‘ಜೈ ಶ್ರೀರಾಮ್’ ಎಂದು ಘೋಷಣೆ ನೀಡುವವವರು ರಾಕ್ಷಸರು ! – ಕಾಂಗ್ರೆಸ್‍ನ ಹಿರಿಯ ನಾಯಕ ರಾಶೀದ್ ಅಲ್ವಿ

* ಇಸ್ಲಾಮ್‍ನ ಹೆಸರು ತೆಗೆದುಕೊಂಡು, ಪ್ರವಾದಿ ಮುಹಮ್ಮದ್ ಅವರ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಿ ಅಮಾಯಕರನ್ನು ಕೊಲ್ಲುತ್ತಿರುವವರು ಯಾರು ಎಂದು ರಾಶೀದ್ ಅಲ್ವಿ ಹೇಳಬೇಕು ! – ಸಂಪಾದಕರು

* `ಶ್ರೀರಾಮ ಕಾಲ್ಪನಿಕ’, ಎಂದು ಹೇಳುವ ಕಾಂಗ್ರೆಸ್ ಯಾರೆಂದು ರಾಶೀದ್ ಅಲ್ವಿ ಹೇಳಬೇಕು !- ಸಂಪಾದಕರು

ರಾಶೀದ್ ಅಲ್ವಿ

ಸಂಭಾಲ್ (ಉತ್ತರಪ್ರದೇಶ) – ‘ಜೈ ಶ್ರೀರಾಮ್’ನ ಎಂದು ಘೋಷಿಸುವವರೆಲ್ಲರೂ ಋಷಿಗಳಾಗಿರಲು ಸಾಧ್ಯವಿಲ್ಲ. ಪ್ರಸ್ತುತ ಶ್ರೀರಾಮ ಎಂದು ಹೇಳುವ ಕೆಲವರು ಸಂತರಲ್ಲ, ರಾಕ್ಷಸರು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ರಾಶೀದ್ ಅಲ್ವಿ ಇಲ್ಲಿ ನಡೆದ ಕಲ್ಕಿ ಮಹೋತ್ಸವದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ಪ್ರಮೋದ ಕೃಷ್ಣನ್ ಈ ಮಹೋತ್ಸವನ್ನು ಆಯೋಜಿಸಿದ್ದಾರೆ. ಅದರಲ್ಲಿ ಅವರು ಮಾತನಾಡುತ್ತಿದ್ದರು.

ರಾಶೀದ್ ಅಲ್ವಿ ತಮ್ಮ ಭಾಷಣದಲ್ಲಿ ರಾಮಾಯಣದ ಒಂದು ಕಥೆಯನ್ನು ಹೇಳಿದರು. ಅವರು, ಲಂಕೆಯಲ್ಲಿ ಯುದ್ಧದ ಸಮಯದಲ್ಲಿ ಲಕ್ಷ್ಮಣನಿಗೆ ಬಾಣ ತಗಲಿದಾಗ ಹನುಮಂತನು ಸಂಜೀವನಿಯನ್ನು ತರಲು ಹೋಗುವಾಗ ರಾವಣ ಅವನ ದಾರಿಯನ್ನು ತಡೆಯಲು ಓರ್ವ ರಾಕ್ಷಸನನ್ನು ಕಳುಹಿಸಿದನು. ಆತ ಒಂದೆಡೆ ಕುಳಿತು ಶ್ರೀರಾಮನನ್ನು ಸ್ತುತಿಸುತ್ತಿದ್ದನು. ಅದನ್ನು ನೋಡಿದ ಹನುಮಂತ ಅಲ್ಲಿಯೇ ನಿಂತನು; ಆದರೆ ಆತನೊಬ್ಬ ರಾಕ್ಷಸನೆಂದು ಅರಿವಾಯಿತು. ನಂತರ ಅವನು ರಾಕ್ಷಸನನ್ನು ಕೊಂದನು. ಈಗಲೂ ಕೆಲವು ರಾಕ್ಷಸರು ಅದೇ ರೀತಿ ಶ್ರೀರಾಮನ ನಾಮಜಪ ಮಾಡುತ್ತಿದ್ದಾರೆ. (`ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ನೀಡುತ್ತಾ ಜನರನ್ನು ಕೊಲ್ಲುತ್ತಿರುವವರು ಯಾರು ? ಇದನ್ನು ರಾಶಿದ್ ಅಲ್ವಿ ಯಾವಾಗ ಹೇಳುವರು ? – ಸಂಪಾದಕರು) ಭಗವಾನ ಶ್ರೀರಾಮನ ನಾಮವನ್ನು ಸ್ನಾನ ಮಾಡದೇ ಜಪಿಸಲಾಗುತ್ತದೆ. (ಹಿಂದೂ ಧರ್ಮದಲ್ಲಿ, ದೇವರ ನಾಮವನ್ನು ಜಪಿಸಲು ಯಾವುದೇ ಬಂಧನವಿಲ್ಲ. ಹಿಂದೂ ಧರ್ಮದ ಜ್ಞಾನವಿಲ್ಲದಿದ್ದಾಗ ಅದರ ಬಗ್ಗೆ ನಾಲಿಗೆಗೆ ಎಲುಬು ಇಲ್ಲ; ಎಂದು ಏನು ಬೇಕಾದರೂ ಹೇಳುವ ರಾಶೀದ್ ಅಲ್ವಿ ತಮ್ಮ ಧರ್ಮದ ತುಕ್ಕು ಹಿಡಿದ ಆಚರಣೆಗಳ ಬಗ್ಗೆ ಜನರಿಗೆ ತಿಳಿಸಬೇಕು, ಅದು ಹೆಚ್ಚು ಸೂಕ್ತವಾಗಿರುತ್ತದೆ ! – ಸಂಪಾದಕರು) ಆದ್ದರಿಂದ ನಾನು, ಭಗವಾನ ಕಲ್ಕಿಯು ಶೀಘ್ರವಾಗಿ ಅವತಾರವನ್ನು ತಾಳಿ ಅಪರಾಧಿಗಳನ್ನು ನಾಶ ಮಾಡಲಿ ಎಂದು ಪ್ರಾರ್ಥಿಸುವೆ ಎಂದು ಹೇಳಿದರು.