ಮುಜಫ್ಫರ್‍ನಗರದಲ್ಲಿ (ಉತ್ತರಪ್ರದೇಶ) ಒಂದೇ ಕುಟುಂದ 15 ಮುಸಲ್ಮಾನರು ಹಿಂದೂ ಧರ್ಮಕ್ಕೆ `ಘರವಾಪಸಿ !’

18 ವರ್ಷಗಳ ಹಿಂದೆ ಭಯದಿಂದ ಇಸ್ಲಾಂ ಧರ್ಮದ ಸ್ವೀಕಾರ !

* ಯಾವ ಹಿಂದೂಗಳನ್ನು ಶೋಷಣೆ, ಬಲವಂತವಾಗಿ, ವಂಚನೆ, ಆಮಿಷ ತೋರಿಸಿ ಮತಾಂತರಿಸಲಾಗಿತ್ತು, ಅದೇ ರೀತಿ ಯಾವ ಹಿಂದೂಗಳು ಹೆದರಿ ಮತಾಂತರಗೊಂಡರೊ, ಅವರೆಲ್ಲರೂ ಈ ಕುಟುಂಬದವರ ಆದರ್ಶವಿಟ್ಟುಕೊಂಡು ಘರವಾಪಸಿ ಆಗಬೇಕು ಮತ್ತು ಸರಕಾರವೂ ಅವರಿಗೆ ರಕ್ಷಣೆ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

* ಯಾರಿಗೆ ಪುನಃ ಹಿಂದೂ ಧರ್ಮಕ್ಕೆ ಮರಳಲು ಅನಿಸುತ್ತದೆ, ಇಂತಹವರಿಗೆ ಈಗ ಭಾರತ ಸರಕಾರವು ಮುಂದಾಳತ್ವ ವಹಿಸಿ ವಿಶೇಷ ಯೋಜನೆಯನ್ನು ಜಾರಿಗೊಳಿಸಿ ಅವರನ್ನು ಘರವಾಪಸಿ ಮಾಡಿಕೊಳ್ಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

* ಒಬ್ಬ ಹಿಂದೂ ಕೂಡ ಮತಾಂತರವಾಗದಿರಲು ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಅವಶ್ಯಕ !- ಸಂಪಾದಕರು 

ಘರವಾಪಸಿ : ಘರವಾಪಸಿ ಎಂದರೆ ಮೂಲತಃ ಹಿಂದೂವಾಗಿದ್ದ ವ್ಯಕ್ತಿಯು ಮತಾಂತರಗೊಳ್ಳುವುದು ಮತ್ತು ಕಾಲಾಂತರಗಳಲ್ಲಿ ಸ್ವೇಚ್ಛೆಯಿಂದ ಪುನಃ ಹಿಂದೂ ಧರ್ಮಕ್ಕೆ ಮರಳಿ ಬರುವುದು

ಮುಜಫ್ಫರ್‍ನಗರ (ಉತ್ತರಪ್ರದೇಶ) – ಬಾಘರಾದಲ್ಲಿ ಒಂದು ಮುಸ್ಲಿಂ ಕುಟುಂಬದ 15 ಸದಸ್ಯರು ಹಿಂದೂ ಧರ್ಮವನ್ನು ಸ್ವೀಕರಿಸಿ `ಘರವಾಪಸಿ’ ಆಗಿದ್ದಾರೆ. ಅವರು 18 ವರ್ಷಗಳ ಹಿಂದೆ ಭಯದಿಂದ ಇಸ್ಲಾಂಗೆ ಮತಾಂತರಗೊಂಡಿದ್ದರು; ಆದರೆ ಈಗ ಪುನಃ ಹಿಂದೂ ಧರ್ಮಕ್ಕೆ ಮರಳಿದ್ದಾರೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಕುಟುಂಬವು ಬಿನೌಲಿ ಪ್ರದೇಶದವರಾಗಿದ್ದು, ಅವರು ನವೆಂಬರ್ 8 ರಂದು `ಯೋಗ ಸಾಧನಾ ಯಶವೀರ್ ಆಶ್ರಮ’ಕ್ಕೆ ಹೋಗಿ ಹಿಂದೂ ಧರ್ಮವನ್ನು ಸ್ವೀಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಬಳಿಕ ಆಶ್ರಮದ ಸಂಚಾಲಕ ಯಶವೀರ ಮಹಾರಾಜರು ಅವರಿಂದ ಶಾಸ್ತ್ರೋಕ್ತವಾಗಿ ಹವನಪೂಜೆ ಮಾಡಿಸಿಕೊಂಡರು. ಪುರುಷರಿಗೆ ಜನಿವಾರ ಹಾಕಿಕೊಳ್ಳಲು ಹೇಳಲಾಯಿತು. ಎಲ್ಲರನ್ನು ವಿಧಿವಿಧಾನಗಳಿಂದ ಶುದ್ಧೀಕರಿಸಲಾಯಿತು. ಇದರ ನಂತರ, ಕುಟುಂಬದ ಎಲ್ಲ ಸದಸ್ಯರಿಗೆ ಹಿಂದೂ ಹೆಸರುಗಳನ್ನು ಇಡಲಾಯಿತು ಮತ್ತು ಅವರನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಲಾಯಿತು. ಈ ಕುಟುಂಬದಲ್ಲಿ 7 ಮಹಿಳೆಯರು, 5 ಪುರುಷರು ಮತ್ತು 3 ಹುಡುಗಿಯರಿದ್ದಾರೆ. ಈ ಕುಟುಂಬವು ದಿನಗೂಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಈ ಕುಟುಂಬದ ಸದಸ್ಯರು, ‘18 ವರ್ಷಗಳ ನಂತರ ನಾವು ಹಿಂದೂ ಧರ್ಮಕ್ಕೆ ಮರಳಿದ್ದೇವೆ. ನಾವು ಭಯದಿಂದ ಇಸ್ಲಾಂ ಅನ್ನು ಸ್ವೀಕರಿಸಿದ್ದೆವು; ಆದರೆ ಈಗ ಸ್ವಇಚ್ಛೆಯಿಂದ ಮತ್ತೆ ಹಿಂದೂ ಧರ್ಮ ಸ್ವೀಕರಿಸಿದ್ದೇವೆ. ಈ ಬಗ್ಗೆ ನಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ’ ಎಂದು ಹೇಳಿದರು.