ಸಭೆಯಲ್ಲಿ ಮಂಡಿಸಿರುವ ಅಂಶಕ್ಕೆ ನಮ್ಮ ಬೆಂಬಲವಿದೆ ! – ತಾಲಿಬಾನ್

ಅಫ್ಘಾನಿಸ್ತಾನ ಸಮಸ್ಯೆ ಬಗ್ಗೆ ಆಯೋಜಿಸಿದ್ದ ಭಾರತ ಸಹಿತ ಎಂಟು ದೇಶಗಳ ಸಭೆ

ಕಾಬುಲ(ಅಫಘಾನಿಸ್ತಾನ) – ಭಾರತದ ಮುಂದಾಳತ್ವದಲ್ಲಿ ನವೆಂಬರ್ 10 ರಂದು ದೆಹಲಿಯಲ್ಲಿ ಭಾರತ ಸಹಿತ 8 ಏಷಿಯನ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಫಘಾನಿಸ್ತಾನದ ಸಮಸ್ಯೆಯ ಬಗ್ಗೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯ ನಂತರ `ಅಫ್ಘಾನಿಸ್ತಾನದ ಭೂಮಿಯು ಜಾಗತಿಕ ಭಯೋತ್ಪಾದನೆಗಾಗಿ ಬಳಕೆಯಾಗಬಾರದು, ಅದಕ್ಕಾಗಿ ಪ್ರಯತ್ನಿಸಬೇಕು ಹಾಗೂ ಆ ದೇಶದಲ್ಲಿ ಎಲ್ಲರ ಒಪ್ಪಿಗೆ ಇರುವ ಸರಕಾರ ಸ್ಥಾಪನೆ ಆಗುವುದು ಆವಶ್ಯಕವಾಗಿದೆ’, ಎಂದು ಘೋಷಣಾಪತ್ರದಲ್ಲಿ ಹೇಳಲಾಗಿದೆ. ಈ ವಿಷಯವಾಗಿ ತಾಲಿಬಾನ್‍ನ ವಕ್ತಾರರಾದ ಸುಹೆಲ ಶಾಹಿನನು, ತಾಲಿಬಾನ್ ಈ ಸಭೆಯನ್ನು ಸಕಾರಾತ್ಮಕ ಘಟನಾವಳಿಯೆಂದು ನೋಡುತ್ತಿದೆ, ಈ ಸಭೆಯ ಮೂಲಕ ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲು ಸಹಾಯವಾಗಲಿದೆ ಎಂದು ಅನಿಸುತ್ತದೆ, ನಮ್ಮ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ತರುವುದರ ಜೊತೆಗೆ ನಾಗರಿಕರಿಗೆ ಉದ್ಯೋಗ ಸೃಷ್ಟಿಸುವ ಮತ್ತು ದೇಶದಲ್ಲಿನ ಬಡತನ ಹೋಗಲಾಡಿಸಲು ಸಹಾಯ ಮಾಡುವ ಯಾವುದೇ ಉಪಕ್ರಮಕ್ಕೆ ನಾವು ಬೆಂಬಲ ನೀಡುತ್ತೇವೆ. ಆದ್ದರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯಲ್ಲಿ ಯಾವ ಅಂಶಗಳನ್ನು ಮಂಡಿಸಲಾಗಿದೆಯೋ, ಅದಕ್ಕೆ ನಮ್ಮ ಬೆಂಬಲವಿದೆ’, ಎಂದಿದ್ದಾನೆ.

ಈ ಸಭೆಯಲ್ಲಿ ಭಾರತ, ಇರಾನ್, ರಶಿಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್, ಮತ್ತು ಉಜ್ಬೇಕಿಸ್ತಾನ್ ಈ 8 ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಹ ಭಾಗಿಯಾಗಿದ್ದರು. ಈ ಸಭೆಗಾಗಿ ಭಾರತವು ಚೀನಾ ಮತ್ತು ಪಾಕಿಸ್ತಾನಕ್ಕೂ ಆಮಂತ್ರಣ ನೀಡಿತ್ತು. ಆದರೆ ಎರಡೂ ದೇಶಗಳು ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದರು.