ಓಡಿಶಾದಲ್ಲಿ ದಾಳಿ ನಡೆಸಲು ಹೋಗಿದ್ದ ಸಿಬಿಐ ಅಧಿಕಾರಿಗಳ ಮೇಲೆ ಸ್ಥಳೀಯ ನಾಗರಿಕರಿಂದ ಹಲ್ಲೆ

ಮಕ್ಕಳ ಅಶ್ಲೀಲ ಚಲನಚಿತ್ರಗಳ ಪ್ರಕರಣ

ಇದರಿಂದ ಸಮಾಜದಲ್ಲಿ ಪೊಲೀಸರ ಎಷ್ಟು ಪ್ರಭಾವವಿದೆ ಎಂಬುದು ಗಮನಕ್ಕೆ ಬರುತ್ತದೆ ! ಸರಕಾರವು ಇಂತಹ ನಾಗರಿಕರ ಮೇಲೆ ಕ್ರಮ ಕೈಗೊಳ್ಳಬೇಕು !- ಸಂಪಾದಕರು 

ಭುವನೇಶ್ವರ (ಓಡಿಶಾ) – ಮಕ್ಕಳ ಅಶ್ಲೀಲ ಚಲನಚಿತ್ರ ಪ್ರಕರಣದಲ್ಲಿ ಕೇಂದ್ರ ತನಿಖಾ ವಿಭಾಗವು (ಸಿಬಿಐ) ದೇಶದ 14 ರಾಜ್ಯಗಳಲ್ಲಿನ 77 ಸ್ಥಳದಲ್ಲಿ ದಾಳಿ ನಡೆಸಿದೆ. ಆ ಸಮಯದಲ್ಲಿ ಓಡಿಶಾದ ಢೆಂಕಾನಲ ಇಲ್ಲಿಯ ಗುಂಪಿನಿಂದ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಢೆಂಕಾನಾಲನಲ್ಲಿ ಸುರೇಂದ್ರ ನಾಯಕ್ ಇವರ ಮನೆಯ ಮೇಲೆ ದಾಳಿ ನಡೆಸಿ ಆತನ ವಿಚಾರಣೆ ನಡೆಸುತ್ತಿರುವಾಗ ಆಕ್ರೋಶಗೊಂಡ ನಾಗರಿಕರು ಈ ದಳದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ಅವರು ಕೈಯಲ್ಲಿ ಲಾಠಿಗಳು ತೆಗೆದುಕೊಂಡು ಅಧಿಕಾರಿಗಳನ್ನು ಸುತ್ತುವರಿದರು ಮತ್ತು ಅವರನ್ನೂ ನಾಯಕ್ ಅವರ ಮನೆಯಿಂದ ಹೊರಗೆಳೆದು ಥಳಿಸಿದರು. ಆ ಸಮಯದಲ್ಲಿ ಸ್ಥಳೀಯ ಪೊಲೀಸರ ಮಧ್ಯಸ್ಥಿಕೆಯಿಂದ ಅಧಿಕಾರಿಗಳನ್ನು ಬಿಡಿಸಲಾಯಿತು.