ನೌಕಾದಳ ದಿನ ನಿಮಿತ್ತ ಆಯೋಜಿತ ಪತ್ರಿಕಾಗೋಷ್ಠಿ
ಮುಂಬಯಿ – ಸಮುದ್ರ ಮಾರ್ಗವಾಗಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಹೆಚ್ಚುತ್ತಿದ್ದು ಇದರ ಹಿಂದೆ ಅಪಘಾನಿಸ್ತಾನದ ಬಂದಿರುವ ತಾಲಿಬಾನ್ ಆಡಳಿತವೇ ಕಾರಣವಾಗಿದ್ದರೂ ಅದರ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ನಿಸ್ಸಂಶಯವಾಗಿ ಗಮನಕ್ಕೆ ಬಂದಿದೆ, ಎಂದು ಭಾರತೀಯ ನೌಕಾದಳದ ಪಶ್ಚಿಮ ನೆಲೆಯ ಪ್ರಮುಖ ಧ್ವಜಾಧಿಕಾರಿ ವೈಸ್ ಅಡ್ಮಿರಲ್ ಅಜೇಂದ್ರ ಬಹದೂರ್ ಸಿಂಹ ಇವರ ಡಿಸೆಂಬರ ೪ ರಂದು ಹೇಳಿದರು. ನೌಕಾದಳ ದಿನ ನಿಮಿತ್ತ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮಕರಾನ ಸಮುದ್ರತೀರದ ಮಾರ್ಗದಿಂದಾಗುತ್ತಿರುವ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ಬಹಳ ಹೆಚ್ಚಳವಾಗಿದೆ. ಇತ್ತೀಚೆಗೆ ನೌಕಾದಳದಿಂದ ಕಾರ್ಯಾಚರಣೆ ನಡೆಸಿ ಕೆಲವು ದೊಡ್ಡ ಪ್ರಮಾಣದ ಸಂಗ್ರಹ ವಶಪಡಿಸಿಕೊಳ್ಳಲಾಗಿದೆ. ಇದರಿಂದ ಬರುವ ಹಣವನ್ನು ಭಯೋತ್ಪಾದಕ ಕಾರ್ಯಾಚರಣೆಗಾಗಿ ಉಪಯೋಗಿಸಲಾಗುತ್ತದೆ; ಆದ್ದರಿಂದ ಅದನ್ನು ತಡೆಯಲು ಭಾರತೀಯ ನೌಕಾದಳ ಸಜ್ಜಾಗಿದೆ. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗೆ ಭಯೋತ್ಪಾದನೆಯೊಂದಿಗೆ ನೇರ ಸಂಬಂಧ ಇರುವುದರಿಂದ ನೌಕಾದಳವು ಕಾವಲು ಹೆಚ್ಚಿಸಿದೆ. ಅದಕ್ಕಾಗಿ ಪಿ-೧೮ ಸಮೀಕ್ಷೆ ವಿಮಾನಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.