ಭಾರತದಲ್ಲಿನ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸಲ್ಮಾನರ ಕಾಗದಪತ್ರಗಳನ್ನು ಹಿಂದೂ ಹೆಸರಿನಲ್ಲಿ ತಯಾರಿಸಿ ಅವರನ್ನು ವಿದೇಶಕ್ಕೆ ಕಳುಹಿಸುವ ಗುಂಪಿನ ಬಂಧನ

ಈ ರೀತಿಯಲ್ಲಿ ಜನರನ್ನು ವಿದೇಶಕ್ಕೆ ಕಳಿಸಬಹುದಾದರೆ ಇದರಿಂದ ಭಾರತದ ಆಡಳಿತ ವ್ಯವಸ್ಥೆಯು ಎಷ್ಟು ಟೊಳ್ಳು ಮತ್ತು ಭ್ರಷ್ಟವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ! ಈ ಪ್ರಕರಣದಲ್ಲಿನ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು !- ಸಂಪಾದಕರು 

( ಪ್ರತಿನಿಧಿಕ ಛಾಯಾಚಿತ್ರ)

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಭಯೋತ್ಪಾದನ ನಿಗ್ರಹ ದಳವು ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರಿಗೆ ಭಾರತೀಯ ಹಿಂದೂಗಳ ಹೆಸರನ್ನು ನೀಡಿ ಅವರನ್ನು ವಿದೇಶಕ್ಕೆ ಕಳಿಸುವ ಒಂದು ಗುಂಪನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಸಹಾರಣಪುರದಿಂದ ಅಜಯ ಘಿಲ್ಡಿಯಾಲನನ್ನು ಬಂಧಿಸಲಾಗಿದೆ. ಇವನು ಏರ್ ಇಂಡಿಯಾದ ಕಸ್ಟಮರ್ ಕೇರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು. ಇವನು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2016 ರಿಂದ ಕಾರ್ಯನಿರತನಾಗಿದ್ದಾನೆ. ಇಲ್ಲಿಯವರೆಗೆ 40 ಜನರನ್ನು ನಕಲಿ ಕಾಗದ ಪತ್ರಗಳ ಮೂಲಕ ಸ್ಪೇನ್, ಬ್ರಿಟನ್ ಮುಂತಾದ ಯುರೋಪಿನ ದೇಶಗಳಿಗೆ ಕಳುಹಿಸಿದ ಬಗ್ಗೆ ಆತನ ಮೇಲೆ ಆರೋಪವಿದೆ.

1. ಈ ಗುಂಪಿಗೆ ಸಹಾಯಮಾಡುವ ವಿಕ್ರಮ ಎಂಬುವವನನ್ನು ಗಾಜಿಯಾಬಾದ, ಮತ್ತು ಸಮೀರ ಮಂಡಲ ಎಂಬುವವನನ್ನು ಬಂಗಾಳದ 24 ಪರಗಣಾದಿಂದ ಬಂಧಿಸಲಾಗಿದೆ. ಸಮೀರನು ‘ಟ್ರಾವೆಲ್ ಏಜೆನ್ಸಿ’ ನಡೆಸುತ್ತಾನೆ. ಅವನು ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸಲ್ಮಾನರಿಗೆ ಭಾರತೀಯ ನಾಗರಿಕತ್ವವನ್ನು ನೀಡುವ ಕೆಲಸ ಮಾಡುತ್ತಿದ್ದನು. ಇದೇ ನಾಗರಿಕತ್ವದ ಮೂಲಕ ಅವರನ್ನು ವಿದೇಶಕ್ಕೆ ಕಳುಹಿಸಲಾಗುತ್ತಿತ್ತು. ವಿಕ್ರಮನ ವಿಚಾರಣೆಯ ನಂತರ ಅಜಯ ಎಂಬುವವನನ್ನು ಬಂಧಿಸಲಾಯಿತು.

2. ಅಜಯ ಎಂಬುವವನಿಗೆ ಮೇಲಿನ ಕೆಲಸಕ್ಕಾಗಿ ಒಬ್ಬ ವ್ಯಕಿಗಾಗಿ 15,000 ರೂಪಾಯಿ ದೊರೆಯುತ್ತಿತ್ತು. ಇದರಲ್ಲಿನ ಸ್ವಲ್ಪ ಹಣವನ್ನು ಇತರ ನೌಕರರಿಗೂ ಹಂಚಲಾಗುತ್ತಿತ್ತು. ಈ ಪ್ರಕರಣದಲ್ಲಿ ಗುರಪ್ರೀತ ಎಂಬ ಆರೋಪಿಯೂ ಇದ್ದಾನೆ. ಇವನು ಲಂಡನನಲ್ಲಿನ ಪಾಸ್ ಪೋರ್ಟ್ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಾನೆ. ಅಜಯನು ಈತನ ಸಂಪರ್ಕದಲ್ಲಿದ್ದನು. ಗುರಪ್ರೀತನು ಅಜಯನಿಗೆ ಈ ವಿಷಯದಲ್ಲಿ ಸಹಾಯ ಮಾಡುತ್ತಿದ್ದನು.

3. ಈ ಗುಂಪು ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯ ಮುಸಲ್ಮಾನರಿಗೆ ಹಿಂದೂ ಹೆಸರಿನಿಂದ ನಕಲೀ ಆಧಾರ ಕಾರ್ಡ, ಮತದಾನದ ಗುರುತಿನ ಚೀಟಿ, ಪಾಸ್ ಪೋರ್ಟ್ ಇತ್ಯಾದಿಗಳನ್ನು ತಯಾರಿಸುತ್ತಿತ್ತು. ಈ ಗುಂಪಿನಲ್ಲಿನ ಇತರ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ.