ಭಾರತ ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣಕರ್ತರು ! – ಅಸದುದ್ದೀನ್ ಓವೈಸಿ

ಎಂಐಎಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ

ಮುರಾದಾಬಾದ್ (ಉತ್ತರಪ್ರದೇಶ) – ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಾಜಪ ಮತ್ತು ಸಮಾಜವಾದಿ ಪಕ್ಷದ ಜನರು ಇತಿಹಾಸವನ್ನು ಓದುವುದಿಲ್ಲ, ಅವರಿಗೆಲ್ಲ ನನ್ನ ಸವಾಲು ಏನೆಂದರೆ ವಿಭಜನೆಗೆ ಮುಸಲ್ಮಾನರು ಅಥವಾ ಮಹಮ್ಮದ್ ಜಿನ್ನಾ ಇವರು ಕಾರಣರಲ್ಲ. ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣ ಎಂದು ಎಂಐಎಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಇಲ್ಲಿ ನಡೆದ ಸಭೆಯಲ್ಲಿ ಹೇಳಿದರು. ಸುಹೇಲ್‍ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಒಪಿ ರಾಜ್‍ಭರ್ ಇವರು, `ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಮಾಡುತ್ತಿದ್ದರೆ, ದೇಶ ವಿಭಜನೆಯಾಗುತ್ತಿರಲಿಲ್ಲ;, ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ ಮೇಲಿನ ಹೇಳಿಕೆ ನೀಡಿದ್ದಾರೆ.