ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ ಖಾನರವರ ನುಡಿಮುತ್ತು !
|
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ಏನು ನಡೆಯುತ್ತಿದೆ, ಎಂಬುದು ಕೇವಲ ನಮ್ಮ ಅಥವಾ ವಿಶೇಷವಾಗಿ ಕಾಶ್ಮೀರದಷ್ಟೇ ಆಗಿಲ್ಲ. ಬದಲಾಗಿ ಇದು ಎಲ್ಲಾ ಭಾರತೀಯರ ದುರ್ದೈವವೇ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬ್ರಾಹ್ಮಣವಾದಿ ಸಿದ್ಧಾಂತವು ಭಾರತದಲ್ಲಿರುವ ಶೇಕಡಾ ೫೦ ರಿಂದ ೬೦ ಕೋಟಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುತ್ತಿದೆ. ಇದರಿಂದ ಭಾರತೀಯ ಸಮಾಜದ ಮೇಲೆ ಗಂಭೀರ ಪರಿಣಾಮವಾಗುವುದು. ಯಾವಾಗ ನೀವು ಜನರನ್ನು ಕಡೆಗಣಿಸುವಿರಿ ಅಥವಾ ಅವರತ್ತ ನಿರ್ಲಕ್ಷ್ಯ ಮಾಡಿದಾಗ ನೀವು ಅವರನ್ನು ಮೂಲಭೂತವಾದಿಯನ್ನಾಗಿ ಮಾಡುವಿರಿ, ಎಂಬುದು ಇತಿಹಾಸ ಹೇಳುತ್ತದೆ, ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಇವರು ಹೇಳಿದ್ದಾರೆ. ಅವರು ‘ಇಸ್ಲಾಮಾಬಾದ ಕಾನ್.ಕ್ಲೇವ ೨೦೨೧’ರಲ್ಲಿ ಮಾತನಾಡುತ್ತಿದ್ದರು.
The PM said progress in relations between Pakistan and India had been halted because his government had to deal with RSS’s extremist ideology currently dominating Delhihttps://t.co/n4eSJeelYh
— Dawn.com (@dawn_com) December 10, 2021
ಖಾನರವರು ಮುಂದೆ ಮಾತನಾಡುತ್ತಾ, ದಕ್ಷಿಣ ಏಶಿಯಾದಲ್ಲಿ ಸ್ಥಿರತೆಗಾಗಿ ಕಾಶ್ಮೀರವು ಒಂದು ದೊಡ್ಡ ಅಪಾಯವಾಗಿದೆ. ಸಂಪೂರ್ಣ ದಕ್ಷಿಣ ಏಶಿಯಾವನ್ನು ಕಾಶ್ಮೀರದ ಅಂಶದಿಂದ ಕೂಡಿಡಲಾಗಿದೆ. ನನಗೆ ಇದನ್ನು ಅತ್ಯಂತ ವಿಶಾದವಾಗಿ ಹೇಳುವುದೇನೆಂದರೆ, ಈ ಪ್ರಶ್ನೆಗೆ ಸಂಬಂಧಪಟ್ಟಂತೆ ಭಾರತ ಸರಕಾರದೊಂದಿಗೆ ಸಂವಾದ ಸಾಧಿಸಲು ನಾವು ಸಂಪೂರ್ಣವಾಗಿ ಪ್ರಯತ್ನಿಸಿದೆವು; ಆದರೆ ಎದುರಿನವರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ನಾವು ಪ್ರಧಾನಮಂತ್ರಿ ಮೋದಿಯವರಿಗೂ ಕರೆ ಮಾಡಿದ್ದೆವು. ಆದರೆ ಇದು ನಮ್ಮ ದುರ್ಬಲತೆ ಎಂದು ತಿಳಿಯಲಾಗುತ್ತದೆ, ಎಂದು ನಿಧಾನವಾಗಿ ನಮಗೆ ಅರಿವಾಗತೊಡಗಿತು. ದುರ್ದೈವದಿಂದ ನಾವು ಓರ್ವ ಸಾಮಾನ್ಯ ಭಾರತ ಸರಕಾರದೊಂದಿಗೆ ಇಲ್ಲ, ಬದಲಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತದೊಂದಿಗೆ ಚರ್ಚೆ ನಡೆಸುತ್ತಿದ್ದವು ಮತ್ತು ಈ ಸಿದ್ಧಾಂತದೊಂದಿಗೆ ಚರ್ಚೆ ನಡೆಸುವುದು ತುಂಬಾ ಕಠಿಣವಾಗಿದೆ. ನಾವು ಪ್ರಾರ್ಥನೆ ಮಾಡುವುದೇನೆಂದರೆ, ಪಾಕಿಸ್ತಾನದೊಂದಿಗೆ ಗಂಭೀರವಾಗಿ ಚರ್ಚೆ ನಡೆಸುವಂತಹ ಸರಕಾರ ಭಾರತದಲ್ಲಿ ಬರಲಿ’ ಎಂದರು.