಯಕ್ಷರು

ಜನರಲ್ ಮನೋಜ ಮುಕುಂದ ನರವಣೆ

ನವ ದೆಹಲಿ – ಭಾರತದ ಮೊದಲ ಚೀಫ್ ಅಫ್ ದೆಫೆನ್ಸ್ ಸ್ಟಾಫ್ (ಸಿಡಿಎಸ್) ಅಂದರೆ ಮೂರು ಸೈನ್ಯಗಳ ದಂಡನಾಯಕ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದ ನಂತರ ಈಗ ಹೊಸದಾಗಿ ಸಿಡಿಎಸ್ ನೇಮಿಸುವ ಪ್ರಕ್ರಿಯೆ ಆರಂಭವಾಗಿದೆ. ಹೊಸ ಸಿಡಿಎಸ್ ನೇಮಕವಾಗುವವರೆಗೂ ದೇಶದಲ್ಲಿ ಹಳೆಯ ವ್ಯವಸ್ಥೆ ತಕ್ಷಣಕ್ಕೆ ಜಾರಿ ಮಾಡಲಾಗಿದೆ. ಅದಕ್ಕನುಸಾರ ಸೈನ್ಯ ದಳದ ಪ್ರಮುಖ ಜನರಲ್ ಮನೋಜ ಮುಕುಂದ ನರವಣೆ ಇವರನ್ನು ‘ಚೀಫ್ ಆಫ್ ಸ್ಟಾಫ್’ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಜನರಲ್ ನರವಣೆ ಎಲ್ಲರಲ್ಲಿ ಹಿರಿಯರಾಗಿದ್ದಾರೆ. ಆದ್ದರಿಂದ ಅವರನ್ನು ಈ ಸಮಿತಿಯ ಪ್ರಮುಖರೆಂದು ನೇಮಿಸಲಾಗಿದೆ. ಹಾಗೂ ದೇಶದ ಹೊಸ ಸಿಡಿಎಸ್ ಆಯ್ಕೆಯ ಪಟ್ಟಿಯಲ್ಲಿಯೂ ಸಹ ಜನರಲ್ ನರವಣೆ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ದೇಶದಲ್ಲಿ ಸಿಡಿಎಸ್‌ನ ಹುದ್ದೆಯಿರಲಿಲ್ಲ. ಆಗ ದೇಶದಲ್ಲಿ ‘ಚೀಫ್ ಅಫ್ ಸ್ಟಾಫ್’ ಸಮಿತಿಯ ಮೂರು ಸೈನ್ಯಗಳಲ್ಲಿ ಸಮನ್ವಯ ನಡೆಸಿ ಕಾರ್ಯ ಮಾಡಲಾಗುತ್ತಿತ್ತು. ಈ ಸಮಿತಿಯಲ್ಲಿ ಮೂರು ಸೈನ್ಯಗಳ ಪ್ರಮುಖರ ಸಮಾವೇಶ ಇದೆ.