ಸಿ.ಆರ್.ಪಿ.ಎಫ್. ಸೈನಿಕನು ಸಹಸೈನಿಕರ ಮೇಲೆ ನಡೆಸಿದ ಗುಂಡು ಹಾರಾಟದಲ್ಲಿ 4 ಸೈನಿಕರು ಸಾವು ಹಾಗೂ ಮೂವರಿಗೆ ಗಾಯ

ಗುಂಡಿನ ದಾಳಿ ನಡೆಸಿರುವ ಸೈನಿಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ

ಸುಕಮಾ (ಛತ್ತೀಸಗಢ ) – ಸುಕ್ಮಾ ಜಿಲ್ಲೆಯ ಮರಾಯಿಗುಡಾದಲ್ಲಿನ ಲಿಂಗಾನಾಪಲ್ಲಿ ನೆಲೆಯಲ್ಲಿ ರಾತ್ರಿಯಂದು ಕೇಂದ್ರೀಯ ಮೀಸಲು ಪಡೆಯ (ಸಿ.ಆರ್.ಪಿ.ಎಫ್.ನ) ಸೈನಿಕನು ಸಹಸೈನಿಕರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಸೈನಿಕರು ಹತರಾಗಿದ್ದಾರೆ ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿರುವ ಸೈನಿಕನ ಹೆಸರು ರಿತೇಶ ರಂಜನ್ ಎಂದಾಗಿದೆ. ಈ ಸೈನಿಕನು ಮಾನಸಿಕ ಅಸ್ವಸ್ಥನಾಗಿದ್ದನು. ಆತನಿಂದ ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲಾಗಿತ್ತು. ಆತ ಮತ್ತೋರ್ವ ಸೈನಿಕನ ಶಸ್ತ್ರ ತೆಗೆದುಕೊಂಡು ಗುಂಡಿನ ದಾಳಿ ನಡೆಸಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ; ಆದರೆ ಇಲ್ಲಿಯವರೆಗೆ ಸಿ.ಆರ್.ಪಿ.ಎಫ್.ನಿಂದ ಈ ವಿಷಯವಾಗಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. (ಒಂದು ವೇಳೆ ಈ ಸೈನಿಕ ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ, ಆತನನ್ನು ಪಡೆಯಲ್ಲಿ ಏಕೆ ಇಟ್ಟುಕೊಳ್ಳಲಾಗಿತ್ತು ? ಎಂಬ ಪ್ರಶ್ನೆ ಉದ್ಭವಿಸುತ್ತದೆ – ಸಂಪಾದಕರು)