ಈ ಹಿಂದೆ ಕೂಡ ಸೂರ್ಯಮಂದಿರ ಪತ್ತೆಯಾಗಿತ್ತು !ಇದರಿಂದ ಜಗತ್ತಿನಾದ್ಯಂತ ಹಿಂದೂ ಸಂಸ್ಕೃತಿ ಇತ್ತು, ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ ! |
ನವ ದೆಹಲೀ – ಇಜಿಪ್ಟಿನಲ್ಲಿನ ಅಬೂ ಗೋರಾಬನ ಮರಳುಗಾಡಿನಲ್ಲಿ ಪುರಾತತ್ವ ವಿಭಾಗಕ್ಕೆ ಸೂರ್ಯಮಂದಿರ ಪತ್ತೆಯಾಗಿದೆ. ಆ ದೇವಾಲಯವು ೪ ಸಾವಿರ ೫೦೦ ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಇಜಿಪ್ಟಿನಲ್ಲಿ ಒಂದು ಸೂರ್ಯ ದೇವಾಲಯವು ಪತ್ತೆಯಾಗಿತ್ತು.
Archaeologists say they’ve discovered a 4,500-year-old Pharaoh’s sun temple in #Egypthttps://t.co/j0PmGded5L
— TIMES NOW (@TimesNow) November 16, 2021
೧. ಪುರಾತತ್ವ ಶಾಸ್ತ್ರಜ್ಞರ ಅಭಿಪ್ರಾಯದಂತೆ ಈ ದೇವಾಲಯವನ್ನು ರಾಜಾ ಫ್ಯಾರೋ ನ್ಯುಸೆರೆ ಇನೀ ಎಂಬುವವನು ಜೀವಂತವಾಗಿರುವಾಗ ಅದನ್ನು ಕಟ್ಟಿಸಿಕೊಂಡನು. ಜನರು ಅವರಿಗೆ ದೇವರ ದರ್ಜೆ ನೀಡಲಿ, ಎಂಬುದು ಅವನ ಉದ್ದೇಶವಾಗಿತ್ತು. ಮತ್ತೊಂದು ಕಡೆ ಅವನ ಮರಣದ ಬಳಿಕ ಜನರು ಪಿರಾಮಿಡ ಕಟ್ಟಿಸಿದರು ಮತ್ತು ಅದರಲ್ಲಿ ಅವನನ್ನು ಹೂಳಿದರು.
೨. ಇಜಿಪ್ಟಿನ ಉತ್ತರದಲ್ಲಿ ಪುರಾತತ್ವ ಶಾಸ್ತ್ರಜ್ಞರಿಗೆ ಸಿಕ್ಕಿದ ಸೂರ್ಯದೇವಾಲಯದಿಂದ ತಿಳಿದು ಬಂದ ವಿಷಯವೆಂದರೆ ದೇಶದಲ್ಲಿ ಇನ್ನೂ ಸೂರ್ಯ ಮಂದಿರಗಳಿವೆ. ಅನಂತರ ದೇಶದಾದ್ಯಂತ ಈ ದೇವಾಲಯಗಳನ್ನು ಹುಡುಕುವ ಕಾರ್ಯವು ಪ್ರಾರಂಭವಾಗಿದೆ. ಆಗ ಇಜಿಪ್ಟಿನಲ್ಲಿ ಅಂತಹ ೬ ಸೂರ್ಯ ದೇವಾಲಯಗಳಿವೆ, ಹಾಗೂ ಅವು ೪ ಸಾವಿರ ೫೦೦ ವರ್ಷಗಳ ಹಿಂದೆ ಕಟ್ಟಲಾಯಿತು ಎಂದು ತಿಳಿದುಬಂದಿದೆ. ಸೂರ್ಯದೇವಾಲಯವನ್ನು ಕಟ್ಟುವ ಹಿಂದಿನ ಉದ್ದೇಶವೇನಿತ್ತು?, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳಿದರು.
೩. ಪುರಾತತ್ವ ಶಾಸ್ತ್ರಜ್ಞರು ಇನ್ನೂ ಹೆಚ್ಚಿನ ತಪಾಸಣೆಯನ್ನು ನಡೆಸುತ್ತಿದ್ದು, ಈ ದೇವಾಲಯಗಳನ್ನು ಮಣ್ಣಿನ ಇಟ್ಟಿಗೆಯಲ್ಲಿ ಕಟ್ಟಿರುವುದು ತಿಳಿದು ಬಂದಿದೆ. ಈ ದೇವಾಲಯಕ್ಕೆ ೨ ಅಡಿ ಆಳ ಸುಣ್ಣದ ಕಲ್ಲಿನ ಅಡಿಪಾಯವಿತ್ತು. ಮೂಲ ದೇವಾಲಯವು ಅತ್ಯಂತ ಪ್ರೇಕ್ಷಣೀಯವಾಗಿರಬಹುದು, ಎಂಬುದು ತಜ್ಞರ ಅಭಿಪ್ರಾಯವಾಗಿದೆ; ಏಕೆಂದರೆ ಅಬೂ ಗೊರಾಬನಲ್ಲಿ ಸಿಕ್ಕಿರುವ ಅವಶೇಷಗಳ ಸಹಾಯದಿಂದ ಅವರು ಸಂಗಣಕದ ಮೇಲೆ ಈ ದೇವಾಲಯವನ್ನು ರಚಿಸಿದ್ದರು. ಆ ದೇವಾಲಯವು ಅತ್ಯಂತ ಸುಂದರವಾಗಿ ಕಾಣಿಸುತ್ತದೆ. ಅದರ ಜೊತೆಗೆ ಪುರಾತತ್ವ ಶಾಸ್ತ್ರಜ್ಞರಿಗೆ ಅಲ್ಲಿ ಮಣ್ಣಿನ ‘ಜಾರ’(ಹೂಜಿ) ಸಿಕ್ಕಿದೆ, ಮತ್ತು ಅದರಲ್ಲಿ ಮಣ್ಣು ತುಂಬಿತ್ತು. ಆ ಪಾತ್ರೆಯಲ್ಲಿ ಪೂಜೆಯಲ್ಲಿ ಸೂರ್ಯದೇವತೆಗೆ ತೋರಿಸಿರುವ ನೈವೇದ್ಯ ನೀಡಲಾಗುತ್ತಿರಬಹುದು, ಎಂದು ಶಾಸ್ತ್ರಜ್ಞರು ಅಂದಾಜು ನೀಡಿದರು.