ರೈತರ ಜೊತೆ ಮಾತನಾಡುವ ಬದಲು ಅವರ ಮಾತು ಕೇಳುವುದು ಅಧಿಕ ಮಹತ್ವದ್ದಾಗಿದೆ !

ಕೇಂದ್ರ ಸರಕಾರವನ್ನು ಟೀಕಿಸಿದ ಭಾಜಪದ ಸಂಸದ ವರುಣ ಗಾಂಧಿ

ಲಖಿಮಪುರ ಖೀರಿ (ಉತ್ತರಪ್ರದೇಶ) – ರೈತರಿಗಾಗುವ ತೊಂದರೆಗಳನ್ನು ಅರ್ಥ ಮಾಡಿಕೊಳ್ಳಲು ಮಾತನಾಡುವ ಬದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೇಳುವ ಅವಶ್ಯಕತೆ ಇದೆ. ಅದಕ್ಕಾಗಿ ನಾನು ಸರಕಾರ ಎದುರು ಅಳದೆ, ಕಾನೂನು ಕ್ರಮ ಕೈಗೊಳ್ಳುವೆನು, ಎಂಬ ಪದಗಳಲ್ಲಿ ಉತ್ತರಪ್ರದೇಶದ ಪಿಲಿಭಿತ ಮತದಾನ ಕ್ಷೇತ್ರದ ಭಾಜಪದ ಸಂಸದ ವರುಣ ಗಾಂಧಿ ಇವರು ತಮ್ಮ ಪಕ್ಷದ ಕೇಂದ್ರ ಸರಕಾರವನ್ನುಟೀಕೆ ಮಾಡಿದ್ದಾರೆ. ‘ರೈತರ ಮೇಲೆ ಅನ್ಯಾಯವಾಗುತ್ತಿದೆ. ಹೇಗೆ ರೈತರು ಬೆಳೆಯನ್ನು ಬೆಳೆಸಲು ಖರ್ಚು ಮಾಡಿದ್ದಾರೆ, ಅದರ ತುಲನೆಯಲ್ಲಿ ಅವರ ಧಾನ್ಯಗಳ ಖರೀದಿಯಾಗುತ್ತಿಲ್ಲ ಮತ್ತು ಕಬ್ಬಿಗೂ ಯೋಗ್ಯವಾದ ಬೆಲೆ ನೀಡುತ್ತಿಲ್ಲ’, ಎಂದು ವರುಣ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.