‘ಬಾಬರಿ ಮಸೀದಿಯನ್ನು ಯಾರೂ ಕೆಡವಲಿಲ್ಲ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ !'(ಅಂತೆ) – ಕಾಂಗ್ರೆಸ್ ನಾಯಕ ಪಿ. ಚಿದಂಬರಮ್

* 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿದ್ದ ಶ್ರೀರಾಮ ಮಂದಿರವನ್ನು ಕೆಡವಿದ್ದು ಯಾರು ಮತ್ತು ಅಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದವರು ಯಾರು ? ಇದನ್ನು ಪಿ. ಚಿದಂಬರಮ್ ಏಕೆ ಹೇಳುತ್ತಿಲ್ಲ ? ಇದನ್ನು ಹೇಳಲು ಅವರಿಗೆ ನಾಚಿಕೆಯಾಗುತ್ತದೆಯೇ ? – ಸಂಪಾದಕರು

* 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಯಾರೂ ಮೂರೂವರೆ ಸಾವಿರ ಸಿಕ್ಖ್‍ರನ್ನು ಯಾರೂ ಹತ್ಯೆ ಮಾಡಿಲ್ಲ. ಎಂಬುದನ್ನು ಹೇಳಲು ಪಿ. ಚಿದಂಬರಮ್‍ಗೆ ನಾಚಿಕೆಯಾಗುತ್ತದೆಯೇ? – ಸಂಪಾದಕರು

* 1948ರಲ್ಲಿ ಗಾಂಧಿ ಹತ್ಯೆಯ ನಂತರ ದೇಶದಲ್ಲಿ ಯಾರೂ ಬ್ರಾಹ್ಮಣರನ್ನು ಕೊಂದಿರಲಿಲ್ಲ. ಎಂದು ಹೇಳಲು ಪಿ. ಚಿದಂಬರಮ್‍ಗೆ ನಾಚಿಕೆಯಾಗುತ್ತದೆಯೇ? – ಸಂಪಾದಕರು

* ಶ್ರೀರಾಮನು ಕಾಲ್ಪನಿಕ ಮತ್ತು ರಾಮಸೇತುವೆಯನ್ನು ಶ್ರೀರಾಮನು ನಿರ್ಮಿಸಿಲ್ಲ, ಎಂದು ಹೇಳುವ ಕಾಂಗ್ರೆಸ್‍ನ ಬಗ್ಗೆ ಪಿ. ಚಿದಂಬರಮ್‍ಗೆ ಏಕೆ ನಾಚಿಕೆಯಾಗುತ್ತಿಲ್ಲ ? – ಸಂಪಾದಕರು

* ಅನುಕೂಲಕ್ಕೆ ತಕ್ಕಂತೆ ನಾಚಿಕೆ ಪಡುವ ಪಿ. ಚಿದಂಬರಮ್ ಒಬ್ಬ `ಹಿಂದೂ’ ಆಗಿದ್ದಾರೆ, ಎಂಬುದಕ್ಕೆ ಹಿಂದೂಗಳಿಗೆ ನಾಚಿಕೆಯಾಗುತ್ತಿದೆ ! – ಸಂಪಾದಕರು

ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಮ್

ನವದೆಹಲಿ – ಈ ದೇಶ ನೆಹರು, ಗಾಂಧಿ, ಎ.ಪಿ.ಜೆ. ಅಬ್ದುಲ್ ಕಲಾಂ ಅವರದ್ದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ, ‘ಬಾಬರಿ ಮಸೀದಿಯನ್ನು ಯಾರೂ ಕೆಡವಲಿಲ್ಲ’ ಎಂದು ಹೇಳಲು ನಾಚಿಕೆಯಾಗುತ್ತಿದೆ. ಈ ತೀರ್ಮಾನ ನಮ್ಮನ್ನು ಶಾಶ್ವತವಾಗಿ ಕಾಡುತ್ತದೆ, ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಮ್ ಹೇಳಿದ್ದಾರೆ. ಅವರು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ಬಿಡುಗಡೆ ಸಮಯದಲ್ಲಿ ಮಾತನಾಡುತ್ತಿದ್ದರು.

ಪಿ. ಚಿದಂಬರಮ್ ತಮ್ಮ ಮಾತನ್ನು ಮುಂದುವರೆಸುತ್ತಾ, 1992ರ ಡಿಸೆಂಬರ್ 6 ರಂದು ಏನು ನಡೆಯಿತೋ, ಅದು ತುಂಬಾ ಅಯೋಗ್ಯವಾಗಿತ್ತು. ಈ ಘಟನೆಯು ನಮ್ಮ ಸಂವಿಧಾನಕ್ಕೆ ಕಳಂಕ ತಂದಿದೆ. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. ಹಾಗಾಗಿ ಜೆಸಿಕಾ ಲಾಲ್‍ನನ್ನು ಯಾರೂ ಕೊಂದಿಲ್ಲ, ಅದೇ ರೀತಿ ಬಾಬರಿ ಮಸೀದಿಯನ್ನು ಕೆಡವಲಿಲ್ಲ. ಸಮಯ ಕಳೆದಂತೆ, ಎರಡೂ ಪಕ್ಷಗಳು ಅದನ್ನು ಒಪ್ಪಿದವು (ಅಯೋಧ್ಯೆ ತೀರ್ಪು). ಎರಡೂ ಕಡೆಯವರು ಅದಕ್ಕೆ ಒಪ್ಪಿಗೆ ನೀಡಿದ ಕಾರಣ ಅದು ಯೋಗ್ಯ ನಿರ್ಧಾರವಾಯಿತು; ಆದರೆ ಎರಡೂ ಪಕ್ಷದವರು ಒಪ್ಪಿಕೊಂಡಿರುವ ನಿರ್ಧಾರ ಸರಿಯಲ್ಲ. ದೆಹಲಿಯಲ್ಲಿ ಒಂದು ಬಾರ್‍ನಲ್ಲಿ `ಜೆಸ್ಸಿಕಾ ಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಇನ್ನೂ ಯಾರಿಗೂ ತಪ್ಪಿತಸ್ಥರೆಂದು ಶಿಕ್ಷೆಯಾಗಿಲ್ಲ ಎಂದು ಹೇಳಿದರು.