ಮುರಾದಾಬಾದ (ಉತ್ತರಪ್ರದೇಶ) ಇಲ್ಲಿ ಗೋಕಳ್ಳಸಾಗಾಟದ ಪ್ರಕರಣದಲ್ಲಿ 7 ವರ್ಷಗಳ ನಂತರ ಕಾಂಗ್ರೆಸ್‍ನ ಮಹಿಳಾ ನಗರಾಧ್ಯಕ್ಷೆ ಮಾಹಿರಾ ಖಾನ್ ಬಂಧನ

* ಈ ಪ್ರಕರಣದಲ್ಲಿ ಏಳು ವರ್ಷಗಳ ಕಾಲ ಕ್ರಮಕೈಗೊಳ್ಳದವರ ಮೇಲೆಯೂ ಕ್ರಮ ಕೈಗೊಳ್ಳಬೇಕು !- ಸಂಪಾದಕರು 

* ಗೋಹತ್ಯೆಯನ್ನು ಬೆಂಬಲಿಸುವ ಕಾಂಗ್ರೆಸ್‍ನಲ್ಲಿನ ಮತಾಂಧ ನಾಯಕರು ಗೋಹತ್ಯೆ ಮತ್ತು ಗೋಕಳ್ಳಸಾಗಣೆ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ? ಇಂತಹ ಕಾಂಗ್ರೆಸ್‍ಗೆ ಹಿಂದೂಗಳು ಚುನಾವಣೆಯಲ್ಲಿ ಪಾಠ ಕಲಿಸಿದರೂ ಎಚ್ಚೆತ್ತುಕೊಳ್ಳಲಿಲ್ಲ. ಅದಕ್ಕಾಗಿ ಅದನ್ನು ರಾಜಕೀಯ ದೃಷ್ಟಿಯಲ್ಲಿ ಮುಗಿಸುವುದೇ ಯೋಗ್ಯ !- ಸಂಪಾದಕರು 

* ಅಪರಾಧಗಳಲ್ಲಿ ಮತಾಂಧ ಮಹಿಳೆಯರೂ ಹಿಂದೆ ಬಿದ್ದಿಲ್ಲ, ಎಂಬುದಕ್ಕೆ ಈ ಘಟನೆಯೇ ಸಾಕ್ಷಿ !- ಸಂಪಾದಕರು 

* ಇಂತಹವರಿಗೆ ಕಾಂಗ್ರೆಸ್ ನಗರಾಧ್ಯಕ್ಷ ಸ್ಥಾನವನ್ನು ನೀಡುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು 

ಕಾಂಗ್ರೆಸ್‍ನ ನಾಯಕಿ ಮಾಹಿರಾ ಖಾನ್

ಮುರಾದಾಬಾದ(ಉತ್ತರಪ್ರದೇಶ) – ಇಲ್ಲಿಯ ಕಾಂಗ್ರೆಸ್‍ನ ನಾಯಕಿ ಮಾಹಿರಾ ಖಾನ್ ಅಲಿಯಾಸ್ ಮಹಕ ವಾರಸಿ ಇವರಿಗೆ ಏಳು ವರ್ಷದ ನಂತರ ಗೋಹತ್ಯೆ, ಗೋಕಳ್ಳಸಾಗಾಣಿಕೆ ಮತ್ತು ವಂಚನೆ ಈ ಆರೋಪಗಳ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿದೆ. ಮಾಹಿರಾ ಕಾಂಗ್ರೆಸ್‍ನ ಮುರಾದಾಬಾದ್ ನಗರ ಮಹಿಳಾ ಅಧ್ಯಕ್ಷೆ ಆಗಿದ್ದಾರೆ.

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರ ಇರುವಾಗ ಮಾಹಿರಾ ಗೋಹತ್ಯೆ ಮತ್ತು ಜಾನುವಾರು ಕಳ್ಳಸಾಗಾಣಿಕೆ ನಡೆಸುತ್ತಿದ್ದರು. ಆ ಸಮಯದಲ್ಲಿ ರಾಜಕೀಯ ಬೆಂಬಲದಿಂದ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ, ಎಂದು ಹೇಳಲಾಗುತ್ತಿದೆ. ಮಾಹಿರಾ ಇವರ ವಿರುದ್ಧ ಅವರ ಮಹಾವಿದ್ಯಾಲಯಕ್ಕೆ ಸರಕಾರಿ ಅನುಮತಿ ಕೊಡಿಸುವ ಹೆಸರಿನಲ್ಲಿ ಮೂರೂವರೆ ಲಕ್ಷ ರೂಪಾಯಿ ವಂಚನೆ ನಡೆಸಿರುವ ಪ್ರಕರಣದ ಆರೋಪ ದಾಖಲಾಗಿದೆ. ಈ ಪ್ರಕರಣದಲ್ಲಿ ಮಹಿರಾ ಇವರ ಮೇಲೆ ನ್ಯಾಯಾಲಯದಲ್ಲಿ ಆರೋಪಪತ್ರ ದಾಖಲಿಸಿ ಮೊಕದ್ದಮೆ ನಡೆಸಲಾಗುತ್ತಿತ್ತು.