ವಿದೇಶಕ್ಕೆ ಹೋಗಿ ಅಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಭಾರತದ ಅಪಮಾನ ಮಾಡುವವರ ಮೇಲೆ ಸರಕಾರವು ದೂರನ್ನು ನೋಂದಾಯಿಸಿ ಅವರನ್ನು ಜೈಲಿಗಟ್ಟುವುದು ಅವಶ್ಯಕವಾಗಿದೆ. ಇದರಿಂದ ಇನ್ನು ಮುಂದೆ ಇತರ ಯಾರೂ ಇಂತಹ ಹೇಳಿಕೆಗಳನ್ನು ನೀಡುವ ಧೈರ್ಯವನ್ನು ತೋರಿಸುವುದಿಲ್ಲ! – ಸಂಪಾದಕರು
ನವ ದೆಹಲಿ – ಅಮೇರಿಕಾದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ನಟ ಮತ್ತು ಹಾಸ್ಯ ಕಲಾವಿದ ವೀರ ದಾಸ ಇವರು ಭಾರತದ ಅಪಮಾನ ಮಾಡಿದ ಪ್ರಕರಣದಿಂದ ಅವರನ್ನು ಟೀಕಿಸಲಾಗುತ್ತಿದೆ.
Vir Das in trouble over video; complaints lodged over ‘derogatory’ comments against India https://t.co/f554ChHvdA
— Republic (@republic) November 17, 2021
1. ವೀರ ದಾಸರವರು ತಮ್ಮ ‘ಯುಟ್ಯೂಬ್ ಚಾನೆಲ್’ ನಲ್ಲಿ ‘ಐ ಕಮ್ ಫ್ರಮ್ ಟೂ ಇಂಡಿಯಾಸ್’ (ನಾನು ಎರಡು ಭಾರತಗಳಿಂದ ಬಂದಿದ್ದೇನೆ) ಎಂಬ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಅದು ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ `ಜಾನ್ ಎಫ್ ಕೆನಡಿ ಸೆಂಟರ್’ ನಲ್ಲಿ ಅವರು ಮಾಡಿದ್ದ ಕಾರ್ಯಕ್ರಮದ ವಿಡಿಯೋ ಆಗಿತ್ತು. 6 ನಿಮಿಷಗಳ ಈ ವಿಡಿಯೋದಲ್ಲಿ ದಾಸ ಇವನು `ನಾನು ಯಾವ ಭಾರತದಿಂದ ಬಂದಿದ್ದೇನೆಂದರೆ ಅಲ್ಲಿ ಹಗಲಿನಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆ ಮತ್ತು ರಾತ್ರಿ ಅವರ ಮೇಲೆ ಬಲಾತ್ಕಾರವಾಗುತ್ತದೆ. ನಾನು ಎಂತಹ ಭಾರತದಿಂದ ಬಂದಿದ್ದೇನೆಂದರೆ ಹವಾಮಾನದ ಗುಣಮಟ್ಟದ ನಿರ್ದೇಶಾಂಕವು 900 (ಈ ನಿರ್ದೇಶಾಂಕವು 50 ಕ್ಕಿಂತಲೂ ಕಡಿಮೆ ಇರುವುದು ಆವಶ್ಯಕವಾಗಿದೆ.) ಇದೆ. ಹೀಗಿರುವಾಗಲೂ ನಾವು ನಮ್ಮ ಮನೆಯ ಛಾವಣಿಯ ಮೇಲೆ ಮಲಗುತ್ತೇವೆ ಮತ್ತು ರಾತ್ರಿ ನಕ್ಷತ್ರ ಎಣಿಸುತ್ತೇವೆ’ ಎಂದು ಹೇಳಿದ್ದಾನೆ.
2. ವೀರ ದಾಸರವರು ತಮ್ಮ ಮೇಲಾಗುತ್ತಿರುವ ಟೀಕೆಗಳ ಮೇಲೆ ಸ್ಪಷ್ಟೀಕರಣ ನೀಡುತ್ತ `ನನಗೆ ದೇಶದ ಅಪಮಾನ ಮಾಡುವ ಉದ್ದೇಶವಿರಲಿಲ್ಲ, ಆದರೆ ಇಂತಹ ಎಲ್ಲ ಪ್ರಕರಣಗಳಿರುವಾಗಲೂ ದೇಶವು ‘ಮಹಾನ’ ಆಗಿರುವುದನ್ನು ನೆನಪಿಸುವ ಉದ್ದೇಶವಿತ್ತು. ಈ ವಿಡಿಯೋದಲ್ಲಿ ಒಂದೇ ವಿಷಯದ ಮೇಲೆ ಎರಡು ವಿಭಿನ್ನ ವಿಚಾರಗಳಿರುವ ಜನರ ಬಗ್ಗೆ ಮಾತನಾಡಲಾಗಿದ್ದು ಇದು ಯಾವುದೇ ರಹಸ್ಯವಲ್ಲ, ಎಂಬುದು ಜನರಿಗೆ ತಿಳಿದಿಲ್ಲ’ ಎಂದು ಹೇಳಿದರು.