`ಇಂದು ಹಿಂದುತ್ವದ ಹೆಸರಿನಲ್ಲಿ ಏನು ನಡೆಯುತ್ತಿದೆಯೋ ಅದು ಹಿಂದುತ್ವವಲ್ಲ !’ – ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ

* ಇಸ್ಲಾಂ ಹೆಸರಿನಲ್ಲಿ ದಶಕಗಳಿಂದ ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದು ಇಸ್ಲಾಂ ಅಲ್ಲ ಎಂದು ಕೇಜ್ರಿವಾಲರು ಇಲ್ಲಿಯವರೆಗೆ ಏಕೆ ಹೇಳಲಿಲ್ಲ? – ಸಂಪಾದಕರು

* `ಏಸುಕ್ರಿಸ್ತನ ಹೆಸರಿನಲ್ಲಿ ಭಾರತದಲ್ಲಿ ಕಳೆದ ಹಲವು ದಶಕಗಳಿಂದ ಮುಗ್ಧ ಹಿಂದೂಗಳನ್ನು ಆಮಿಷಗಳನ್ನು ತೋರಿಸಿ ಮತಾಂತರಿಸಲಾಗುತ್ತಿದೆ, ಅದು ಕ್ರೈಸ್ತ ಧರ್ಮವಲ್ಲ’, ಎಂದು ಕೇಜ್ರಿವಾಲ ಇವರು ಇಲ್ಲಿಯವರೆಗೆ ಏಕೆ ಹೇಳಲಿಲ್ಲ ? – ಸಂಪಾದಕರು

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ

ನವದೆಹಲಿ : ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕನ್ನುಂಟು ಮಾಡುವುದು, ಗಲಭೆ ನಡೆಸುವುದು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸುವುದು, ಇದೆಲ್ಲ ಹಿಂದುತ್ವವಲ್ಲ ಆದರೆ ಒಬ್ಬ ವ್ಯಕ್ತಿಯನ್ನು ಮತ್ತೊಬ್ಬರಿಗೆ ಜೋಡಿಸುವುದು `ಹಿಂದುತ್ವ’ ಆಗಿದೆ. (ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಬಲವಂತದ ಮತಾಂತರ, ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ದಾಳಿ, ಕ್ಷುಲ್ಲಕ ಕಾರಣಕ್ಕೆ ಮತಾಂಧರಿಂದ ಗಲಭೆಗಳು, ಈ ಬಗ್ಗೆ ಕೇಜ್ರಿವಾಲರು ಏಕೆ ಮಾತನಾಡುವುದಿಲ್ಲ? ದೆಹಲಿಯ ಗಲಭೆಯ ಪ್ರಕರಣದಲ್ಲಿ ಅವರದೇ ಪಕ್ಷದ ತಾಹಿರ ಹುಸೆನನೆಂಬ ನಗರ ಸೇವಕರನ್ನು ಬಂಧಿಸಲಾಗಿತ್ತು, ಅವರ ಕೃತ್ಯದ ಕೇಜ್ರಿವಾಲರು ಏಕೆ ಖಂಡಿಸಲಿಲ್ಲ ? – ಸಂಪಾದಕರು) ಇಂದು ಹಿಂದುತ್ವ ಎಂಬ ಹೆಸರಿನಲ್ಲಿ ಏನೆಲ್ಲ ನಡೆಯುತ್ತಿದೆ ಅದು ಹಿಂದುತ್ವವಲ್ಲ. ಈ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಗೆ ಬೈಗುಳ ನೀಡುತ್ತಾರೆ, ಬೆದರಿಕೆ ಹಾಕುತ್ತಾರೆ ಇವು ಹಿಂದುತ್ವವಲ್ಲ, ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರು `ಟೈಮ್ಸ್ ನೌ-ನವಭಾರತ್’ ಆಯೋಜಿಸಿದ್ದ ಸಮಾವೇಶದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು.

ಕೇಜ್ರಿವಾಲರು ತಮ್ಮ ಮಾತನ್ನು ಮುಂದುವರೆಸುತ್ತಾ, ಭಗವಾನ ಶ್ರೀರಾಮನು ಪ್ರತಿಯೊಬ್ಬ ಹಿಂದೂಗಳ ಆರಾಧ್ಯ ದೇವರಾಗಿದ್ದಾರೆ, ನನ್ನ ಅಭಿಪ್ರಾಯದಲ್ಲಿ, ರಾಮಚಂದ್ರ ಅವರು ಉಚ್ಚರಿಸಿದ ಪ್ರತಿಯೊಂದು ಶಬ್ದ, ಅವರ ಮಾತು, ಅದು ನನಗಾಗಿ ಹಿಂದುತ್ವವಾಗಿದೆ. ಪ್ರಭು ರಾಮನ ಜೀವನ, ಸ್ಫೂರ್ತಿ ಮತ್ತು ಆಚರಣೆ ಇವು ನಿಜವಾದ ಹಿಂದುತ್ವವಾಗಿದೆ. ನನಗೆ ದೇಶದ 130 ಕೋಟಿ ಜನರನ್ನು ಒಟ್ಟುಗೂಡಿಸಲಿಕ್ಕಿದೆ. ನನಗೆ ಮನುಷ್ಯನನ್ನು ಮನುಷ್ಯನೊಂದಿಗೆ ಜೋಡಿಸಬೇಕಿದೆ ಮತ್ತು ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಬಯಸುತ್ತೇನೆ. ತಮ್ಮ ಆಮ್ ಆದ್ಮಿ ಪಕ್ಷ ನಿಜವಾದ ಹಿಂದುತ್ವವನ್ನು ಅನುಸರಿಸುತ್ತಿದೆ ಎಂದು ಕೇಜ್ರಿವಾಲರು ಹೇಳಿದ್ದಾರೆ. (ಹಿಂದುತ್ವವನ್ನು ಅನುಸರಿಸಲು ಹಿಂದೂಗಳ, ಹಿಂದೂ ಧರ್ಮವನ್ನು, ಹಿಂದೂ ದೇವಾಲಯಗಳನ್ನು ರಕ್ಷಿಸುವುದು ಅಪೇಕ್ಷಿತವಿದೆ. ಕಾಶ್ಮೀರಿ ಹಿಂದೂಗಳಿಗಾಗಿ, ಬಂಗಾಲದ ಹಿಂದೂಗಳಿಗಾಗಿ ಕೇಜ್ರಿವಾಲರು ಏನನ್ನೂ ಮಾಡಿಲ್ಲ. ಆದ್ದರಿಂದ ಅವರ ಹಿಂದುತ್ವವು ನಕಲಿಯಾಗಿದೆ, ಅದೇ ರೀತಿ ರಾಜಕೀಯ ನಾಟಕವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)