2025 ರ ಒಳಗೆ ಯಮುನಾ ನದಿಯ ಶುದ್ಧೀಕರಣವನ್ನು ಪೂರ್ಣಗೊಳಿಸುವೆವು !

ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲರ ಹೇಳಿಕೆ

(ಎಡದಲ್ಲಿ) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ

ನವ ದೆಹಲಿ – ಅತ್ಯಂತ ಕಲುಷಿತವಾಗಿರುವ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು ಹೇಳಿದ್ದಾರೆ. ಯಮುನಾ ನದಿಯನ್ನು 2025 ರ ಒಳಗೆ 6 ಅಂಶಗಳ ಯೋಜನೆಯ ಮೂಲಕ ಸ್ವಚ್ಛಗೊಳಿಸಲಾಗುವುದು. 2025 ರಲ್ಲಿ ನಾನೇ ಖುದ್ದಾಗಿ ನದಿಯಲ್ಲಿ ಮುಳುಗು ಹಾಕುವೆನು ಎಂದು ಕೇಜ್ರಿವಾಲರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ ಎಂದು ಕೇಜ್ರಿವಾಲರು ಹೇಳಿದ್ದಾರೆ. 6 ಅಂಶಗಳ ಮೂಲಕ ಅದನ್ನು ಶುದ್ಧೀಕರಿಸಲಾಗುವುದು. ಪ್ರತಿಯೊಂದು ಅಂಶವನ್ನೂ ಪೂರ್ಣಗೊಳಿಸಲು ಸಮಯ ಮಿತಿ ಹಾಕಲಾಗಿದೆ. ನಾನು ಅದರ ಮೇಲೆ ನಿಗಾ ಇಡುವವನಿದ್ದೇನೆ ಎಂದೂ ಕೇಜ್ರಿವಾಲರು ತಿಳಿಸಿದರು.