ಪಂಜಾಬ್‍ನಲ್ಲಿ ಹಿಂದೂ ಮತ್ತು ಸಿಖ್ಕರ ವಿರೋಧದಿಂದ ರಾಜ್ಯದ ಮುಖ್ಯಮಂತ್ರಿಗಳು ಕ್ರೈಸ್ತ ಮಿಶನರಿಯ `ಪ್ರಾರ್ಥನಾ ಸಭೆ’ಗೆ ಹೋಗಲಿಲ್ಲ !

ಸಭೆಯ ಮುಖ್ಯ ಆಯೋಜಕರಾಗಿರುವ ಪಾದ್ರಿಯ ಮೇಲೆ ಹತ್ಯೆ ಮತ್ತು ಬಲಾತ್ಕಾರ ಮಾಡಿರುವ ಆರೋಪ

ಟಿಪ್ಪಣಿ – ಪ್ರಾರ್ಥನಾ ಸಭೆ ಎಂದರೆ ಪಾದ್ರಿಗಳಿಂದ ಕಾಯಿಲೆ ಇರುವವರನ್ನು ಪ್ರಾರ್ಥನೆಯ ಮೂಲಕ ಚಿಕಿತ್ಸೆ ನೀಡಿ ಅವರನ್ನು ವಾಸಿ ಮಾಡುವೆವು ಎಂದು ಹೇಳಿಕೊಳ್ಳುವುದು

(ಎಡ ಭಾಗದಲ್ಲಿ) ಮುಖ್ಯಮಂತ್ರಿ ಚರಣಜಿತ ಸಿಂಹ ಚನ್ನಿ ಮತ್ತು ಪಾಸ್ಟರ್ ಬಜಿಂದರ್ ಸಿಂಹ (ಬಲಭಾಗದಲ್ಲಿ)

ಚಂಡಿಗಡ – ಪಂಜಾಬದಲ್ಲಿ ಹಿಂದೂ ಮತ್ತು ಸಿಖ್ಕರ ವಿರೋಧದಿಂದ ಮುಖ್ಯಮಂತ್ರಿ ಚರಣಜಿತ ಸಿಂಹ ಚನ್ನಿ ಇವರು ಕ್ರೈಸ್ತ ಮಿಷನರಿಗಳು ಆಯೋಜಿಸಿದ್ದ ಮೊಗ ಇಲ್ಲಿಯ ‘ಪ್ರಾರ್ಥನಾ ಸಭೆ’ಗೆ ಹೋಗಲಿಲ್ಲ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್ ಹಿಂದೂ ಮತ್ತು ಸಿಖ್ಕರ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಮುಖ್ಯಮಂತ್ರಿಯವರಿಗೆ ರಾಜ್ಯದಲ್ಲಿ ಕ್ರೈಸ್ತ ಮಿಶನರಿಗಳಿಗೆ ಮತಾಂತರ ಮಾಡಲು ಪ್ರೋತ್ಸಾಹಿಸಬಾರದು, ಎಂದು ಹೇಳಿದರು. ಜೊತೆಗೆ ಕ್ರೈಸ್ತ ಮಿಷನರಿಗೆ ಎಚ್ಚರಿಕೆ ನೀಡಿದ್ದಾರೆ.

1. ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಂಯುಕ್ತ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಮಾತನಾಡುತ್ತಾ, ಇಂತಹ ಸಭೆಗಳಲ್ಲಿ ಕ್ರೈಸ್ತ ಮಿಶನರಿಗಳಿಂದ ಜನರನ್ನು ಗುಣಮುಖ ಮಾಡುತ್ತೇವೆಂದು ಹೇಳಿಕೊಳ್ಳುತ್ತಾರೆ. ಪ್ರತ್ಯಕ್ಷವಾಗಿ ಕೊರೋನಾದ ಸಮಯದಲ್ಲಿ ಪಾದ್ರಿಗಳ ಮೃತ್ಯು ಆಗಿದೆ. ಕೊರೋನಾದ ರೋಗಿಗಳನ್ನು ಕ್ರೈಸ್ತ ಮಿಶನರಿಯವರು ಏಕೆ ವಾಸಿ ಮಾಡಲಾಗಿಲ್ಲ ? ಎಂದು `ಪ್ರಾರ್ಥನಾ ಸಭೆ’ಗೆ ಸಂಪೂರ್ಣ ದೇಶದಲ್ಲಿ ನಿಷೇಧಿಸಬೇಕು ಎಂದು ಹೇಳಿದರು.

2. ವಿಶ್ವ ಹಿಂದೂ ಪರಿಷತ್ತಿನ ಮೋಗಾದ ಜಿಲ್ಲಾಧ್ಯಕ್ಷ ಶರ್ಮಾ ಇವರು ಮಾತನಾಡುತ್ತಾ, ಜಿಲ್ಲೆಯಲ್ಲಿ ಮತಾಂತರದ ಮುಖ್ಯ ರೂವಾರಿ ಪಾಸ್ಟರ್ ಬಜಿಂದರ್ ಸಿಂಹ ಇದ್ದಾನೆ. ಅವನ ಮೇಲೆ ಹತ್ಯೆ, ಬಲಾತ್ಕಾರ ಮತ್ತು ಮತಾಂತರದ ಆರೋಪವಿದೆ.

ಪಂಜಾಬದ ಮುಖ್ಯಮಂತ್ರಿಯ ಚರಣಜೀತ ಚನ್ನಿ ಇವರು `ಕ್ರಿಪ್ಟೋ ಕ್ರಿಸ್ಟಿ’ ! – ವಿಶ್ವ ಹಿಂದೂ ಪರಿಷತ್

ವಿಶ್ವ ಹಿಂದೂ ಪರಿಷತ್‍ನ ಮೊಗ ಜಿಲ್ಲಾಧ್ಯಕ್ಷ ಶರ್ಮಾ ಇವರು `ರಾಜ್ಯದ ಮುಖ್ಯಮಂತ್ರಿ ಚರಣಜೀತ ಚೆನ್ನಿ ಇವರು `ಕ್ರಿಪ್ಟೋ ಕ್ರೈಸ್ತ’ನಾಗಿದ್ದಾರೆ’, ಎಂದು ಆರೋಪಿಸಿದ್ದಾರೆ. ‘ಕ್ರಿಪ್ಟೋ ಕ್ರೈಸ್ತ’ ಎಂದರೆ ಗುಪ್ತವಾಗಿ ಕ್ರೈಸ್ತ ಆಗಿರುವುದು; ಆದರೆ ಸಾರ್ವಜನಿಕ ಸ್ಥಳದಲ್ಲಿ ಮೂಲಧರ್ಮದಂತೆ ವರ್ತಿಸುವವರು