ಬಂಗಾಲದ ಗಡಿಯೊಳಗೆ ನುಸುಳಿ ಕಬ್ಬಿಣದ ರಾಡ್‍ಗಳಿಂದ ಸೈನಿಕರ ಮೇಲೆ ದಾಳಿ ನಡೆಸಿದ ಬಾಂಗ್ಲಾದೇಶದ ಗೋಕಳ್ಳಸಾಗಾಣಿಕೆದಾರರು

ಭಾರತೀಯ ಯೋಧರ ಗುಂಡಿನ ದಾಳಿಯಲ್ಲಿ ಇಬ್ಬರು ಬಾಂಗ್ಲಾದೇಶದ ಗೋಕಳ್ಳಸಾಗಾಣಿಕೆದಾರರು ಹತ

ಇಂತಹ ನುಸುಳುಕೋರ ಗೋಕಳ್ಳಸಾಗಾಣಿಕೆಗಾರರು ಸೈನಿಕರ ಮೇಲೆ ದಾಳಿ ಮಾಡುವ ಮೊದಲು, ಅಂದರೆ ಅವರನ್ನೆಲ್ಲ ಕಂಡಲ್ಲಿ ಗುಂಡಿಕ್ಕುವಂತೆ ಸರಕಾರವು ಆದೇಶವನ್ನು ನೀಡಬೇಕು ! -ಸಂಪಾದಕರು

ಕೂಚ್‍ಬಿಹಾರ್ (ಬಂಗಾಲ) – ಇಲ್ಲಿಯ ಬಾಂಗ್ಲಾದೇಶದ ಗಡಿಯಲ್ಲಿ ರಾತ್ರಿ ವೇಳೆ ಗೋಕಳ್ಳಸಾಗಾಣಿಕೆಗಾರರು ಭಾರತದ ಗಡಿಯೊಳಗೆ ನುಸುಳುತ್ತಿರುವಾಗ ಗಡಿ ಭದ್ರತಾ ಪಡೆಗಳು ಅವರನ್ನು ತಡೆಯಲು ಯತ್ನಿಸಿದವು. ಈ ವೇಳೆ ಗೋಸಾಗಾಟಗಾರರು ಕಬ್ಬಿಣದ ರಾಡ್‍ಗಳಿಂದ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಪರಿಣಾಮವಾಗಿ, ಸೈನಿಕರು ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಇದರಲ್ಲಿ ಇಬ್ಬರು ಬಾಂಗ್ಲಾದೇಶಿ ಗೋಕಳ್ಳಸಾಗಾಣಿಕೆದಾರರು ಹತರಾದರು.