ನೇಪಾಳವು ಭಾರತದ ಗಡಿಯಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡಲಿದೆ

ನೇಪಾಳವು ಗಡಿ ದಾಟಬಾರದು – ಭಾರತದಿಂದ ಎಚ್ಚರಿಕೆ

ಕಾಠಮಾಂಡು (ನೇಪಾಳ) – ನೇಪಾಳದಲ್ಲಿ ನವೆಂಬರ್ 11 ರಿಂದ 12 ನೇಯ ಜನಗಣತಿ ಪ್ರಾರಂಭವಾಗಿದೆ. ನೇಪಾಳವು ಭಾರತದ ಗಡಿಯಲ್ಲಿ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ. ಅಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡುವ ಸಾಧ್ಯತೆ ಇದೆ ಎಂದು ನೇಪಾಳವು ಹೇಳಿದೆ. ಅದಕ್ಕೆ ಭಾರತವು ನೇಪಾಳಕ್ಕೆ ಗಡಿ ದಾಟದಿರಲು ಎಚ್ಚರಿಕೆ ನೀಡಿದೆ.

1. ನೇಪಾಳದ ಅಂಕಿಅಂಶ ಇಲಾಖೆಯ ಮಹಾಸಂಚಾಲಕ ನೆಬಿನ ಲಾಲ ಶ್ರೇಷ್ಠ ಇವರು ಮಾತನಾಡುತ್ತಾ, ನಾವು ದೇಶದ ಅಧಿಕೃತ ನಕಾಶೆಯಲ್ಲಿನ ಎಲ್ಲಾ ಸ್ಥಳಗಳಲ್ಲಿ ಜನಗಣತಿ ಮಾಡುವವರಿದ್ದೇವೆ. ಭಾರತ ಸರಕಾರವು ಅನುಮತಿ ನೀಡಿದರೆ ನಾವು ಲಿಪೂಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧೂರಾ ಈ ಪ್ರದೇಶಗಳಲ್ಲಿಯೂ ಮನೆಮನೆಗೆ ಹೋಗಿ ಮಾಹಿತಿ ಸಂಗ್ರಹಿಸುತ್ತೇವೆ. ಅನುಮತಿ ಸಿಗದಿದ್ದರೆ ನಮ್ಮಲ್ಲಿ ಬೇರೆ ಪರ್ಯಾಯ ಲಭ್ಯವಿಲ್ಲ; ಆದ್ದರಿಂದಲೇ ನಾವು ಉಪಗ್ರಹದ ಮೂಲಕ ತೆಗೆದುಕೊಂಡಿರುವ ಛಾಯಾಚಿತ್ರದ ಸಹಾಯದಿಂದ ಈ ಜನಗಣತಿಯ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಉಪಗ್ರಹ ಮೂಲಕ ನಾವು ಈ ಕ್ಷೇತ್ರದಲ್ಲಿ ಮನೆ ಹಾಗೂ ಅಲ್ಲಿಯ ನಿವಾಸಿಗಳ ಸಂಖ್ಯೆಯ ಅಂದಾಜು ಮಾಡಲಾಗುವುದು ಎಂದು ಹೇಳಿದರು.

2. ಇದಕ್ಕೆ ಭಾರತವು, ನೇಪಾಳದಿಂದ ಭಾರತದ ಗಡಿಯಲ್ಲಿ ಯಾವುದೇ ಚಟುವಟಿಕೆ ನಡೆದರೆ ಅದು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದೆ.