
‘ಸಜೀವ ವ್ಯಕ್ತಿಗಳಲ್ಲಿ ನಿರ್ಜೀವ ವಸ್ತುಗಳಿಗಿಂತ ಹೆಚ್ಚು ಚೈತನ್ಯವಿರುತ್ತದೆ. ಚಮಚವು ಧಾತುವಿನ, ಹಾಗೆಯೇ ಅದು ನಿರ್ಜೀವವಾಗಿರುವುದರಿಂದ ಅದರಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ತದ್ವಿರುದ್ಧ ಮನುಷ್ಯನಲ್ಲಿ ಕಡಿಮೆ ಎಂದರೂ ಸಾತ್ತ್ವಿಕತೆ ಶೇ. ೨೦ ರಷ್ಟಿರುತ್ತದೆ. ಅವನ ಐದೂ ಬೆರಳುಗಳಿಂದ ಪಂಚತತ್ತ್ವಗಳಿಗೆ ಸಂಬಂಧಿಸಿದ ಶಕ್ತಿ ಪ್ರವಹಿಸುತ್ತಿರುತ್ತದೆ. ಯಾವಾಗ ವ್ಯಕ್ತಿಯು ಕೈಗಳಿಂದ ಊಟ ಮಾಡುತ್ತಾನೆಯೋ, ಆಗ ಅವನ ಕೈಗಳ ಐದೂ ಬೆರಳುಗಳಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆಯು ಅವನ ಕೈಯಲ್ಲಿನ ತುತ್ತಿನಲ್ಲಿ ಪ್ರವಹಿಸುತ್ತದೆ ಮತ್ತು ಅವನು ಆಹಾರವನ್ನು ಸೇವಿಸಿದಾಗ ಈ ಸಾತ್ತ್ವಿಕತೆಯು ಪುನಃ ಅವನ ದೇಹದಲ್ಲಿ ಹೋಗುತ್ತದೆ. ಈ ರೀತಿ ಶಕ್ತಿಪಾತಯೋಗಕ್ಕನುಸಾರ ವ್ಯಕ್ತಿಯಿಂದ ಪ್ರಕ್ಷೇಪಿಸುವ ಸಾತ್ತ್ವಿಕತೆ ಮತ್ತು ಶಕ್ತಿಯು ಅವನಿಗೆ ಪುನಃ ಸಿಗುತ್ತದೆ. ತದ್ವಿರುದ್ಧ ಚಮಚದ ಬಳಕೆಯಿಂದ ವ್ಯಕ್ತಿಯ ಐದೂ ಬೆರಳುಗಳಿಂದ ಪ್ರವಹಿಸುವ ಶಕ್ತಿಯು ಹೆಬ್ಬೆರಳು ಮತ್ತು ತರ್ಜನಿಯ ಮಾಧ್ಯಮದಿಂದ ಚಮಚದಲ್ಲಿ ಪ್ರವೇಶಿಸಿ ಚಮಚದಲ್ಲಿನ ರಜ-ತಮವನ್ನು ಕಡಿಮೆ ಮಾಡಲು ಖರ್ಚಾಗುತ್ತದೆ. ಆದುದರಿಂದ ಅವನಿಗೆ ತನ್ನ ಸಾತ್ತ್ವಿಕತೆಯನ್ನು ಪುನಃ ಗ್ರಹಿಸಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧ ಚಮಚದಲ್ಲಿನ ರಜ-ತಮಾತ್ಮಕ ಸ್ಪಂದನಗಳು ಚಮಚದಲ್ಲಿನ ಆಹಾರಕಣಗಳಲ್ಲಿ ಹೋಗಿ ಅವನಿಗೆ ಆಹಾರದಿಂದ ರಜ-ತಮಾತ್ಮಕ ಶಕ್ತಿಯು ಸಿಗುತ್ತದೆ. ಇದರಿಂದ ಅವನು ಚಮಚದಿಂದ ತಿನ್ನುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗದೇ, ಹಾನಿಯೇ ಆಗುತ್ತದೆ. ಆದುದರಿಂದ ವ್ಯಕ್ತಿಯು ಚಮಚದಿಂದ ಆಹಾರವನ್ನು ಸೇವಿಸುವುದಕ್ಕಿಂತ (ಊಟ ಮಾಡುವುದಕ್ಕಿಂತ) ಕೈಯಿಂದ ಸೇವಿಸುವುದು (ಊಟ ಮಾಡುವುದು) ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಯೋಗ್ಯವಾಗಿದೆ. ಹೀಗಿದ್ದರೂ, ಚರ್ಮ ರೋಗ, ಕೈಯ ಬೆರಳುಗಳಿಗೆ ಗಾಯವಾಗಿದ್ದರೆ, ಅಥವಾ ಸೂಪ್, ಪಾಯಸ ಇವುಗಳಂತಹ ತೆಳು ಪದಾರ್ಥಗಳನ್ನು ಸೇವಿಸುವಾಗ ವ್ಯಕ್ತಿಯು ಕೈಗಳಿಗಿಂತ ಚಮಚದಿಂದ ಆಹಾರವನ್ನು ಸೇವಿಸುವುದು ಹೆಚ್ಚು ಯೋಗ್ಯವಾಗಿದೆ. ಮೇಲಿನ ಅಪವಾದಾತ್ಮಕ ಪರಿಸ್ಥಿತಿಯನ್ನು ಹೊರತುಪಡಿಸಿ, ವ್ಯಕ್ತಿಯು ಕೈಗಳಿಂದ ಆಹಾರವನ್ನು ಸೇವಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ.’
ಟಿಪ್ಪಣಿ – ಶೇ. ೬೧ ಮಟ್ಟದ ನಂತರ ದೇಹದ ಸಾತ್ತ್ವಿಕತೆಯ ಮೇಲೆ ಬಾಹ್ಯ ವಿಷಯಗಳ ಪರಿಣಾಮ ಕಡಿಮೆ ಪ್ರಮಾಣದಲ್ಲಿ ಆಗುವುದರಿಂದ ಶೇ. ೬೧ ಮಟ್ಟದ ನಂತರ ಚಮಚದಿಂದ ಆಹಾರವನ್ನು ಸೇವಿಸುವುದರ ಪರಿಣಾಮವು ಕಡಿಮೆಯಾಗ ತೊಡಗುತ್ತದೆ. ಶೇ. ೭೧ ರಿಂದ ಶೇ. ೮೦ ಮಟ್ಟದ ವರೆಗೆ ಚಮಚದಿಂದ ಆಹಾರವನ್ನು ಸೇವಿಸುವುದರ ಪರಿಣಾಮ ಕೇವಲ ಶೇ.೧ ರಷ್ಟೇ ಆಗುತ್ತದೆ ಮತ್ತು ಶೇ. ೮೧ ಮಟ್ಟದ ನಂತರ ಈ ಪರಿಣಾಮವು ಶೇ. 0 (ಸೊನ್ನೆಯಷ್ಟು) ಅಂದರೆ ಸ್ವಲ್ಪವೂ ಆಗುವುದಿಲ್ಲ.’
– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೮. ೨೦೨೦)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !