ನಾವು ಅಸ್ಸಾಂನಲ್ಲಿ ಅಂದಾಜು 700 ಮದರಸಾಗಳನ್ನು ಮುಚ್ಚಿದ್ದು ಉಳಿದ ಮದರಸಾಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳನ್ನು ತೆರೆಯುವೆವು ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ಅಸ್ಸಾಂನಲ್ಲಿ ಭಾಜಪದ ಸರಕಾರದ ಮುಖ್ಯಮಂತ್ರಿ ಹೀಗೆ ಮಾಡಬಹುದಾದರೆ ದೇಶದ ಬೇರೆ ಭಾಜಪದ ಆಡಳಿತದ ರಾಜ್ಯಗಳಲ್ಲಿಯೂ ಹೀಗೆ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ.- ಸಂಪಾದಕರು 

ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ

ಗುಹಾಟಿ (ಅಸ್ಸಾಂ) – ರಾಜ್ಯದಲ್ಲಿ ಮದರಸಾಗಳನ್ನು ಮುಚ್ಚುವುದು ನಮ್ಮ ಉದ್ದೇಶವಾಗಿದೆ. ನಾವು ಇಲ್ಲಿಯವರೆಗೆ ಅಂದಾಜು 700 ಮದರಸಾಗಳನ್ನು ಮುಚ್ಚಿದ್ದೇವೆ. ಉಳಿದಿರುವ ಮದರಸಾಗಳು ನರ್ಸಿಂಗ್ ಸ್ಕೂಲ್, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಮಹಾವಿದ್ಯಾಲಯವಾಗಿ ರೂಪಾಂತರಿಸುವ ವಿಚಾರವಿದೆ. ನನಗೆ ಅನಿಸುತ್ತಿದೆ, ಮುಸಲ್ಮಾನರು ಮದರಸಾಗೆ ಹೋಗದೆ ಆಧುನಿಕ ವೈದ್ಯರು ಮತ್ತು ಇಂಜಿನಿಯರು ಆಗಬೇಕು ಮತ್ತು ಸಮಾಜಕ್ಕೆ ಸಹಾಯ ಮಾಡಬೇಕು. ನಾನು ಮುಸಲ್ಮಾನ ಸಮಾಜದ ಹಿತಕ್ಕಾಗಿಯೇ ಮದರಸಾಗಳನ್ನು ಮುಚ್ಚಿದ್ದೇನೆ’, ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಹೇಳಿದರು.

ಸರಮಾರವರು ಮುಂದೆ ಮಾತನಾಡುತ್ತಾ, ನಾನು ಮುಸಲ್ಮಾನರಿಗೆ, `ನೀವು ನನಗೆ ವೋಟು ಕೊಡಿ’, ಎಂದು ಹೇಳಿದರೆ ಅವರು ನನಗೆ ವೋಟು ಕೊಡುವರೇ ? ನನಗೆ ಖಂಡಿತ ಗೊತ್ತು ಅವರು ನನಗೆ ವೋಟು ಕೊಡುವುದಿಲ್ಲ, ಹಾಗಾದರೆ ನಾನು ಅವರಿಗೆ ವೋಟು ಏಕೆ ಕೇಳಲಿ ? ಯಾವಾಗ ಮುಸಲ್ಮಾನರ ಮಕ್ಕಳು ದೊಡ್ಡವರಾಗಿ ಡಾಕ್ಟರ್ ಅಥವಾ ಇಂಜಿನಿಯರ್ ಆಗುವರೋ ಆಗ ಅವರು ನನಗೆ ಖಂಡಿತವಾಗಿಯೂ ವೋಟು ಕೊಡುವರು. ಆದರೆ ಇಂದು ಆ ರೀತಿಯ ಪರಿಸ್ಥಿತಿ ಇಲ್ಲ’, ಎಂದರು.